ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ

ಮಾವೋವಾದಿಗಳ ದಾಳಿಗೆ 10 ಜನ ಮೀಸಲು ಪೊಲೀಸ್‌ ಪಡೆಯನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಐಇಡಿ ಸ್ಫೋಟ ನಡೆಸಿ ನಕ್ಸಲರು ಈ ಬರ್ಬರ ಕೃತ್ಯ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.

more than 10 reserve guard jawans martyred in naxal attack ied blast in dantewada chhattisgarh ash

ದಾಂತೆವಾಡಾ (ಏಪ್ರಿಲ್ 26, 2023):  ಛತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, 10 ಜವಾನರು ಹುತಾತ್ಮರಾಗಿದ್ದಾರೆ, ಅಲ್ಲದೆ ಈ ಘಟನೆಯಲ್ಲಿ ಒಬ್ಬರು ಚಾಲಕರೂ ಬಲಿಯಾಗಿದ್ದಾರೆ. ದಾಂತೆವಾಡಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ನಡೆಸಿ ನಕ್ಸಲರು 10 ಜನ ಮೀಸಲು ಪೊಲೀಸ್‌ ಪಡೆಯನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸ್‌ ಹೋಗುತ್ತಿದ್ದಾಗ ಈ ಬರ್ಬರ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 10 ಜನ ಜವಾನರು ಹಾಗೂ ಚಾಲಕ ಸೇರಿ 11 ಜನ ವಾಹನದಲ್ಲಿ ಹೋಗುತ್ತಿದ್ದಾಗ ಸಂಪೂರ್ಣ ವಾಹನವನ್ನೇ ಸ್ಪೋಟಿಸಿದ್ದಾರೆ ಎಂದು ತಿಳಿದುಬಬಂದಿದೆ. ಛತ್ತೀಸ್‌ಗಢದ ದಾಂತೆವಾಡಾ ಜಿಲ್ಲೆಯ ಅರಣ್‌ಪುರ ಬಳಿ ಗುರುವಾರ ಈ ಘಟನೆ ನಡೆದಿದೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಇವರು ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದರು.

ಇನ್ನು, ಈ ಘಟನೆ ಬಗ್ಗೆ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಟ್ವೀಟ್‌ ಮಾಡಿದ್ದು, ‘’10 ಜನ ಡಿಆರ್‌ಜಿ (ಜಿಲ್ಲಾ ಮೀಸಲು ಗಾರ್ಡ್‌) ಸಿಬ್ಬಂದಿ ಹಾಗೂ ಒಬ್ಬರು ಚಾಲಕ ಸೇರಿ 11 ಜನರು ನಕ್ಸಲರ ದಾಳಿಯಲ್ಲಿ ಬಲಿಯಾಗಿದ್ದಾರೆ’’ ಎಂದು ತಿಳಿಸಿದ್ದಾರೆ. ಅಲ್ಲದೆ, ಅಂತಹ ಮಾಹಿತಿಯು ನಮ್ಮ ಬಳಿ ಇದೆ. ಇದು ತುಂಬಾ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಹೋರಾಟ ಕೊನೆಯ ಹಂತದಲ್ಲಿದೆ. ನಕ್ಸಲರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. 
 

ಇನ್ನು, ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದಾಂತೇವಾಡ ನಕ್ಸಲ್ ದಾಳಿ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್‌ಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ ಎಂದು ಈ ಸಂಬಂಧ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿವೆ.

ಛತ್ತೀಸ್‌ಗಢ ವಿಶೇಷ ಪೊಲೀಸ್‌ ಘಟಕದ ಜಿಲ್ಲಾ ಮೀಸಲು ಗಾರ್ಡ್‌ (ಡಿಆರ್‌ಜಿ)ಗೆ ಸೇರಿದ ಜವಾನರು ಇವರು ಎಂದು ತಿಳಿದುಬಂದಿದೆ. ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲು ಬಹುತೇಕ ಸ್ಥಳೀಯ ಬುಡಕಟ್ಟು ಜನರಿಗೆ ತರಬೇತಿ ನೀಡಿ ಈ ರೀತಿ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದೂ ತಿಳಿದುಬಂದಿದೆ. 

1967 ರಿಂದ ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆ ಎಂದು ಪರಿಗಣಿಸಲ್ಪಟ್ಟ ನಕ್ಸಲರ ಗುಂಪು ಮಧ್ಯ ಮತ್ತು ಪೂರ್ವ ಭಾರತದಲ್ಲಿನ ವಿಶಾಲವಾದ ಭೂಪ್ರದೇಶದ ಮೇಲೆ ನಿಯಂತ್ರಣವನ್ನು ಪ್ರತಿಪಾದಿಸುತ್ತಿರುತ್ತದೆ.  ಈ ಪ್ರದೇಶವನ್ನು "ಕೆಂಪು ಕಾರಿಡಾರ್" ಎಂದು ಕರೆಯಲಾಗುತ್ತದೆ. ಅವರು ದಟ್ಟವಾದ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಭಾರತೀಯ ಆಡಳಿತ ಹಾಗೂ ಪಡೆಗಳ ವಿರುದ್ಧ ತೀವ್ರ ರಹಸ್ಯವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಸ್ಥಳೀಯರಿಗೆ ಒಮ್ಮೊಮ್ಮೆ ಮಾಹಿತಿ ಇದ್ರೂ ಬೆದರಿಕೆಯಿಂದ ಹಾಗೂ ಅವರಿಗೆ ಹಣ ಮುಂತಾದ ಅಗತ್ಯ ಸಾಮಗ್ರಿಗಳನ್ನು ನೀಡಿ ಅವರು ಬಾಯ್ಬಿಡದಂತೆ ನೋಡಿಕೊಳ್ಳುತ್ತಾರೆ. 

Latest Videos
Follow Us:
Download App:
  • android
  • ios