Asianet Suvarna News Asianet Suvarna News

ನಕ್ಸಲ್​ ಆಗಿದ್ರಂತೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ! ಶಾಕಿಂಗ್​ ಸತ್ಯ ಬಿಚ್ಚಿಟ್ಟ ವಿವೇಕ್​ ಅಗ್ನಿಹೋತ್ರಿ

ನಕ್ಸಲ್​ ಹಾಗೂ ಎಡಪಂಥೀಯರಾಗಿದ್ದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಬದಲಾದದ್ದು ಹೇಗೆ? ಅವರು ಹೇಳಿದ್ದೇನು? 
 

I have been a Naxal  and a leftist says kashmir files director Vivek Agnihotri suc
Author
First Published Jul 26, 2023, 5:30 PM IST

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಕಳೆದೊಂದು ವರ್ಷದಿಂದ ಸಕತ್​ ಸುದ್ದಿಯಲ್ಲಿರುವ ನಿರ್ದೇಶಕ. ಇದಕ್ಕೆ ಕಾರಣ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ವಿವಾದ. ಕಾಶ್ಮೀರ ಪಂಡಿತರ ಹತ್ಯೆಯ ಕುರಿತ ಸತ್ಯ ಘಟನೆ ಆಧರಿತ ಈ ಚಿತ್ರವನ್ನು ಒಂದು ವರ್ಗ ಸಹಿಸಲಿಲ್ಲ. ಇದೇ ಕಾರಣಕ್ಕೆ ಚಿತ್ರದ ಕುರಿತು ಬಹಳ ವಿವಾದ ಸೃಷ್ಟಿಸಲಾಗಿತ್ತು. ಇದರ ಹೊರತಾಗಿಯೂ ಚಿತ್ರವು ಬ್ಲಾಕ್​ಬಸ್ಟರ್ ಎನಿಸಿಕೊಂಡಿತು. ಈ ಚಿತ್ರಕ್ಕಿಂತ ಮೊದಲು ವಿವೇಕ್​ ಅಗ್ನಿಹೋತ್ರಿಯವರು ಸಕತ್​ ಹಿಟ್​ ಸಿನಿಮಾಗಳನ್ನು ನೀಡಿದ್ದರೂ ಇವರು ಖ್ಯಾತಿ ಗಳಿಸಿದ್ದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಳಿಕ. ಇದಾದ ಮೇಲೆ ಬಲಪಂಥೀಯಕ್ಕೆ ಸಂಬಂಧಿಸಿದಂತೆ ಇವರು ಹಲವಾರು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’  ಚಿತ್ರ ನೋಡಿದ ಮೇಲೆ ಇವರು ಬಲಪಂಥೀಯರು ಎಂದು ಎಲ್ಲರಿಗೂ ಸಹಜವಾಗಿಯೇ ತಿಳಿದುಬರುತ್ತದೆ. ಏಕೆಂದರೆ ಈ ಚಿತ್ರ ಬಿಜೆಪಿ ಬೆಂಬಲಿತರಿಂದ ಸಿದ್ಧವಾದ ಸಿನಿಮಾ ಎನ್ನುವ ಮಾತುಗಳಿವೆ.  ಆದರೆ ಅಚ್ಚರಿಯ ವಿಷಯವೇನೆಂದರೆ ವಿವೇಕ್​ ಅಗ್ನಿಹೋತ್ರಿಯರು ಈ ಮೊದಲು ನಕ್ಸಲ್​ ಆಗಿದ್ದರಂತೆ!

ಹೌದು. ಈ ಸತ್ಯವನ್ನು ವಿವೇಕ್ ಅವರು ಬಿಚ್ಚಿಟ್ಟಿದ್ದಾರೆ. ಮೊದಲು ತಾವು ಬಲಪಂಥೀಯರಾಗಿರಲಿಲ್ಲ ಎಂದಿರುವ ವಿವೇಕ್​ ಅಗ್ನಿಹೋತ್ರಿಯವರು,  ‘ಅರ್ಬನ್ ನಕ್ಸಲ್’ (Urbon Naxal) ಹೆಸರಿನ ಪುಸ್ತಕ ಕೂಡ ಬರೆದಿರುವುದಾಗಿ ತಿಳಿಸಿದ್ದಾರೆ.  ಹಾಗಿದ್ದರೆ ವಿವೇಕ್​ ಅವರ ಹಿನ್ನೆಲೆ ಏನು? ಅವರು ಇಷ್ಟೊಂದು ಬದಲಾಗಲು ಕಾರಣವೇನು? ಎಡಪಂಥೀಯವನ್ನು ಫಾಲೋ ಮಾಡಿದ್ದ ವಿವೇಕ್​ ಅವರು ಏಕಾಏಕಿ ಬಲಪಂಥಕ್ಕೆ ಬಂದಿದ್ದು ಹೇಗೆ ಕೆಲ ವರ್ಷಗಳ ಹಿಂದೆ ಹಂಗಾಮಾ ಸೃಷ್ಟಿಸಿದ್ದ ಜೆಎನ್​ಯು ಬಗ್ಗೆ  ವಿವೇಕ್​ ಅಗ್ನಿಹೋತ್ರಿ ಹೇಳಿದ್ದೇನು? ತಮ್ಮ ವಿಚಾರಧಾರೆಯನ್ನು ಬದಲಿಸಿಕೊಂಡದ್ದು ಹೇಗೆ ಎಂಬ ಬಗ್ಗೆ ಅವರ ಮಾತಿನಲ್ಲಿಯೇ ಕೇಳಬಹುದು. 

ಗಂಡ್ಸೇ ಆಗಿದ್ರೆ 'ಮಣಿಪುರ್ ಫೈಲ್ಸ್' ಸಿನಿಮಾ ಮಾಡಿ; ನೆಟ್ಟಿಗನ ಮಾತಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ರಿಯಾಕ್ಷನ್

ವಿವೇಕ್​ ಅಗ್ನಿಹೋತ್ರಿಯವರು ಹೇಳಿದ್ದೇನೆಂದರೆ, ‘ನನ್ನ ಡಿಎನ್​ಎ (DNA) ಬಹಳ ವಿಭಿನ್ನವಾಗಿದೆ.  ಯಾವುದೇ ಸಂಘ ಸಂಸ್ಥೆಗಳು ನನ್ನನ್ನು ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತಿದ್ದೇನೆ. ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಒಂದು ಫಲಕವಿತ್ತು.  ಅದರಲ್ಲಿ ‘ಕುದುರೆ ಒಳಗೆ ಹೋದರೆ ಕುದುರೆ ಹೊರಬರುತ್ತದೆ. ಕತ್ತೆ ಒಳಗೆ ಹೋದರೆ ಕತ್ತೆ ಮಾತ್ರ ಬರಲು ಸಾಧ್ಯ’ ಎಂಬ ಸಾಲು ಇತ್ತು. ಇದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಅಸಲಿಗೆ ಈ ವಾಕ್ಯದ  ಅರ್ಥ  ಒಂದು ಸಂಸ್ಥೆ ವ್ಯಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ ಎನ್ನುವುದು. ಆದರೆ ಅದನ್ನು ನಾನು ಒಪ್ಪುವುದಿಲ್ಲ. ಒಂದು ವೇಳೆ ಒಂದು ಸಂಸ್ಥೆ ವ್ಯಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ ಎನ್ನುವುದಾದರೆ  ಅದು ಸಂಸ್ಥೆಯ ವೈಫಲ್ಯವಷ್ಟೇ. ಸಂಸ್ಥೆಗಳು ಮನಸ್ಸುಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ರೂಪಿಸಬಾರದು   ಬದಲಿಗೆ ವಿಮರ್ಶಾತ್ಮಕ ಚಿಂತನೆಯಲ್ಲಿ ಮನಸ್ಸಿಗೆ ಸಹಾಯ ಮಾಡುವ ಕಾರ್ಯ ಮಾಡಬೇಕಿದೆ' ಎಂದಿದ್ದಾರೆ.

 ಜೆಎನ್​ಯು ವಿಶ್ವವಿದ್ಯಾಲಯದ ಕುರಿತು ಮಾತನಾಡಿದ ವಿವೇಕ್​ ಅಗ್ನಿಹೋತ್ರಿಯವರು, (Vivek Agnihotri) ‘ಜೆಎನ್​​ಯು ವಿಶ್ವವಿದ್ಯಾನಿಲಯದ ಸಮಸ್ಯೆ ಏನೆಂದರೆ ಅವರು ವಿದ್ಯಾರ್ಥಿಗಳ ಬ್ರೇನ್​ವಾಶ್ ಮಾಡುತ್ತಾರೆ. ಇಲ್ಲಿ ಕೆಲ ವಿದ್ಯಾರ್ಥಿಗಳನ್ನು ಹೇಗೆ ರೂಪಿಸಲಾಗುತ್ತದೆ ಎಂದರೆ ಅವರು ಏನೇ ಹೇಳಿದರೂ ವಿರೋಧಿಸುತ್ತಾರೆ. ಕೆಲವೊಮ್ಮೆ ನೀವು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಕೇವಲ ಟೀಕೆ ಮಾಡುತ್ತಿರುವುದರಿಂದ ಸಹಕಾರಿ ಆಗುವುದಿಲ್ಲ. ಇದನ್ನು ನಾನು ಅರಿತೇ ನನ್ನ ಬದುಕನ್ನು ಬದಲಿಸಿಕೊಂಡೆ ಎಂದ ವಿವೇಕ್​ ಅಗ್ನಿಹೋತ್ರಿಯವರು, ನಾನು ನಕ್ಸಲ್ ಆಗಿದ್ದೆ, ಎಡಪಂಥೀಯ ಸಿದ್ಧಾಂತಗಳನ್ನು ನಂಬುತ್ತಿದ್ದೆ. ಆದರೆ, ಕೇವಲ ಟೀಕೆ ಮಾಡುತ್ತಿರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಗೊತ್ತಾಯಿತು. ಒಂದೊಮ್ಮೆ ಹಾಗೆಯೇ ಇದ್ದರೆ ಸಮಾಜಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ ಎಂದು ಅರಿತೇ ಬದಲಾವಣೆಯ ಹಾದಿ ತುಳಿದೆ. ನಾನು ಸಾಕಷ್ಟು ಸಮಯವನ್ನು ಬಾಲಿವುಡ್ ಹಾಗೂ ಜೆಎನ್​ಯುನಲ್ಲಿ ಕಳೆದಿದ್ದೇನೆ. ಆದರೆ, ಇದಾವುದೂ ನನ್ನನ್ನು ರೂಪಿಸಿಲ್ಲ ಎಂದಿದ್ದಾರೆ.

ಧನುಷ್ ಇನ್ನು ರೊಮ್ಯಾಂಟಿಕ್​ ಸಿನಿಮಾ ಮಾಡೋಲ್ವಂತೆ, ಕಾರಣ ಕೇಳಿ ಬೇಸರಗೊಂಡ ಫ್ಯಾನ್ಸ್​
 
 ಸದ್ಯ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ (The Waxin War) ಸಿನಿಮಾ ಸಿದ್ಧವಾಗುತ್ತಿದೆ. ಆಗಸ್ಟ್​ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರದ  ಕೆಲಸಗಳು ಮುಗಿಯದ ಕಾರಣ ರಿಲೀಸ್ ದಿನಾಂಕ ಮುಂದೂಡಲಾಗಿದೆ. 

Follow Us:
Download App:
  • android
  • ios