ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಬದಲು 'ಭಾರತ', NCERT ಸಮಿತಿ ಶಿಫಾರಸು
2022ರ ಸಮಾಜ ವಿಜ್ಞಾನ ಸಮಿತಿಯು ಈ ಸಲಹೆಯನ್ನು ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ.ಸಿ.ಐ. ಐಸಾಕ್ ಹೇಳಿದ್ದಾರೆ.

ನವದೆಹಲಿ (ಅ.25): ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಫೋಕಸ್ ಗ್ರೂಪ್ ಎಲ್ಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾವನ್ನು 'ಭಾರತ್' ಎಂದು ಕರೆಯಬೇಕೆಂದು ಸಲಹೆ ನೀಡಿದೆ. 2022ರ ಸಮಾಜ ವಿಜ್ಞಾನ ಸಮಿತಿಯು ಈ ಸಲಹೆಯನ್ನು ಮಾಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ.ಸಿ.ಐ. ಐಸಾಕ್ ಹೇಳಿದ್ದಾರೆ. ಐಸಾಕ್ ಒಬ್ಬ ಇತಿಹಾಸಕಾರ ಮಾತ್ರವಲ್ಲದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಜಿ20 ಔತಣಕೂಟಕ್ಕೆ ಕಳುಹಿಸಲಾದ ಆಹ್ವಾನಗಳಲ್ಲಿ ಕೇಂದ್ರ ಸರ್ಕಾರವು "ಪ್ರೆಸಿಡೆಂಟ್ ಆಫ್ ಇಂಡಿಯಾ" ಬದಲಿಗೆ "ಪ್ರೆಸಿಡೆಂಟ್ ಆಫ್ ಭಾರತ್" ಎಂದು ಬಳಸಿತ್ತು. ಸೆಪ್ಟೆಂಬರ್‌ನಲ್ಲಿ ಇದು ದೇಶವ್ಯಾಪಿ ಚರ್ಚೆಯಾಗಿತ್ತು. ಚರ್ಚೆ ಎಲ್ಲಿಯವರೆಗೆ ಹೋಗಿತ್ತೆಂದರೆ ಸೆಪ್ಟೆಂಬರ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಇಂಡಿಯಾದ ಬದಲು ಭಾರತ್ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಕೊನೆಗೆ ಕೇಂದ್ರ ಸರ್ಕಾರ ಈ ಸುದ್ದಿಯನ್ನು ನಿರಾಕರಿಸಿತ್ತು. ಈಗ ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಪ್ರಸ್ತಾಪಿತ ಬದಲಾವಣೆಯನ್ನು ಮಾಡುವುದಾಗಿ ಶಿಫಾರಸು ಮಾಡಲಾಗಿದೆ.
ಈ ನಡುವೆ ಎನ್‌ಸಿಇಆರ್‌ಟಿ 3-12 ತರಗತಿಗಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನೊಂದಿಗೆ (NCF) “ಶಾಲಾ ಪಠ್ಯಕ್ರಮ, ಪಠ್ಯಪುಸ್ತಕಗಳು, ಬೋಧನೆ ಮತ್ತು ಕಲಿಕಾ ಸಾಮಗ್ರಿಗಳನ್ನು” ಜೋಡಿಸುವ ಜವಾಬ್ದಾರಿಯುತ 19-ಸದಸ್ಯ ಸಮಿತಿಯನ್ನು ಸ್ಥಾಪಿಸುವ ಮೂಲಕ ಹೊಸ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತವನ್ನು ಆರಂಭ ಮಾಡಿದೆ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾದ ಬಿಬೇಕ್ ಡೆಬ್ರಾಯ್, ಮಂಜುಲ್ ಭಾರ್ಗವ, ಆರ್‌ಎಸ್‌ಎಸ್-ಸಂಯೋಜಿತ ಸಂಸ್ಕೃತ ಭಾರತಿಯ ಸಂಸ್ಥಾಪಕ ಸದಸ್ಯ ಚಾಮು ಕೃಷ್ಣ ಶಾಸ್ತ್ರಿ, ಸುಧಾ ಮೂರ್ತಿ ಮತ್ತು ಗಾಯಕ ಶಂಕರ್ ಮಹದೇವನ್ ಇದ್ದಾರೆ.
ಸಮಿತಿಯ ಶಿಫಾರಸುಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. "ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ 'ಭಾರತ್' ಎಂಬ ಹೆಸರನ್ನು ಬಳಸಬೇಕೆಂದು ಸಮಿತಿಯು ಸರ್ವಾನುಮತದಿಂದ ಶಿಫಾರಸು ಮಾಡಿದೆ. ಪಠ್ಯಪುಸ್ತಕಗಳಲ್ಲಿ 'ಪ್ರಾಚೀನ ಇತಿಹಾಸ' ಬದಲಿಗೆ 'ಶಾಸ್ತ್ರೀಯ ಇತಿಹಾಸ'ವನ್ನು ಪರಿಚಯಿಸಲು ನಾವು ಶಿಫಾರಸು ಮಾಡಿದ್ದೇವೆ" ಎಂದು ಐಸಾಕ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಸಮಿತಿಯು ಪಠ್ಯಪುಸ್ತಕಗಳಲ್ಲಿ ವಿವಿಧ ಯುದ್ಧಗಳಲ್ಲಿ "ಹಿಂದೂ ವಿಜಯಗಳನ್ನು" ಹೈಲೈಟ್ ಮಾಡಲು ಶಿಫಾರಸು ಮಾಡಿದೆ ಎಂದು ಅವರು ಹೇಳಿದರು. "ನಮ್ಮ ವೈಫಲ್ಯಗಳನ್ನು ಪ್ರಸ್ತುತ ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮೊಘಲರು ಮತ್ತು ಸುಲ್ತಾನರ ಮೇಲೆ ನಮ್ಮ ವಿಜಯಗಳನ್ನು ಎಲ್ಲೂ ದಾಖಲು ಮಾಡಲಾಗಿಲ್ಲ" ಎಂದು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHR) ಸದಸ್ಯರೂ ಆಗಿರುವ ಐಸಾಕ್ ತಿಳಿಸಿದ್ದಾರೆ.
ಬೆಡ್ ಮೇಲೆ ಬಿದ್ದ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡ ಬಿಗ್ ಬಾಸ್ ನಟಿ!
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿ NCERT ಶಾಲಾ ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿರುವುದರಿಂದ ಈ ಶಿಫಾರಸು ಬಂದಿದೆ. ಪಠ್ಯಕ್ರಮ, ಪಠ್ಯಪುಸ್ತಕಗಳನ್ನು ಅಂತಿಮಗೊಳಿಸಲು ಕೌನ್ಸಿಲ್ ಇತ್ತೀಚೆಗೆ 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯನ್ನು (NSTC) ರಚಿಸಿದೆ. 5ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಈ ಮಾಹಿತಿ ಲಭ್ಯವಾಗಲಿದೆ.
'ವೇಶ್ಯಾವಾಟಿಕೆ ಕೂಲ್ ಪ್ರೊಫೆಶನ್..' ಎಂದ ವಿದೂಷಿ ಸ್ವರೂಪ್, ಸೋಶಿಯಲ್ ಮೀಡಿಯಾದಲ್ಲಿ ಶುರು ಜಟಾಪಟಿ!