ಭಾರತದಲ್ಲಿ ಬಡತನ ಏರಿಕೆ ತಡೆದ ಮೋದಿ ಧಾನ್ಯ ಸ್ಕೀಂ

*  ಗರೀಬ್‌ ಕಲ್ಯಾಣ ಅನ್ನ ಯೋಜನೆಗೆ ಐಎಂಎಫ್‌ ಮೆಚ್ಚುಗೆ
*  ಕೋವಿಡ್‌ ಇದ್ದರೂ ಬಡತನ ನಿಯಂತ್ರಣ
* 80 ಕೋಟಿ ಜನರಿಗೆ ತಲಾ 5 ಕೇಜಿ ಆಹಾರ ಧಾನ್ಯ ನೀಡುವ ಯೋಜನೆ
 

Narendra Modi PMGKAY Scheme to Stop Poverty in India grg

ನವದೆಹಲಿ(ಏ.07):  ಕೋವಿಡ್‌(Covid-19) ಸಾಂಕ್ರಾಮಿಕದ ಅವಧಿಯಲ್ಲಿ ಬಡಜನರಿಗೆ ಉಚಿತ ಆಹಾರ ಧಾನ್ಯ(Free Ration) ಒದಗಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ್ದ ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ’ಯು ದೇಶದಲ್ಲಿ ಗಂಭೀರ ಬಡತನ ಪ್ರಮಾಣ ಏರಿಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ವರದಿ ಶ್ಲಾಘಿಸಿದೆ. ಅಲ್ಲದೆ ಸತತವಾಗಿ ಎರಡು ವರ್ಷಗಳ ಕಾಲ, ಅದರಲ್ಲೂ ಕೋವಿಡ್‌ ಸಾಂಕ್ರಾಮಿಕ ಅವಧಿಯಲ್ಲೂ ಗಂಭೀರ ಬಡತನ ನಿಯಂತ್ರಣಕ್ಕೆ ಬಂದಿರುವುದು ದೇಶದಲ್ಲಿ ಗಂಭೀರ ಬಡತನ ನಿವಾರಣೆಯಾಗಿರುವ ಲಕ್ಷಣಗಳು ಎಂದು ವರದಿ ಹೇಳಿದೆ.
ಯೋಜನೆ ಕುರಿತು ಐಎಂಎಫ್‌(IMF) ಸಿದ್ಧಪಡಿಸಿರುವ ‘ಸಾಂಕ್ರಾಮಿಕ, ಬಡತನ ಮತ್ತು ಅಸಮಾನತೆ: ಭಾರತದಿಂದ ಸಾಕ್ಷಿಗಳು’ ಎಂಬ ವರದಿಯಲ್ಲಿ ಯೋಜನೆಯಿಂದ ಆದ ಲಾಭಗಳ ಕುರಿತ ವಿವರಿಸಲಾಗಿದೆ.

ವರದಿಯಲ್ಲೇನಿದೆ?:

ಐಎಂಎಫ್‌ನ ವರದಿಯಲ್ಲಿ 2004-05ರಿಂದ ಹಿಡಿದು 2020-21ರ ಅವಧಿಯಲ್ಲಿನ ದೇಶದಲ್ಲಿನ(India) ಬಡತನ(Poverty) ಮತ್ತು ಬಳಕೆಯಲ್ಲಿನ ಅಸಮಾನತೆಗಳನ್ನು ವಿಶ್ಲೇಷಿಸಲಾಗಿದೆ. ಅದರನ್ವಯ, ಕೋವಿಡ್‌ ಸಾಂಕ್ರಾಮಿಕದ ಮುನ್ನಾ ಅವಧಿಯಾದ 2019ರಲ್ಲಿ ಭಾರತದಲ್ಲಿ ಗಂಭೀರ ಬಡತನ ಶೇ.0.8ರಷ್ಟಿತ್ತು. ಆದರೆ ಸಾಂಕ್ರಾಮಿಕ ಕಾಣಿಸಿಕೊಂಡ 2020ರಲ್ಲೂ ಗಂಭೀರ ಬಡತನ ಹೆಚ್ಚಳವಾಗದೇ ಹಿಂದಿನ ಪ್ರಮಾಣದಲ್ಲೇ ಮುಂದುವರೆದಿದೆ. ಇದರಲ್ಲಿ ಸರ್ಕಾರ ರೂಪಿಸಿದ ಆಹಾರ ಭದ್ರತೆ ಯೋಜನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಆಹಾರ(Food) ಭದ್ರತೆಯು ಸಾಂಕ್ರಾಮಿಕ ಅವಧಿಯಲ್ಲಿನ ಹೊಡೆತವನ್ನು ತಡೆದುಕೊಳ್ಳುವ ಶಕ್ತಿಯನ್ನೂ ಜನರಿಗೆ ನೀಡಿತು ಎಂದು ವರದಿ ಹೇಳಿದೆ.
ಜೊತೆಗೆ ದಶಕಗಳಲ್ಲೇ ಮೊದಲ ಬಾರಿಗೆ ಗಂಭೀರ ಬಡತನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತು. ಇನ್ನು 2014-19ರ ಅವಧಿಯ ಬಳಕೆ ಬೆಳವಣಿಗೆ ಪ್ರಮಾಣ ಕೂಡಾ 2004-11ರ ಅವಧಿಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ. ವ್ಯಕ್ತಿಯೊಬ್ಬನ ದಿನದ ಖರೀದಿ ಸಾಮರ್ಥ್ಯ 1.9 ಡಾಲರ್‌ (142 ರು.)ಗಿಂತ ಕಡಿಮೆ ಇದ್ದರೆ ಆತನನ್ನು ಗಂಭೀರ ಬಡತನದಲ್ಲಿರುವ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.

PMAY: ಆವಾಸ್‌ ಯೋಜನೆಯಿಂದ ಪ್ರತಿ ಬಡವರಿಗೆ ಸೂರು: ಸೋಮಣ್ಣ

ಏನಿದು ಯೋಜನೆ?:

ಪಿಎಂಜಿಕೆಎವೈ ಯೋಜನೆಯಡಿ ಒಬ್ಬ ವ್ಯಕ್ತಿಗೆ ಪ್ರತಿ ತಿಂಗಳು 5 ಕೇಜಿಯಷ್ಟು ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ದೇಶದ 80 ಕೋಟಿ ಜನರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯನ್ನು 2020ರಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ತೊಂದರೆ ಅನುಭವಿಸುತ್ತಿರುವ ಜನರಿಗಾಗಿ ಪ್ರಧಾನಿ ಮೋದಿ ಅವರು ಜಾರಿಗೆ ತಂದರು. ಕೋವಿಡ್‌ ಪ್ರಕರಣಗಳು ಕಡಿಮೆಯಾಗಿ ಆರ್ಥಿಕತೆ ಚೇತರಿಕೆ ಕಂಡಿದ್ದರೂ, ಈ ಯೋಜನೆಯನ್ನು ಮುಂದಿನ ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗುವುದು ಎಂದು ಅವರು ಕಳೆದ ತಿಂಗಳು ಘೋಷಿಸಿದ್ದರು.

ಉಚಿತ, ಉಚಿತ ಕೊಡ್ತಾ ಇದ್ರೆ ಶ್ರೀಲಂಕಾ ಆಗೋದು ಖಚಿತ: ಮೋದಿ ಎದುರು‌ ಅಧಿಕಾರಿಗಳ ಕಳವಳ

PMGKAY ಯೋಜನೆಗೆ IMF ಶ್ಲಾಘಿಸಿದೆ

IMF 'ಸಾಂಕ್ರಾಮಿಕ, ಬಡತನ ಮತ್ತು ಅಸಮಾನತೆ: ಭಾರತದಿಂದ ಪುರಾವೆ' ಎಂಬ ಪತ್ರಿಕೆಯ ಕೊನೆಯ ಭಾಗದಲ್ಲಿ, ಫಲಿತಾಂಶಗಳು ಭಾರತದ ಆಹಾರ ಸಬ್ಸಿಡಿ ಕಾರ್ಯಕ್ರಮದ ವಿಸ್ತರಣೆಯಿಂದ ಒದಗಿಸಲಾದ ಸಾಮಾಜಿಕ ಸುರಕ್ಷತಾ ನಿವ್ವಳವನ್ನು ಪ್ರದರ್ಶಿಸುತ್ತವೆ. ಈ ಕಾರ್ಯಕ್ರಮವು ಬಡವರಿಗೆ ವಿಮೆಯನ್ನು ಒದಗಿಸುವ ಮೂಲಕ ಭಾರತೀಯ ಆರ್ಥಿಕತೆಗೆ ಸಾಂಕ್ರಾಮಿಕ ಆಘಾತದ ಪ್ರಮುಖ ಭಾಗವನ್ನು ನೆನೆಸಿದೆ ಮತ್ತು ಭಾರತದಲ್ಲಿ ತೀವ್ರ ಬಡತನವನ್ನು ತಡೆಯಲು ಸಹಾಯ ಮಾಡಿದೆ ಎಂದು ಹೇಳಿದೆ. ಇದು ಭಾರತದ ಸಾಮಾಜಿಕ ಸುರಕ್ಷತಾ ವಾಸ್ತುಶಿಲ್ಪದ ಬಲವನ್ನು ತೋರಿಸುತ್ತದೆ.
 

ಐಎಂಎಫ್‌ ಹೇಳಿದ್ದೇನು?

- ಕೋವಿಡ್‌ಗೆ ಮುನ್ನ ದೇಶದಲ್ಲಿ ಗಂಭೀರ ಬಡತನ ಶೇ.0.8ರಷ್ಟಿತ್ತು
- ಕೋವಿಡ್‌ ಕಾಣಿಸಿಕೊಂಡರೂ ಬಡತನ ಪ್ರಮಾಣದಲ್ಲಿ ಹೆಚ್ಚಾಗಿಲ್ಲ
- ಇದಕ್ಕೆ ಆಹಾರ ಭದ್ರತಾ ಯೋಜನೆ ಪ್ರಮುಖ ಕೊಡುಗೆ ನೀಡಿದೆ
- ಸಾಂಕ್ರಾಮಿಕದ ಹೊಡೆತ ತಡೆಯುವ ಶಕ್ತಿಯನ್ನು ಜನತೆಗೆ ನೀಡಿದೆ
- 80 ಕೋಟಿ ಜನರಿಗೆ ತಲಾ 5 ಕೇಜಿ ಆಹಾರ ಧಾನ್ಯ ನೀಡುವ ಯೋಜನೆ
 

Latest Videos
Follow Us:
Download App:
  • android
  • ios