Asianet Suvarna News Asianet Suvarna News

ಕಾಶ್ಮೀರ್ ಫೈಲ್ಸ್‌ಗೆ ಪ್ರಶಸ್ತಿ ನೀಡಿದ್ದಕ್ಕೆ ಒಮರ್ ಅಬ್ದುಲ್ಲಾ ಕುಹಕ: ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್‌ಗೂ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿದೆ. ಆದರೆ ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಇದಕ್ಕೆ ವ್ಯಂಗ್ಯವಾಡಿದ್ದಾರೆ. ಈ ವ್ಯಂಗ್ಯಕ್ಕೆ  ಕಾಶ್ಮೀರ್ ಫೈಲ್ಸ್‌ ನಿರ್ದೇಶಕರೂ ಕೂಡ ಸರಿಯಾಗಿ ತಿರುಗೇಟು ನೀಡಿದ್ದಾರೆ. 

national integration award to Kashmir Files movie Kashmir Former CM Omar Abdullah laughing on it but vivek agnihotri hits back omar akb
Author
First Published Aug 25, 2023, 12:14 PM IST

ಶ್ರೀನಗರ: 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನಿನ್ನೆ ಪ್ರಕಟವಾಗಿದ್ದು ಕನ್ನಡದ ಚಾರ್ಲಿ ಸಿನಿಮಾ ಸೇರಿದಂತೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್‌ಗೂ ಪ್ರಶಸ್ತಿ ದೊರಕಿದೆ. ಆದರೆ ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಇದಕ್ಕೆ ವ್ಯಂಗ್ಯವಾಡಿದ್ದಾರೆ. ಈ ವ್ಯಂಗ್ಯಕ್ಕೆ  ಕಾಶ್ಮೀರ್ ಫೈಲ್ಸ್‌ ನಿರ್ದೇಶಕರೂ ಕೂಡ ಸರಿಯಾಗಿ ತಿರುಗೇಟು ನೀಡಿದ್ದಾರೆ. 

ನಿನ್ನೆ ಕೇಂದ್ರ ಸರ್ಕಾರ 69ನೇ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟ ಮಾಡಿತ್ತು, ಇದರಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್‌ಗೆ ರಾಷ್ಟ್ರೀಯ ಐಕ್ಯತೆಯ ಅತ್ಯುತ್ತಮ ಚಲನಚಿತ್ರ ಎಂದು ನರ್ಗಿಸ್ ದತ್‌ ಪ್ರಶಸ್ತಿ (Nargis Dutt award) ನೀಡಲಾಯಿತು. ಕಾಶ್ಮೀರಿ ಪಂಡಿತರ (Kashmir Pandits) ಬವಣೆಯನ್ನು ದೇಶಕ್ಕೆ ತೆರೆದಿಟ್ಟ ಕಾಶ್ಮೀರ ಫೈಲ್ಸ್‌ಗೆ ಈ ಪ್ರಶಸ್ತಿ ನೀಡಿರುವುದು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರಿಗೆ ಇರಿಸುಮುರಿಸು ತಂದಿದ್ದು ಅವರು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ. ವ್ಯಂಗ್ಯವಾಗಿ ಅವರು ಕಾಶ್ಮೀರ ಫೈಲ್ಸ್‌ಗೆ ರಾಷ್ಟ್ರೀಯ ಏಕತೆಯ ಅತ್ಯುತ್ತಮ ಸಿನಿಮಾ ಎಂದು ಪ್ರಶಸ್ತಿ ನೀಡಿರುವುದನ್ನು ಟೀಕಿಸಿದ್ದಾರೆ. 

ಪ್ರಭಾಸ್ ಮೇಲೆ ಗೌರವಿದೆ, ದಯವಿಟ್ಟು ನನ್ನನ್ನು ಬಿಟ್ಬಿಡಿ; ವಿವೇಕ್ ಅಗ್ನಿಹೋತ್ರಿ ಮನವಿ

ಸುದ್ದಿಸಂಸ್ಥೆ ಪಿಟಿಐ ಟ್ವಿಟ್‌ನ ಶೇರ್ ಮಾಡಿದ ಒಮರ್ ಅಬ್ದುಲ್ಲಾ (Omar Abdullah) ಟ್ವಿಟ್ಟರ್‌ನಲ್ಲಿ ನಗುವಿನ ಇಮೋಜಿ ಹಾಕಿ ನ್ಯಾಷನಲ್ ಇಂಟಿಗ್ರೇಷನ್ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಇವರ ಟ್ವಿಟ್ಟಗೆ ಕೂಡಲೇ ಪ್ರತಿಕ್ರಿಯಿಸಿರುವ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಇದು ನಿಮ್ಮಿಂದ ನನಗೆ ಬರುತ್ತಿರುವ ಅತ್ಯಂತ ದೊಡ್ಡ ಪ್ರಶಸ್ತಿ ಒಂದು ವೇಳೆ ನೀವು ಕಾಮೆಂಟ್ ಮಾಡಿಲ್ಲದಿದ್ದರೆ ನನಗೆ ಬೇಸರವಾಗುತ್ತಿತ್ತು ಎಂದು ವಿವೇಕ್ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ 69ನೇ ಆವೃತ್ತಿಯ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ ಅನ್ನು ಪ್ರಕಟಿಸಿತ್ತು 31 ಪ್ರಶಸ್ತಿಗಳನ್ನು ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಹಾಗೂ 24 ಪ್ರಶಸ್ತಿಗಳನ್ನು ನಾನ್‌ ಫೀಚರ್‌ ವಿಭಾಗದಲ್ಲಿ ನೀಡಲಾಗುತ್ತದೆ. 2021ರ ಸಾಲಿನ ಪ್ರಶಸ್ತಿಗಳು ಇದಾಗಿದೆ. 2021ರ ಫೀಚರ್‌ ಫಿಲ್ಮ್‌ ವಿಭಾಗದಲ್ಲಿ 28 ಭಾಷೆಗಳಿಂದ 285 ಸಿನಿಮಾಗಳು ಎಂಟ್ರಿಯಾಗಿದ್ದರೆ, ನಾನ್‌ ಫೀಚರ್‌ ವಿಭಾಗದಲ್ಲಿ 23 ಭಾಷೆಗಳಿಂದ 158 ಎಂಟ್ರಿಗಳು ಬಂದಿದ್ದವು. 

ನಕ್ಸಲ್​ ಆಗಿದ್ರಂತೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ! ಶಾಕಿಂಗ್​ ಸತ್ಯ ಬಿಚ್ಚಿಟ್ಟ ವಿವೇಕ್​ ಅಗ್ನಿಹೋತ್ರಿ

ಇನ್ನು ಕಾಶ್ಮೀರ ಫೈಲ್ಸ್‌ ಸಿನಿಮಾ ವಿಜೇತ ಲಿಸ್ಟ್‌ನಲ್ಲಿರುವ ವಿಚಾರ ತಿಳಿದ ಕೂಡಲೇ ಅಮೆರಿಕಾದಲ್ಲಿದ್ದ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ವೀಡಿಯೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದರು, ನಾನು ಅಮೆರಿಕಾದಲ್ಲಿದ್ದೇನೆ. ಕಾಶ್ಮೀರ ಫೈಲ್ಸ್‌ಗೆ 69 ನೇ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ ಎಂಬ ವಿಚಾರ ಖುಷಿ ನೀಡಿತು. ಇದು ನಮ್ಮ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ನಾನು ಕಾಶ್ಮೀರ ಫೈಲ್ಸ್‌ (The Kashmir Files) ಸಿನಿಮಾ ನನ್ನದು ಮಾತ್ರವಲ್ಲ ಎಂದು ಯಾವಾಗಲೂ ಹೇಳುತ್ತಿದೆ. ಇದು ಕಣಿವೆ ನಾಡು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಯಾದ ಪ್ರತಿಯೊಬ್ಬ ಕಾಶ್ಮೀರಿಯ ಸಿನಿಮಾವಾಗಿದೆ. ಇದು ಭಯೋತ್ಪಾದನೆಯನ್ನು ಎದುರಿಸಿದ ಕಾಶ್ಮೀರಿಗಳ ದುಃಸ್ಥಿತಿಯ ಧ್ವನಿಯಾಗಿದೆ. ಹಾಗೆಯೇ ಅವರ ನೋವನ್ನು ಇಡೀ ದೇಶಕ್ಕೆ ಹಂಚಿಕೊಂಡ  ಒಂದು ಮಾಧ್ಯಮವಾಗಿದೆ ಈ ಸಿನಿಮಾ ಈ ಸಿನಿಮಾವನ್ನು ನಾನು ಭಯೋತ್ಪಾದನೆಗೆ ಬಲಿಯಾದ ಎಲ್ಲಾ ಸಂತ್ರಸ್ತರಿಗೆ ಅರ್ಪಿಸುತ್ತೇನೆ ಎಂದು  ವಿವೇಕ್ ಅಗ್ನಿಹೋತ್ರಿ ಹೇಳಿದ್ದರು. 

 

 

Follow Us:
Download App:
  • android
  • ios