Asianet Suvarna News Asianet Suvarna News

ತೆಲಂಗಾಣದ ಡ್ಯಾಂ ವಶಕ್ಕೆ ಪಡೆದ ಆಂಧ್ರ ಪೊಲೀಸರು: 400 ಪೊಲೀಸರಿಂದ ದಾಳಿ; ಅಕ್ರಮ ಪ್ರವೇಶ ಕೇಸ್‌

ತೆಲಂಗಾಣದಲ್ಲಿ ಚುನಾವಣೆ ನಡೆದ ದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ 400 ಮಂದಿ ಆಂಧ್ರಪ್ರದೇಶ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟನ್ನು ತಲುಪಿ ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ನೀರು ಬಿಡುಗಡೆ ಮಾಡಿದ್ದಾರೆ.

nagarjuna sagar dam row 2 cases registered against andhra pradesh police in telangana s nalgonda district ash
Author
First Published Dec 2, 2023, 9:23 AM IST

ಹೈದರಾಬಾದ್‌ (ಡಿಸೆಂಬರ್ 2, 2023): ತೆಲಂಗಾಣದ ಅಧೀನದಲ್ಲಿರುವ ನಾಗಾರ್ಜುನ ಅಣೆಯಕಟ್ಟೆಯನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ಪೊಲೀಸರು ಸುಮಾರು 10 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ತೆಲಂಗಾಣದಲ್ಲಿ ಚುನಾವಣೆ ನಡೆದ ದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ 400 ಮಂದಿ ಆಂಧ್ರಪ್ರದೇಶ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟನ್ನು ತಲುಪಿ ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ನೀರು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಉಭಯ ರಾಜ್ಯಗಳ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದರೂ ಸಹ ನೀರು ಬಿಡುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗಾರ್ಜುನ ಸಾಗರ ಅಣೆಕಟ್ಟಿಗೆ ನಿರ್ಮಿಸಲಾಗಿರುವ ಬಲನಾಲೆಯ ಮೂಲಕ 10 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ ಅಣೆಕಟ್ಟಿನ ಬಳಿ ಪೊಲೀಸ್‌ ಭದ್ರತೆಯನ್ನು ಹೆಚ್ಚು ಮಾಡಿದೆ.

ಇದನ್ನು ಓದಿ: ಆಂಧ್ರದ ಗಡಿ ಕನ್ನಡ ಹೈಸ್ಕೂಲ್‌ಗಳಲ್ಲೀಗ ಕನ್ನಡವೇ ಇಲ್ಲ: ಏನಿದು ರಾಜ್ಯ ಸರ್ಕಾರದ ಆದೇಶ

2 ಪ್ರಕರಣ ದಾಖಲು: ಅಣೆಕಟ್ಟು ವಶಕ್ಕೆ ಪಡೆದುಕೊಂಡು ನೀರು ಬಿಡುಗಡೆ ಮಾಡಿದ ಬಳಿಕ ಆಂಧ್ರಪ್ರದೇಶ ಪೊಲೀಸರ ವಿರುದ್ಧ ನಲ್ಗೊಂಡ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ ದಾಖಲು ಮಾಡಲಾಗಿದೆ. 2015ರ ಫೆ.13ರಂದು ಸಹ ಆಂಧ್ರ ಪೊಲೀಸರು ಈ ರೀತಿ ನೀರು ಬಿಡುಗಡೆ ಮಾಡಲು ಯತ್ನಿಸಿದ್ದರು. ಆದರೆ ತೆಲಂಗಾಣ ಪೊಲೀಸರು ಮೊದಲೇ ಎಚ್ಚೆತ್ತುಕೊಂಡು ಇದನ್ನು ತಡೆಗಟ್ಟಿದ್ದರು.

ನಾಗಾರ್ಜುನ ಸಾಗರ ಅಣೆಕಟ್ಟು ತೆಲಂಗಾಣದ ನೀರಾವರಿ ಸಚಿವಾಲಯದ ನಿಯಂತ್ರಣದಲ್ಲಿದೆ. ಆದರೆ ಆಂಧ್ರಪ್ರದೇಶ ಪೊಲೀಸರು ಗುರುವಾರ ರಾತ್ರಿ ವಶಪಡಿಸಿಕೊಂಡಿರುವ ಅಣೆಕಟ್ಟೆಯ ಭಾಗ ಆಂಧ್ರಪ್ರದೇಶಕ್ಕೆ ಸೇರಿದ್ದಾಗಿದೆ.

ಇದನ್ನು ಓದಿ: ಪುರುಷರಿಗಿಂತ ಮಹಿಳೆಯರೇ ಬೆಸ್ಟ್‌ ಡ್ರೈವರ್ಸ್‌, ಸರ್ಕಾರದ ವರದಿ!

ನಡೆದದ್ದೇನು?

  • ಗುರುವಾರ ಮಧ್ಯರಾತ್ರಿ 1 ಗಂಟೆಗೆ ಅಣೆಕಟ್ಟಿಗೆ ನುಗ್ಗಿದ ಆಂಧ್ರ ಪೊಲೀಸ್‌
  • ಡ್ಯಾಂ ಸಂಪೂರ್ಣ ವಶಕ್ಕೆ ಪಡೆದುಕೊಂಡು, ನೀರು ಬಿಡುಗಡೆ
  • ಈ ವೇಳೆ ಆಂಧ್ರ ಹಾಗೂ ತೆಲಂಗಾಣ ಪೊಲೀಸರ ನಡುವೆ ಮಾತಿನ ಚಕಮಕಿ
  • ಶುಕ್ರವಾರ ಡ್ಯಾಂ ಬಳಿ ಭದ್ರತೆ ಹೆಚ್ಚಿಸಿದ ತೆಲಂಗಾಣ ಸರ್ಕಾರ 

ತೃತೀಯಲಿಂಗಿ ಪ್ರೇಮಪಾಶಕ್ಕೆ ಸಿಲುಕಿ ಪೋಷಕರ ವಿರೋಧ ಧಿಕ್ಕರಿಸಿ ಮದುವೆಯಾದ ಯುವಕ: ಪೊಲೀಸರ ಮೊರೆ ಹೋದ ದಂಪತಿ! 

Follow Us:
Download App:
  • android
  • ios