ತುರ್ತು ಪರಿಸ್ಥಿತಿಯಲ್ಲಿ ಮೋದಿ ಸನ್ಯಾಸಿ, ಸರ್ದಾರ್ಜಿ ವೇಷ ಧರಿಸಿ ಓಡಾಟ!

ಇಂದಿರಾ ಗಾಂಧಿ ಘೋಷಿಸಿದ ಎಮರ್ಜೆನ್ಸಿ ವೇಳೆ ನರೇಂದ್ರ ಮೋದಿ ಸನ್ಯಾಸಿ, ಸರ್ದಾರ್ ಜಿ ಸೇರಿದಂತೆ ನಾನಾ ವೇಷ ಧರಿಸಿ ಓಡಾಡಿದ್ದರು. 21 ತಿಂಗಳು ಮೋದಿ ಹಲವು ವೇಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದರು.

Narendra Modi dressed as a swamiji Sikh sardar during emergency for evade detection ckm

ನವದೆಹಲಿ(ಜೂ.26): 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಹುತೇಕ ನಾಯಕರನ್ನು ಸರ್ಕಾರ ಬಂಧಿಸಿದರೂ ಅಂದು ಸಂಘದ ಕಾರ್ಯಕರ್ತರಾಗಿದ್ದ ಈಗಿನ ಪ್ರಧಾನಿ ಮೋದಿಯನ್ನು ಮಾತ್ರ ಬಂಧಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಆ 21 ತಿಂಗಳು ನಾನಾ ವೇಷ ಧರಿಸಿ ಪೊಲೀಸರ ಕಣ್ಣುತಪ್ಪಿಸಿ ಸಂಘಟನೆ ಮಾಡುತ್ತಿದ್ದರು.

ಬತುಕ್‌ ಭಾಯ್‌, ಸರ್ದಾರ್ಜಿ, ಸ್ವಾಮೀಜಿ ಮುಂತಾದ ಹೆಸರುಗಳನ್ನು ಇಟ್ಟುಕೊಂಡು ಹಾಗೂ ಆಯಾ ವೇಷಭೂಷಣ ಧರಿಸಿಕೊಂಡು ಅವರು ಗುಜರಾತ್‌ ರಾಜ್ಯದ ನಾನಾ ನಗರಗಳನ್ನು ಸುತ್ತಿ ಜನರಿಗೆ ತುರ್ತು ಪರಿಸ್ಥಿತಿಯ ನೈಜ ಅಂಶಗಳ ಕುರಿತು ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದರು. ಜೊತೆಗೆ ಭಾವನಗರದ ಜೈಲಿನಲ್ಲಿದ್ದ ಆರ್‌ಎಸ್‌ಎಸ್‌ ಸಹಚರರನ್ನು ಭೇಟಿ ಮಾಡಲು ಸ್ವಾಮೀಜಿಯ ವೇಷ ಧರಿಸಿ ಸುಲಭವಾಗಿ ಪ್ರವೇಶ ಗಿಟ್ಟಿಸಿದ್ದರು ಹಾಗೂ ಸತ್ಸಂಗದ ಹೆಸರಿನಲ್ಲಿ ರಹಸ್ಯ ಕಾರ್ಯಚಟುವಟಿಕೆ ನಡೆಸಿದ್ದ ಮಾಹಿತಿಗಳು ಹೊರಬಂದಿವೆ.

ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆ, ಯುವ ಜನತೆ ಈ ಹೇರಿಕೆಗಳಿಗೆ ಬೆದರೋದಿಲ್ಲ: ಪ್ರಧಾನಿ ಮೋದಿ

ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್‌ ಹೇಗೆ ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿದೆ. ಪ್ರತಿಯೊಬ್ಬ ಭಾರತೀಯರು ಬಹುವಾಗಿ ಪ್ರೀತಿಸುವ ಸಂವಿಧಾನವನ್ನು ತುಳಿದಿದೆ ಎನ್ನುವುದನ್ನು ಆ ಕರಾಳ ದಿನಗಳು ಹೇಳುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸತತ 2ನೇ ದಿನವೂ ಟೀಕಿಸಿದ್ದಾರೆ.

ತುರ್ತು ಪರಿಸ್ಥಿತಿಗೆ ಮಂಗಳವಾರ 49 ವರ್ಷ ತುಂಬಿ 50ನೇ ವರ್ಷಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ, ಸರಣಿ ಟ್ವೀಟ್‌ ಮಾಡಿರುವ ಅವರು, ‘ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿ ತೋರಿಸುವ ಹಕ್ಕಿಲ್ಲ. ತುರ್ತು ಪರಿಸ್ಥಿತಿ ಹೇರಿದ ಮನಸ್ಥಿತಿಯು ಆ ಪಕ್ಷದಲ್ಲಿಇಂದಿಗೂ ಜೀವಂತವಾಗಿದೆ. ಅವರು ಸಂವಿಧಾನದ ಮೇಲೆ ತಿರಸ್ಕಾರ ಮರೆ ಮಾಚಲು ಪ್ರಯತ್ನಿಸುತ್ತಾರೆ. ಆದರೆ ಭಾರತದ ಜನರು ಈ ಹಿಂದಿನ ಅವರ ವರ್ತನೆಗಳನ್ನು ನೋಡಿದ್ದಾರೆ. ಹೀಗಾಗಿಯೇ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.

ಜನ ಸತ್ವ ಬಯಸುತ್ತಾರೆ, ಗಲಾಟೆ ಅಲ್ಲ: ವಿಪಕ್ಷಕ್ಕೆ ಮೋದಿ ಪ್ರಹಾರ

‘ಈ ವ್ಯಕ್ತಿಗಳೇ ಹಲವು ಸಂದರ್ಭದಲ್ಲಿ 356ನೇ ವಿಧಿಯನ್ನು ಹೇರಿದವರು. ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸಿದವರು. ಸಂವಿಧಾನದ ಪ್ರತಿ ಮೌಲ್ಯವನ್ನು, ಸಂಯುಕ್ತ ವ್ಯವಸ್ಥೆಯನ್ನು ನಾಶಪಡಿಸಿದವರು. ಅಧಿಕಾರಕ್ಕೆ ಅಂಟಿಕೊಳ್ಳುವುದಕ್ಕಾಗಿ ಆಗಿನ ಕಾಂಗ್ರೆಸ್‌ ಸರ್ಕಾರವು ರಾಷ್ಟ್ರವನ್ನು ಜೈಲಿನಲ್ಲಿಟ್ಟಿತ್ತು. ಪಕ್ಷವನ್ನು ಒಪ್ಪದವರನ್ನು ಹಿಂಸಿಸಿ, ಕಿರುಕುಳ ನೀಡಲಾಯಿತು. ದುರ್ಬಲ ವರ್ಗ ಗುರಿಯಾಗಿಸಿಕೊಂಡು ತೀವ್ರಗಾಮಿ ನೀತಿಗಳನ್ನು ಬಿಚ್ಚಿಡಲಾಗಿತ್ತು’ ಎಂದು ಹರಿಹಾಯ್ದಿದ್ದಾರೆ.
 

Latest Videos
Follow Us:
Download App:
  • android
  • ios