Asianet Suvarna News Asianet Suvarna News

ಗಾಂಧಿ ಕುಟುಂಬಕ್ಕೆ ನ್ಯಾಷನಲ್ ಹೆರಾಲ್ಡ್ ಸಂಕಷ್ಟ, 752 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು!

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುಣಿಕೆ ಹಲವು ಕಾಂಗ್ರಸ್ ನಾಯಕರ ಸಂಕಷ್ಟ ಹೆಚ್ಚಿಸಿದೆ.ಇದರ ನಡುವೆ ಇಡಿ ಇಟ್ಟಿರುವ ಹೆಜ್ಜೆ ಗಾಂಧಿ ಕುಟುಂಬವನ್ನು ತಲ್ಲಣಿಸಿದೆ. ಇದೀಗ ಗಾಂಧಿ ಕುಟುಂಬಕ್ಕೆ ಸೇರಿದ ಕಂಪನಿಗಳು, ಆಸ್ತಿ ಸೇರಿದಂತೆ ಒಟ್ಟು 752 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.

National Herald Case ED seize RS 752 crore worth property of Gandhis in connections with Money laundering ckm
Author
First Published Nov 21, 2023, 7:39 PM IST

ನವದೆಹಲಿ(ನ.21) ಕಾಂಗ್ರೆಸ್‌ ಮಾಲೀಕತ್ವದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಬಿಗಿಯಾಗುತ್ತಿದೆ. ಹಲವು ಕಾಂಗ್ರೆಸ್ ನಾಯಕರು ಈಗಾಗಲೇ ತನಿಖೆ ಬಿಸಿ ಎದುರಿಸಿದ್ದಾರೆ. ಬೆಳವಣಿಗೆ ನಡುವೆ ಇಡಿ ಮಹತ್ವದ ಹೆಜ್ಜೆ ಇಟ್ಟಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗಾಂಧಿ ಕುಟುಂಬಕ್ಕೆ ಸೇರಿದ  751.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ. 

ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಗಾಂಧಿ ಕುಟುಂಬಕ್ಕೆ ಸೇರಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ದೆಹಲಿ, ಮುಂಬೈ , ಲಖನೌ ಸೇರಿದಂತೆ ಕೆಲ ನಗರದಲ್ಲಿರುವ ಸ್ಥಿರ ಆಸ್ತಿ ರೂಪದ ಆದಾಯ 661.69 ಕೋಟಿ ರೂಪಾಯಿ ಹಾಗೂ  ಯಂಗ್ ಇಂಡಿಯಾ ಸಂಸ್ಥೆಯ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿರುವ  90.21 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.  

ನ್ಯಾಷನಲ್‌ ಹೆರಾಲ್ಡ್‌ ಕೇಸ್‌, ಕಾಂಗ್ರೆಸ್‌ ನಾಯಕ ಪವನ್‌ ಬನ್ಸಾಲ್‌ ವಿಚಾರಣೆ ನಡೆಸಿದ ಇಡಿ!

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಹಾಗೂ ಯಂಗ್ ಇಂಡಿಯನ್(YI) ಸಂಸ್ಥೆಯ ಒಟ್ಟು 752 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ಥಿ ಹಾಗೂ ಹೂಡಿಕೆ ರೂಪದ ಅಕ್ರಮ ಆದಾಯದವನ್ನು ಮನಿ ಲಾಂಡರಿಂಗ್ ಪ್ರಕರಣಧಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಆದೇಶ ಹೊರಡಿಸಿದೆ. ದೆಹಲಿ, ಮುಂಬೈ, ಲಖನೌ ಸೇರಿದಂತೆ ಇತರ ನಗರಗಳಲ್ಲಿನ ಆಸ್ಥಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ಟ್ವೀಟ್ ಮಾಡಿದೆ. 

 

 

ಕಾಂಗ್ರೆಸ್ಸಿನ ಮುಖವಾಣಿಯಾಗಿರುವ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ ನಡೆಸುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಕಂಪನಿ ಸಹಸ್ರಾರು ಕೋಟಿ ರೂಪಾಯಿ ಆಸ್ತಿ ಹೊಂದಿದೆ. ಅದರ ಮಾಲೀಕತ್ವವನ್ನು ಸದ್ಯ ಯಂಗ್‌ ಇಂಡಿಯನ್‌ ಸಂಸ್ಥೆ ಹೊಂದಿದೆ. ಈ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಕೇವಲ ಮಲ್ಲಿಕಾರ್ಜುನ ಖರ್ಗೆ ಮಾತ್ರ ಉದ್ಯೋಗಿಯಾಗಿದ್ದಾರೆ. 

ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್‌: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!

ನ್ಯಾಷನಲ್ ಹೆರಾಲ್ಡ್ ಪ್ರಕರಣ ಬರೋಬ್ಬರಿ 2,000 ಕೋಟಿ ರೂಪಾಯಿ ಹಗರಣವಾಗಿದೆ. ದೆಹಲಿಯ ಐಟಿಒ ಬಳಿ ಬಹಾದ್ದೂರ್‌ ಶಾ ಜಾಫರ್‌ ಮಾರ್ಗದಲ್ಲಿರುವ ‘ಹೆರಾಲ್ಡ್‌ ಹೌಸ್‌’ ಈ ಪತ್ರಿಕೆಯ ಕೇಂದ್ರ ಕಚೇರಿ. ತೀವ್ರ ನಷ್ಟದಲ್ಲಿದ್ದ ಅಸೋಸಿಯೇಟೆಡ್‌ ಜರ್ನಲ್‌ (ಎಜೆಎಲ್‌)ಗೆ 2001-02 ಹಾಗೂ 2010-11ರ ನಡುವೆ ಕಾಂಗ್ರೆಸ್‌ 90 ಕೋಟಿ ರು. ಸಾಲ ನೀಡಿತ್ತು. ಇದಕ್ಕೆ ಪ್ರತಿಯಾಗಿ ಸೋನಿಯಾ, ರಾಹುಲ್‌ ಮುನ್ನಡೆಸುತ್ತಿದ್ದ ಯಂಗ್‌ ಇಂಡಿಯನ್‌ ಕಂಪನಿಗೆ ಎಜೆಎಲ್‌ ಷೇರುಗಳನ್ನು ಹಂಚಿಕೆ ಮಾಡಲಾಗಿತ್ತು. ನೂರಾರು ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ಕೇವಲ 90 ಕೋಟಿ ರು. ಸಾಲ ಕೊಟ್ಟಂತೆ ಮಾಡಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು. 

Follow Us:
Download App:
  • android
  • ios