PMAY: ಆವಾಸ್‌ ಯೋಜನೆಯಿಂದ ಪ್ರತಿ ಬಡವರಿಗೆ ಸೂರು: ಸೋಮಣ್ಣ

'*  ಮಹದೇವಪುರ ಕ್ಷೇತ್ರದ ಕೊಳಗೇರಿಯ ಒಂದು ಸಾವಿರ ನಿವಾಸಿಗಳಿಗೆ ಹಕ್ಕುಪತ್ರ ವಿತರಣ
*  ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಆಯಾ ಕ್ಷೇತ್ರದ ಸಚಿವರ ಬೆಂಬಲ ಅತ್ಯಗತ್ಯ
*  ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲು ಕ್ಷೇತ್ರದ ಶಾಸಕ ಲಿಂಬಾವಳಿ ಅವಿರತ ಶ್ರಮವೇ ಕಾರಣ 

Minister V Somanna React on Pradhan Mantri Awas Yojana in Karnataka grg

ಬೆಂಗಳೂರು(ಮಾ.23):  ಪ್ರಧಾನಮಂತ್ರಿ ಆವಾಸ್‌ ಯೋಜನೆಯ(Pradhan Mantri Awas Yojana) ಬಡತನದಲ್ಲಿರುವ ಸರ್ವರಿಗೂ ವಸತಿ ಕಲ್ಪಿಸಿಕೊಡುವ ಒಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಬೆಂಗಳೂರು(Bengaluru) ನಗರ ಜಿಲ್ಲೆಯ ಪೂರ್ವ ತಾಲೂಕಿನ ಭೋಗನಹಳ್ಳಿಯಲ್ಲಿ ಮಹದೇವಪುರ ಕ್ಷೇತ್ರದ ಕೊಳಗೇರಿಯಲ್ಲಿ ವಾಸಿಸುವ ಸುಮಾರು ಒಂದು ಸಾವಿರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಡ್‌ ನ್ಯೂಸ್: ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

ಮಹದೇವಪುರ ಕ್ಷೇತ್ರದಲ್ಲಿ ಆರು ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ(Aravind Limbavali) ಅವರ ಅವಿರತ ಶ್ರಮವೇ ಕಾರಣ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ದಿನದಲ್ಲಿ ಅಭಿವೃದ್ಧಿಯಲ್ಲಿ ಇದು ಅಗ್ರಸ್ಥಾನ ಪಡೆಯಲಿದೆ ಎಂದು ಹೇಳಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಶಾಸಕರ ಶ್ರಮ ಮಾತ್ರವಲ್ಲ, ಆಯಾ ಕ್ಷೇತ್ರದ ಸಚಿವರ ಬೆಂಬಲ ಅತ್ಯಗತ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಜನರಿಗೆ ಮೂಲಸೌಲಭ್ಯ ಮತ್ತು ವಸತಿ ಕಲ್ಪಿಸುವಲ್ಲಿ ಸಚಿವ ಸೋಮಣ್ಣ ತುಂಬು ಮನಸ್ಸಿನಿಂದ ಬೆಂಬಲ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆಗಳನ್ನು, ಆರೋಗ್ಯ ಕೇಂದ್ರ, ಮೈದಾನ ನಿರ್ಮಿಸಿ ಕೊಡುತ್ತಿರುವುದು ಜನರಿಗೆ ಸಹಕಾರಿಯಾಗುತ್ತಿದೆ. ಇನ್ನು ಅಗತ್ಯ ಇರುವ ಮನೆಗಳ ಬಗ್ಗೆ ಸರ್ವೆ ಮಾಡಿಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ನೀಡುವ ಕಾರ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್‌ ಕುಮಟಳ್ಳಿ, ಬಿಬಿಎಂಪಿ ಆಯುಕ್ತ ಬಿ.ವೆಂಕಟೇಶ್‌, ಮಂಡಳಿ ಸದಸ್ಯರಾದ ಕೆ.ಎಸ್‌.ಗೀತಾ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಧಾರವಾಡಕ್ಕೆ ಹೆಚ್ಚುವರಿ 3500 ಮನೆ: ಸಚಿವ ಸೋಮಣ್ಣ

ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ(Pradhan Mantri Awas Yojana) ಧಾರವಾಡ(Dharwad) ಜಿಲ್ಲೆಗೆ ಹೆಚ್ಚುವರಿಯಾಗಿ ನಗರ ಪ್ರದೇಶಗಳ ವ್ಯಾಪ್ತಿಗೆ 3500 ಮನೆ ಮಂಜೂರು ಮಾಡುವುದಾಗಿ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ(V Somanna) ತಿಳಿಸಿದ್ದರು.

ಮಾ.19 ರಂದು ಕುಂದಗೋಳ ಪಟ್ಟಣದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ 235 ಮನೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯ ನಗರ ಹಾಗೂ ಪುರಸಭೆಗಳಿಗೆ 4,075 ಮನೆಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಶೀಘ್ರ ಹೆಚ್ಚುವರಿಯಾಗಿ 500 ಮನೆ ಮಂಜೂರು ಮಾಡುತ್ತೇವೆ. ಸರ್ಕಾರದಿಂದ ಮಂಜೂರು ಮಾಡಿದ ಮನೆಗಳನ್ನು ಅಡಮಾನ ಹಾಗೂ ಭೋಗ್ಯಕ್ಕೆ ಪಡೆಯುವ ಪದ್ಧತಿಯನ್ನು ತಡೆಯಲಾಗಿದೆ. ವಸತಿ ಯೋಜನೆಯ ಲಾಭ ಪಡೆಯವ ಫಲಾನುಭವಿಗಳ ಆದಾಯ ಮಿತಿಯನ್ನು 1.20 ಲಕ್ಷ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದರು. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಮಾತನಾಡಿ, ಹಿಂದಿನ ಸರ್ಕಾರಗಳು ಸ್ಲಂಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದವು. ಆದರೆ ಪ್ರಧಾನಿ ಮೋದಿ(Narenda Modi) ಅವರು ಜನ ವಾಸಿಸುವಲ್ಲೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತಿದ್ದಾರೆ. 2024ರ ಒಳಗಾಗಿ ಸರ್ವರಿಗೂ ಸೂರು ಒದಗಿಸುವ ಯೋಜನೆ ಹೊಂದಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರ(Central Government) 1.15 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದ್ದರು. 

Bengaluru Suburban Rail: 4 ವರ್ಷದೊಳಗೆ ಸಬ್‌ ಅರ್ಬನ್‌ ರೈಲು ಯೋಜನೆ ಪೂರ್ಣ: ಸೋಮಣ್ಣ

ಜಿಲ್ಲೆಗೆ ನಗರ ವ್ಯಾಪ್ತಿಯಲ್ಲಿ 4,075 ಮನೆಗಳು ಮಂಜೂರಾಗಿವೆ. ಈ ಪೈಕಿ ಧಾರವಾಡ 2326, ಹುಬ್ಬಳ್ಳಿ 889, ನವಲಗುಂದ 375 ಕುಂದಗೋಳ 235 ಹಾಗೂ ಕಲಘಟಗಿ 250 ಮನೆಗಳನ್ನು . 271.82 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯ ನಿರ್ಮಾಣದ ವೆಚ್ಚ . 6.34ರಿಂದ . 6.81 ಲಕ್ಷಗಳಾಗಿದೆ. ಕೇಂದ್ರ ಸರ್ಕಾರ ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ . 3.50 ಲಕ್ಷ ಹಾಗೂ ಇತರರಿಗೆ . 2.70 ಲಕ್ಷ ಅನುದಾನ ನೀಡುತ್ತಿದೆ. ಧಾರವಾಡ ಜಿಲ್ಲೆಗೆ 7642 ಮನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದರು. 

ಧಾರವಾಡ ಜಿಲ್ಲೆಯಲ್ಲಿ 36 ಸಾವಿರ ಕುಟುಂಬ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಕುಂದಗೋಳ ತಾಲೂಕಿನಲ್ಲಿ . 76 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದ್ದರು. 
 

Latest Videos
Follow Us:
Download App:
  • android
  • ios