Vijayanagara; ಕೆಲಸಕ್ಕೂ ಮುನ್ನ ಯೋಗ ಮಾಡಿದ ನರೇಗಾ ಕಾರ್ಮಿಕರು

ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣದಲ್ಲಿ ಮಲ್ಲಿಗೆ ಯೋಗ ಮತ್ತು ಪತಂಜಲಿ ಯೋಗ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನದ ಅಂಗವಾಗಿ ಯೋಗಾಸನ ಮಾಡಲಾಯಿತು.

Narega workers who did yoga before start work at Huvina Hadagali in Vijayanagara

ಹೂವಿನಹಡಗಲಿ (ಜೂನ್ 22): ವಿಶ್ವ ಯೋಗ ದಿನಾಚರಣೆ ಅಂಗವಾಗಿ ಎಲ್ಲ ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ಯೋಗ ದಿನ ಆಚರಿಸಲಾಯಿತು. ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪಪೂ ಕಾಲೇಜಿನಲ್ಲಿ ಬಿಜೆಪಿ ಮಂಡಲ ಪದಾಧಿಕಾರಿಗಳು, ತಾಲೂಕ ಕ್ರೀಡಾಂಗಣದಲ್ಲಿ ಮಲ್ಲಿಗೆ ಯೋಗ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಪತಾಂಜಲಿ ಯೋಗ ಚಾರಿಟೇಬಲ್‌ ಟ್ರಸ್ಟ್‌ನ ಯೋಗ ತರಬೇತಿದಾರರು, ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಯೋಗ ಮಹತ್ವ ಕುರಿತು ಮಾಹಿತಿ ನೀಡುವ ಜತೆಗೆ, ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸಿದರು.

ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಬೆಳಗ್ಗೆ 8ರಿಂದ ಯೋಗಾಸನ ಆರಂಭಿಸಲಾಗಿತ್ತು. ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ, ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ, ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸೇರಿದಂತೆ ಯೋಗ ಟ್ರಸ್ಟ್‌ಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಲೂಕಿನ ಮಾಗಳ ಗ್ರಾಮದ 130ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು, ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆಲಸಕ್ಕೂ ಮುನ್ನ ವಿವಿಧ ಯೋಗಾಶನಗಳನ್ನು ಮಾಡಿದರು. ಎಲ್ಲ ಕಡೆಗೂ ವಿಶ್ವ ಯೋಗ ದಿನಾಚರಣೆ ಮಾಡುತ್ತಾರೆ. ನಮಗೆ ತಿಳಿದಿರುವ ವಿವಿಧ ಯೋಗಾಸನಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು ಹಲಗಿ ಹನುಮಂತಪ್ಪ.

CHAMARAJNAGARA; ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆ್ಯಪ್ 

ಹಂಪಿಯಲ್ಲಿ ಯೋಗೋತ್ಸವ ಸಂಭ್ರಮ: ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ರಥ ಬೀದಿಯ ಎದುರಿನ ಬಸವಣ್ಣ ಮಂಟಪ ವಿಶ್ವ ಯೋಗ ದಿನಾಚರಣೆಗೆ ಐತಿಹಾಸಿಕ ಸಾಕ್ಷಿಯಾಯಿತು.

‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯದಡಿ ‘ಆಜಾದಿ ಕಾ ಅಮೃತ ಮಹೋತ್ಸವ’ದ ನಿಮಿತ್ತ ಹಂಪಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶ್ವಾಸಯೋಗಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ್‌ ಜೋಶಿ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಅನೇಕರು ಯೋಗಾಭ್ಯಾಸ ಮಾಡಿದರು.

ಆರು ಸಾವಿರಕ್ಕೂ ಅಧಿಕ ಜನರು ಯೋಗೋತ್ಸವದಲ್ಲಿ ಭಾಗಿಯಾದರು. ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ಮಹಿಳೆಯರು ಭಾಗಿಯಾಗುವ ಮೂಲಕ ಐತಿಹಾಸಿಕ ಷರಾ ಬರೆದರು.

Uttara Kannadaದಲ್ಲಿ ನಿಲ್ಲದ ಮಳೆಯ ಅಬ್ಬರ

ಬೆಳಗಿನ ಜಾವದಲ್ಲಿ ಯೋಗ: ಹಕ್ಕಿಗಳ ಚಿಲಿಪಿಲಿ ಕಲರವ, ತಂಗಾಳಿ, ಚಳಿಯ ವಾತಾವರಣದ ನಡುವೆಯೇ ಬೆಳಗಿನ ಜಾವ 4 ಗಂಟೆಯಿಂದಲೇ ಯೋಗಾಸಕ್ತರು ಹೊಸಪೇಟೆ ನಗರ, ಕಮಲಾಪುರ ಪಟ್ಟಣ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧೆಡೆಯಿಂದ ಹಂಪಿಯೆಡೆ ಸಾಗಿಬಂದಿದ್ದು ವಿಶೇಷವಾಗಿತ್ತು. 63 ಸರ್ಕಾರಿ ಬಸ್‌ಗಳು ಹಾಗೂ 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳಲ್ಲಿ ಯೋಗಾಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ಎದುರು ಬಸವಣ್ಣ ಮಂಪಟದ ಎದುರುಗಡೆ ಹಾಕಲಾಗಿದ್ದ ಗ್ರೀನ್‌ ಮ್ಯಾಟ್‌ಗಳ ಮೇಲೆ ಕುಳಿತು ಯೋಗಾಭ್ಯಾಸ ಮಾಡಿದರು.

ಆಸನಗಳು: ತಾಡಾಸನ, ವೃಕ್ಷಾಸನ, ಸುಖಾಸನ, ಪಾದ ಹಸ್ತಾಸನ, ಅರ್ಧಚಕ್ರಾಸನ, ತ್ರೀಕೋನಾಸನ, ದಂಡಾಸನ, ಅರ್ಧಉಷ್ಟಾ್ರಸನ, ಭದ್ರಾಸನ, ವಜ್ರಾಸನ, ಕಪಾಲ ಭಾತಿ, ಶಲಭಾಸನ ಸೇರಿದಂತೆ ವಿವಿಧ ಆಸನಗಳ ಮಹತ್ವ ಹೇಳಿಕೊಟ್ಟಶ್ವಾಸಗುರು ಶ್ರೀವಚನಾನಂದ ಸ್ವಾಮೀಜಿ ನೆರೆದಿದ್ದವರಿಗೆ ಯೋಗ ಮಾಡಿಸಿದರು.

ಅಜಾದಿ ಕಾ ಅಮೃತ್‌ ಮಹೋತ್ಸವ ನಿಮಿತ್ತ ದೇಶದ 75 ಪಾರಂಪರಿಕ ಸ್ಥಳಗಳಲ್ಲಿ ಯೋಗ ಆಚರಣೆಗೆ ಕೇಂದ್ರ ಆಯುಷ್‌ ಮಂತ್ರಾಲಯ ನಿರ್ಧರಿಸಿತ್ತು. ಅದರಲ್ಲಿ ಹಂಪಿಯೂ ಒಂದಾಗಿತ್ತು. ಹಂಪಿಯ ಸ್ಮಾರಕಗಳ ಎದುರು ಕಳೆದ ಒಂದು ತಿಂಗಳಿನಿಂದ ಪ್ರತಿ ಭಾನುವಾರ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜತೆಗೆ ವಿಜಯನಗರ ಜಿಲ್ಲಾದ್ಯಂತ ಯೋಗ ರಥಯಾತ್ರೆ ಸಂಚರಿಸಿತ್ತು. ಹಂಪಿಯ ಯೋಗೋತ್ಸವ ಕಾರ್ಯಕ್ರಮ ಈ ಭಾಗದಲ್ಲಿ ಸಂಚಲನವನ್ನುಂಟು ಮಾಡಿದೆ.

 

Latest Videos
Follow Us:
Download App:
  • android
  • ios