ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್‌ ಪೆಜೆಷ್ಕಿಯಾನ್‌ ಅವರಿಗೆ ಈದ್‌ ಮತ್ತು ನವರೋಜ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಹಬ್ಬವು ಪಶ್ಟಿಮ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್‌ ಪೆಜೆಷ್ಕಿಯಾನ್‌ ಅವರಿಗೆ ಈದ್‌ ಮತ್ತು ನವರೋಜ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಹಬ್ಬವು ಪಶ್ಟಿಮ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇರಾನ್‌ ಅಧ್ಯಕ್ಷರ ಜತೆಗೆ ನಡೆಸಿದ ದೂರವಾಣಿ ಮಾತುಕತೆಯಲ್ಲಿ ಅವರು ಯುದ್ಧದ ವೇಳೆ ಪ್ರಾದೇಶಿಕ ಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸುವ ಅತ್ಯಗತ್ಯವಾದ ಮೂಲಸೌಲಭ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಜತೆಗೆ, ನೌಕಾಯಾನ ಸ್ವಾತಂತ್ರ್ಯದ ರಕ್ಷಣೆ ಹಾಗೂ ಹಡಗು ಮಾರ್ಗಗಳು ಸುರಕ್ಷವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯ ಕುರಿತು ಪ್ರಸ್ತಾಪಿಸಿದ್ದಾರೆ.

ಸರ್ಕಾರದಿಂದ ಸಿಗುತ್ತಿರುವ ಬೆಂಬಲದ ಕುರಿತು ಮೋದಿ ಮೆಚ್ಚುಗೆ

ಇದೇ ವೇಳೆ ಇರಾನ್‌ನಲ್ಲಿರುವ ಭಾರತೀಯ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯ ವಿಚಾರದಲ್ಲಿ ಸರ್ಕಾರದಿಂದ ಸಿಗುತ್ತಿರುವ ಬೆಂಬಲದ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆ.28ರಂದು ಆರಂಭವಾದ ಯುದ್ಧದ ಬಳಿಕ ಪ್ರಧಾನಿ ಮೋದಿ-ಇರಾನ್‌ ಅಧ್ಯಕ್ಷರ ನಡುವಿನ ಎರಡನೇ ದೂರವಾಣಿ ಸಂಭಾಷಣೆ ಇದಾಗಿದೆ. ಮಾ.12ರಂದು ಇರಾನ್‌ ಅಧ್ಯಕ್ಷ ಪಜೆಷ್ಕಿಯಾನ್‌ ಅವರು ಮೋದಿ ಅವರಿಗೆ ಕರೆ ಮಾಡಿ ಸಂಘರ್ಷದ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದರು.

ಹೋರ್ಮುಜ್‌ ಮೂಲಕ ಮತ್ತೆರಡು

ನವದೆಹಲಿ: ಭಾರತಕ್ಕೆ ಹೋರ್ಮುಜ್‌ ಜಲಸಂಧಿ ನಿಯಮ ಸಡಿಲ ಹಿನ್ನೆಲೆಯಲ್ಲಿ ಭಾರತದ ಮತ್ತೆರೆಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಭಾರತದತ್ತ ಹೊರಡಲು ಸಜ್ಜಾಗಿವೆ ಎನ್ನಲಾಗಿದೆ. ಭಾರತದ ಧ್ವಜ ಹೊಂದಿರುವ ಪೈನ್‌ ಗ್ಯಾಸ್‌ ಮತ್ತು ಜಗ್‌ ವಸಂತ್‌ ಎಂಬ ಎರಡು ಎಲ್‌ಪಿಜಿ ಹಡಗುಗಳು ಯುಎಇಯ ಶಾರ್ಜಾ ಸಮೀಪ ಲಂಗರು ಹಾಕಿವೆ. ಇವುಗಳು ಶನಿವಾರ ಸಂಜೆ ಸಂಚಾರ ಆರಂಭಿ ಹೋರ್ಮಜ್‌ ಜಲಸಂಧಿ ದಾಟಿ ಭಾರತದತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಇರಾನ್‌ನಿಂದ ಭಾರತದ ಶಿವಾಲಿಕ್‌, ನಂದಾದೇವಿ ಎಲ್‌ಪಿಜಿ ನೌಕೆ ಭಾರತಕ್ಕೆ ಬಂದಿದ್ದವು.