ನಕ್ಸಲ್ ಪೀಡಿತ ಛತ್ತೀಸ್‌ಗಢದ ದಂತೇವಾಡಾ ಜಿಲ್ಲೆಯಲ್ಲಿ ಬುಧವಾರ ಮಾವೋವಾದಿಗಳ ದಾಳಿಗೆ 10 ಪೊಲೀಸರು ಮೃತಪಟ್ಟಿದ್ದು, ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿಯೊಬ್ಬರು ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ರಾಯ್‌ಪುರ: ನಕ್ಸಲ್ ಪೀಡಿತ ಛತ್ತೀಸ್‌ಗಢದ ದಂತೇವಾಡಾ ಜಿಲ್ಲೆಯಲ್ಲಿ ಬುಧವಾರ ಮಾವೋವಾದಿಗಳ ದಾಳಿಗೆ 10 ಪೊಲೀಸರು ಮೃತಪಟ್ಟಿದ್ದು, ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿಯೊಬ್ಬರು ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳ, ಗನ್‌ಶಾಟ್, ಆಕ್ರಂದನದ ದೃಶ್ಯವಿರುವ ವಿಡಿಯೋ ಘಟನೆಯ ಭೀಕರತೆಯನ್ನು ಸಾರುತ್ತಿದೆ. ಘಟನೆ ಬಳಿಕ ಪೊಲೀಸರು ನಕ್ಸಲರ ವಿರುದ್ಧ ಮರುದಾಳಿ ನಡೆಸುತ್ತಿರುವ ವಿಡಿಯೋ ಇದಾಗಿದ್ದು, ಇದನ್ನು ಸ್ಥಳದಲ್ಲಿದ್ದ ಇನ್ನೊಬ್ಬ ಪೊಲೀಸ್ ಪೇದೆ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ನಮ್ಮ ವಾಹನ (Police vehicle) ಸಂಪೂರ್ಣ ನಾಶವಾಗಿದೆ. ಏನೂ ಉಳಿದಿಲ್ಲ ಎಂದು ಒಬ್ಬ ಪೇದೆ ಹೇಳುತ್ತಿರುವುದು ಮತ್ತು ಗನ್‌ಶಾಟ್‌ಗಳ ಸದ್ದು ವಿಡಿಯೋದಲ್ಲಿ ಕೇಳಿಸುತ್ತದೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಪೊಲೀಸ್ ಸಿಬ್ಬಂದಿ, ಯಾರೂ ಜೀವಂತ ಉಳಿದಿಲ್ಲ. ಎಲ್ಲರೂ ಮೃತಪಟ್ಟಿದ್ದಾರೆ. ದಾಳಿ ವೇಳೆ ನಮ್ಮ ವಾಹನ 100-150 ಮೀ. ದೂರದಲ್ಲಿತ್ತು ಎಂದಿದ್ದಾರೆ.
'ಭಯೋತ್ಪಾದಕ ಕಾರ್ಯಗಳಿಗೆ ದೇಹಕ್ಕಿಂತ, ಬುದ್ಧಿಯೇ ಮುಖ್ಯ..', ಜಿಎನ್ ಸಾಯಿಬಾಬಾ ಬಿಡುಗಡೆಗೆ ಸುಪ್ರೀಂ ತಡೆ!
ಪಾನ್ ಚಟ ನನ್ನನ್ನು ಬದುಕಿಸಿತು: ಚಾಲಕ
ದಾಳಿಗೆ ತುತ್ತಾದ ವಾಹನದ ಹಿಂದಿನಿಂದ ಬರುತ್ತಿದ್ದ ಮತ್ತೊಂದು ವಾಹನದ ಚಾಲಕ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವತ್ತೂ ಮರೆಯಲಾಗದ ಘಟನೆ ಎಂದಿದ್ದಾರೆ. ಬಹುಶ ನಮ್ಮ ವಾಹನವೇ ನಕ್ಸಲರ ಗುರಿಯಾಗಿತ್ತು. ಆದರೆ ಪಾನ್ (Pan) ತಿನ್ನಲೆಂದು ವಾಹನ ನಿಧಾನವಾಗಿ ಚಲಾಯಿಸಿದ್ದರಿಂದ ಇನ್ನೊಂದು ವಾಹನ ಮುಂದೆ ಸಾಗಿತು. ಅದರ ಮೇಲೆ ನಮ್ಮ ಕಣ್ಣೆದುರಲ್ಲೇ ದಾಳಿ ನಡೆಯಿತು. ಬಳಿಕ ನಮ್ಮ ವಾಹನದಲ್ಲಿದ್ದ ಪೊಲೀಸರು ಪ್ರತಿದಾಳಿ ನಡೆಸಿದರು ಎಂದು ಹೇಳಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಸಿಎಂ ಭಾಗಿ
ಮೃತ ಪೊಲೀಸರ ಅಂತ್ಯಕ್ರಿಯೆ ಗುರುವಾರ ನಡೆದಿದ್ದು, ಛತ್ತೀಸ್‌ಗಢ ಮುಖ್ಯಮಂತ್ರಿ (Cm Baghel) ಬಘೇಲ್ ಕೂಡಾ ಪಾಲ್ಗೊಂಡರು. ಅಲ್ಲದೇ ಪೊಲೀಸರೊಬ್ಬರ ಶವಪೆಟ್ಟಿಗೆ ಸಾಗಿಸಲು ಬಘೇಲ್ ಅವರು ಹೆಗಲು ಕೊಟ್ಟರು. ನಮ್ಮ ಜವಾನರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ನಕ್ಸಲರನ್ನು ಮಟ್ಟಹಾಕಿಯೇ ಸಿದ್ಧ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ
