ನವರಾತ್ರಿ ಗರ್ಬಾ ನೃತ್ಯದಲ್ಲಿ ಲವ್ ಜಿಹಾದ್ ತಡೆಗೆ ಹೊಸ ನೀತಿ; ತಿಲಕ, ಆಧಾರ್ ಕಾರ್ಡ್ ಕಡ್ಡಾಯ!

ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನವರಾತ್ರಿಯ ಗರ್ಬಾ ನೃತ್ಯ ಸಂಭ್ರಮದಲ್ಲಿ ಲವ್ ಜಿಹಾದ್ ಸೇರಿದಂತೆ ಅಹಿತಕರ ಘಟನೆ ತಡೆಯಲು ಹೊಸ ನೀತಿ ಜಾರಿಗೊಳಿಸಲಾಗಿದೆ. ಗರ್ಬಾ ನೃತ್ಯದಲ್ಲಿ ಪಾಲ್ಗೊಳುವ ಯುವಕರು, ಪುರುಷರು ಹಣೆಗೆ ತಿಲಕ ಇಟ್ಟಿರಬೇಕು. ಜೊತೆಗೆ ಆಧಾರ್ ಕಾರ್ಡ್ ತೋರಿಸಿ ತಾನು ಹಿಂದೂ ಎಂದು ಖಾತ್ರಿಪಡಿಸಿದರೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. 

Navratri Festival Ujjaini ban non hindu for Garba to prevent Love jihad aadhar card Tilak mandatory for entry ckm

ಉಜ್ಜೈನಿ(ಅ.18) ನವರಾತ್ರಿ ಹಬ್ಬ ಸಂಭ್ರಮದಿಂದ ಆಚರಿಸಲಾಗತ್ತಿದೆ. ಭಾರತದ ಉತ್ತರದಲ್ಲಿ ನವರಾತ್ರಿಗೆ ಗರ್ಬಾ ನೃತ್ಯ ಅತ್ಯಂತ ವಿಶೇಷ ಹಾಗೂ ಮಹತ್ವದ್ದಾಗಿದೆ. ಸಾರ್ವಜನಿಕ ಗರ್ಬಾ ನೃತ್ಯ ಆಯೋಜಿಸಲಾಗುತ್ತದೆ. ಲಕ್ಷಾಂತರ ಭಕ್ತರು ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕಳೆದ ಹಲವು ವರ್ಷಗಳಿಂದ  ಈ ಸಾರ್ವಜನಿಕವಾಗಿ ಆಯೋಜಿಸುವ ಗರ್ಬಾ ನೃತ್ಯದಲ್ಲಿ ಹಿಂದೂಯೇತರ ಯುವಕರು ಪಾಲ್ಗೊಳ್ಳುತ್ತಿದ್ದಾರೆ ಅನ್ನೋ ಆರೋಪವಿದೆ. ಇಷ್ಟೇ ಅಲ್ಲ ಇದರ ಪರಿಣಾಮ ಅಹಿತಕರ ಘಟನೆಗಳು ನಡೆದ ಉದಾಹರಣೆಗಳೂ ಇವೆ. ಹೀಗಾಗಿ ಈ ಬಾರಿಯ ಗರ್ಬಾ ನೃತ್ಯ ಆಯೋಜಕರಿಗೆ ಕೆಲ ಹಿಂದೂ ಸಂಘಟೆಗಳು, ಹಿಂದೂ ಧಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದ್ದರು. ಇದರ ಪರಿಣಾಮ ಈ ಬಾರಿ ಉಜ್ಜೈನಿಯಲ್ಲಿ ಹೊಸ ನೀತಿ ಜಾರಿಗೊಳಿಸಲಾಗಿದೆ. ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳಲು ಯುವಕರು ಹಣೆಗೆ ತಿಲಕ ಇಟ್ಟಿರಲೇಬೇಕು. ಜೊತೆಗೆ ಆಧಾರ್ ಕಾರ್ಡ್ ತೋರಿಸಿ ಅದೇ ಪ್ರದೇಶದ, ಹಿಂದೂ ಎಂದು ಖಾತ್ರಿ ಪಡಿಸಿದರೆ ಮಾತ್ರ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ಗರ್ಬಾ ನೃತ್ಯ ನವರಾತ್ರಿ ಹಬ್ಬದ ಭಾಗವಾಗಿದೆ. ಇದು ಹಿಂದೂಗಳ ಆಚರಣೆ. ಇದುವರೆಗೂ ಇತರ ಮತಗಳ ಜನರು ಪಾಲ್ಗೊಳ್ಳುತ್ತಿದ್ದರು. ಆದರೆ ಲವ್ ಜಿಹಾದ್ ಸೇರಿದಂತೆ ಹಲವು ಅಹಿತಕರ ಘಟನೆಗಳು ಸಂಭವಿಸಿದೆ. ಹೀಗಾಗಿ ಈ ಬಾರಿಯಿಂದ ಗರ್ಬಾ ನೃತ್ಯದಲ್ಲಿ ಹಿಂದೂಯೇತರ ವ್ಯಕ್ತಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಲವ್ ಜಿಹಾದ್ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಜ್ಜೈನಿಯ ಗರ್ಬಾ ಆಯೋಜಕರು ಹೇಳಿದ್ದಾರೆ.

 

ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್‌ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್‌ ಗೇಲ್..! ವಿಡಿಯೋ ವೈರಲ್‌

ಸಂಕಲ್ಪ ಸಂಸ್ಕೃತಿ ಸಂಸ್ಥೆ ಉಜ್ಜೈನಿಯಲ್ಲಿ ಅತೀ ದೊಡ್ಡ ಗರ್ಬಾ ನೃತ್ಯ ಆಯೋಜಿಸಿದೆ. ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುವ ಹೆಣ್ಣುಮಕ್ಕಳ ಸುರಕ್ಷತೆ ನಮ್ಮ ಜವಾಬ್ದಾರಿ. ಹೀಗಾಗಿ ಕೆಲ ನೀತಿಗಳನ್ನು ಜಾರಿಗೊಳಿಸಿದ್ದೇವೆ. ಹಿಂದೂ ಹೆಣ್ಣುಮಕ್ಕಳ ಭವಿಷ್ಯದಲ್ಲಿ ಗರ್ಬಾ ನತ್ಯ ಕಪ್ಪು ಚುಕ್ಕೆ ಆಗಬಾರದು. ಗರ್ಬಾ ಕೇವಲ ನೃತ್ಯವಲ್ಲ ಭಗವಂತನ ಆರಾಧನೆಯಲ್ಲಿ ಒಂದು ಮಾರ್ಗ. ಕುಟುಂಬ ಸಮೇತ ಒಂದಾಗಿ, ವೈಷಮ್ಯ ಮರೆತು ಮಾ ದುರ್ಗೆಯ ಸ್ಮರಣೆ ಮಾಡುವುದಾಗಿದೆ. ಇಲ್ಲಿ ಇತರ ಪಂಥಗಳ ಜನರು ದುರ್ಗೆಯ ಆರಾಧನೆ, ನವರಾತ್ರಿ ಆರಾಧನೆ ಮಾಡುವುದಿಲ್ಲ. ಇಷ್ಟೇ ಅಲ್ಲ ಹಿಂದೂಯೇತರರು ಆಗಮಿಸಿ ಲವ ಜಿಹಾದ್ ಸೇರಿದಂತೆ ಹಲವು ಇತರ ಅಹಿತಕರ ಘಟನೆಗೆ ಕಾರಣರಾಗುತ್ತಿದ್ದಾರೆ ಎಂದು ಸಂಕಲ್ಪ ಸಂಸ್ಕೃತಿ ಸಂಸ್ಥೆ ಹೇಳಿದೆ.

ಆಯೋಜಕ ಸದಸ್ಯರು ಪ್ರವೇಶ ದ್ವಾರದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಮಾಡಲಿದ್ದಾರೆ. ಆಧಾರ್ ಕಾರ್ಡ್ ನಕಲಿ ಮಾಡಿದರೂ ಪತ್ತೆ ಹಚ್ಚಲಾಗುತ್ತದೆ. ಹೀಗಾಗಿ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಹಣೆಗೆ ತಿಲಕ ಇಟ್ಟಿರಬೇಕು. ತಿಲಕ ಇಡಲು ನಿರಾಕರಿಸುವ ವ್ಯಕ್ತಿಗೆ ಮಾ ದುರ್ಗೆಯ ಆರಾಧಿಸುವುದಿಲ್ಲ. ಹೀಗಾಗಿ ತಿಲಕ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

 ಗರ್ಭಾ ಡ್ಯಾನ್ಸ್ ನೋಡೋಕಷ್ಟೆ ಚೆಂದ ಅಲ್ಲ..ಆರೋಗ್ಯಕ್ಕೂ ಒಳ್ಳೇದು

ಅಕ್ಟೋಬರ್ 7 ರಂದು ವಿಶ್ವ ಹಿಂದೂ ಪರಿಷತ್ ಉತ್ತರ ಭಾರತದಲ್ಲಿನ ಸಾರ್ವಜನಿಕ ಗರ್ಬಾ ನೃತ್ಯ ಆಯೋಜನೆ ವೇಳೆ ಹಿಂದೂಯೇತರು ಪ್ರವೇಶ ಮಾಡದಂತೆ ಎಚ್ಚರ ವಹಿಸಲು ಸೂಚಿಸಿತ್ತು. ಹಿಂದೂ ಹೆಣ್ಣುಮಕ್ಕಳ ಸುರಕ್ಷತೆ ಜವಾಬ್ದಾರಿ ಆಯೋಜರದ್ದಾಗಿದೆ. ಹೀಗಾಗಿ ಆಧಾರ್ ಕಾರ್ಡ್ ತಂದು ಖಾತ್ರಿ ಪಡಿಸಿದ ಬಳಿಕವೇ ಪ್ರವೇಶ ನೀಡಬೇಕು ಎಂದು ಸೂಚಿಸಿತ್ತು.
 

Latest Videos
Follow Us:
Download App:
  • android
  • ios