ಮೊದಲ ಬಾರಿಗೆ ಕೋವಿಡ್ ಮುಕ್ತವಾದ ನಾಗಲ್ಯಾಂಡ್ ಏಕೈಕ ಸಕ್ರಿಯ ಕೋವಿಡ್ ರೋಗಿ ಗುಣಮುಖ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿಕೆ
ಕೊಹಿಮಾ(ಏ.25): ನಾಗಲ್ಯಾಂಡ್ ರಾಜ್ಯವೂ ಕೋವಿಡ್ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಗಾಲ್ಯಾಂಡ್ (Nagaland) ರಾಜ್ಯದ ದಿಮಾಪುರ್ (Dimapur) ಜಿಲ್ಲೆಯ ಏಕೈಕ ಸಕ್ರಿಯ ಕೋವಿಡ್ ರೋಗಿಯು ಸೋಂಕಿನಿಂದ ಚೇತರಿಸಿಕೊಳ್ಳುವುದರೊಂದಿಗೆ ನಾಗಾಲ್ಯಾಂಡ್ ಭಾನುವಾರ ಕರೋನಾವೈರಸ್ ಮುಕ್ತ ರಾಜ್ಯವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 25, 2020 ರಂದು ಈಶಾನ್ಯ ರಾಜ್ಯ ನಾಗಲ್ಯಾಂಡ್‌ನಲ್ಲಿ ಮೂರು ಕೋವಿಡ್ ರೋಗಿಗಳು ಪತ್ತೆಯಾದ ನಂತರ ಇದೇ ಮೊದಲ ಬಾರಿಗೆ ರಾಜ್ಯದಲಲ್ಇ ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯವನ್ನು ಮುಟ್ಟಿದೆ ಎಂದು ಅವರು ಹೇಳಿದರು. ನಾಗಾಲ್ಯಾಂಡ್‌ನಲ್ಲಿ ಮೊದಲ ಕಾಣಿಸಿಕೊಂಡ ಮೂರು ಕೊರೋನಾ ವೈರಸ್ ಪ್ರಕರಣದ ರೋಗಿಗಳು ಚೆನ್ನೈನಿಂದ ಹಿಂದಿರುಗಿದವರಾಗಿದ್ದರು.
ಶಾಂಘೈನಲ್ಲಿ ಕೊರೋನಾ ಅಬ್ಬರ, ಜನರ ಓಡಾಟ ತಡೆಗೆ ಲೋಹದ ತಡೆಗೋಡೆ!
ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಸೋಂಕು ವರದಿಯಾಗಿಲ್ಲ. ಪ್ರಸ್ತುತ ಕೇಸ್‌ಲೋಡ್ 35,488 ರಷ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಇದುವರೆಗೆ 33,244 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚೇತರಿಕೆ ದರವು 93.68% ಆಗಿತ್ತು. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 760, ಒಟ್ಟಾರೆಯಾಗಿ 1,484 ರೋಗಿಗಳು ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಗಾಲ್ಯಾಂಡ್ ಇದುವರೆಗೆ 4,71,479 ಜನರಿಂದ ಮಾದರಿಗಳನ್ನು ಪರೀಕ್ಷಿಸಿದೆ. ಶನಿವಾರದವರೆಗೆ ರಾಜ್ಯದಲ್ಲಿ 16.16 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೋನಾ 4ನೇ ಅಲೆ ಪ್ರಾರಂಭ, ಒಮಿಕ್ರೋನ್ ಉಪತಳಿಯಿಂದ ಸೋಂಕು!
ಇತ್ತ ಕೋವಿಡ್ 4ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯವಾಗಲಿದೆ. ಈ ಬಗ್ಗೆ ಅಧಿಕೃತವಾಗಿ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಕೊರೋನಾ 4ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ಇಂದು (ಸೋಮವಾರ) ಮಹತ್ವದ ಸಭೆ ನಡೆದಿದ್ದು, ಕೊರೋನಾ ನಾಲ್ಕನೇ ಅಲೆಯ ತೀವ್ರತೆ ಮತ್ತು ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಜ್ಞರ ಜೊತೆ ಚರ್ಚೆ ನಡೆಸಿದರು. ಸಭೆ ಬಳಿಕ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಈಗಾಗಲೇ ಕೊರೋನಾ 4ನೇ ಅಲೆಯ ಆರಂಭದ ಲಕ್ಷಣಗಳು ಗೋಚರಿಸಿವೆ. ಮುಂದಿನ ನಾಲ್ಕೈದು ವಾರಗಳಲ್ಲೇ ನಾಲ್ಕನೇ ಅಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಆದರೆ, ಒಮಿಕ್ರೋನ್ ಉಪತಳಿಯಿಂದಲೇ ಹರಡುವುದರಿಂದ ವೇಗವಾಗಿ ಹರಡಿದರೂ ತೀವ್ರತೆ ಕಡಿಮೆ ಇರುತ್ತದೆ. ಆದರೂ ದೀರ್ಘಕಾಲೀನ ಅನಾರೋಗ್ಯ ಉಳ್ಳವರು ಎಚ್ಚರ ವಹಿಸಬೇಕು ಎಂದೂ ಅವರು ತಿಳಿಸಿದ್ದಾರೆ.
ದಿಲ್ಲಿ ಎಚ್ಚರಿಕೆ ಗಂಟೆ:
ಎರಡು ವಾರದ ಹಿಂದೆಯೇ ಒಮಿಕ್ರೋನ್ ಹೊಸ ಉಪತಳಿಗಳು ದೇಶದಲ್ಲಿ ಎರಡು ಕಡೆ ಪತ್ತೆಯಾಗಿವೆ. ಈಗಾಗಲೇ ಹಲವು ರಾಜ್ಯಗಳಿಗೆ ಹರಡಿರುತ್ತವೆ. ಹೀಗಾಗಿಯೇ ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿನ ಈ ಹಿಂದಿನ ಮೂರು ಅಲೆಗಳು ಕೂಡಾ ದೆಹಲಿಯಿಂದ ಆರಂಭವಾಗಿ ಮಹಾರಾಷ್ಟ್ರ, ಕೇರಳ ಅನಂತರ ಕರ್ನಾಟಕಕ್ಕೆ ಹರಡಿದ್ದವು. ಸದ್ಯ ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಿಕ ಲಕ್ಷಣಗಳಿದ್ದು, ಅನಂತರ ಮಹಾರಾಷ್ಟ್ರ, ಕೇರಳದಲ್ಲಿ ಆರಂಭವಾಗಲಿದೆ. ಮುಂದಿನ ನಾಲ್ಕು ವಾರಗಳಲ್ಲಿ ಕರ್ನಾಟಕದಲ್ಲಿಯೂ ನಾಲ್ಕನೇ ಅಲೆ ಅಲೆ ಕಾಣಿಸಿಕೊಳ್ಳಲಿದೆ. ಹೀಗಾಗಿ ದೆಹಲಿಯಲ್ಲಿನ ಪ್ರಕರಣಗಳ ಹೆಚ್ಚಳವನ್ನು ಎಚ್ಚರಿಕೆಯ ಗಂಟೆಯಾಗಿಯೇ ಪರಿಗಣಿಸಬೇಕು ಎಂದರು