Asianet Suvarna News Asianet Suvarna News

Nagaland civilian killings :ಕೇಂದ್ರದಿಂದ ತಲಾ 11 ಲಕ್ಷ ಪರಿಹಾರದ ಭರವಸೆ, ಭದ್ರತಾ ಪಡೆಗಳ ವಿರುದ್ಧ ಕೊಲೆ ಕೇಸ್

  • ನಾಗಾಲ್ಯಾಂಡ್‌ ಸರಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ
  • ಭದ್ರತಾ ಪಡೆಗಳ ವಿರುದ್ಧ ಕೊಲೆ ಪ್ರಕರಣ, ನ್ಯಾಯಾಲಯದ ವಿಚಾರಣೆ ಸ್ಥಾಪಿಸಿದ ಭಾರತೀಯ ಸೇನೆ!
  • ತಪ್ಪಾದ ಗುರುತಿನ ಪ್ರಕರಣ ಎಂದು ಸಂಸತ್ ನಲ್ಲಿ ಹೇಳಿದ ಗೃಹ ಸಚಿವ ಅಮಿತ್ ಶಾ
     
Nagaland Chief Minister Neiphiu Rio said that the Centre has given an ex-gratia amount of Rs 11 lakh each gow
Author
Bengaluru, First Published Dec 6, 2021, 6:49 PM IST

ಗುವಾಹಟಿ (ಡಿ.6):ನಾಗಾಲ್ಯಾಂಡ್‌ನಲ್ಲಿ (Nagaland)  ಡಿಸೆಂಬರ್ 4 ರಂದು ಸಂಜೆ ನಡೆದ ಭದ್ರತಾ ಪಡೆಗಳ (security forces) ಗುಂಡಿನ ದಾಳಿಗೆ 14 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ದುರಂತದಲ್ಲಿ ಮಡಿದ ಕುಟುಂಬದವರಿಗೆ ತಲಾ 5 ಲಕ್ಷ ರೂ ಪರಿಹಾರ ಮತ್ತು ಗಾಯಾಳುಗಳ ಸಂಪೂರ್ಣ ವೆಚ್ಚ ಭರಿಸುವುದಾಗಿ  ನ್ಯಾಗಾಲ್ಯಾಂಡ್ ಸರಕಾರ ಘೋಷಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಮೃತರ ಕುಟುಂಬಕ್ಕೆ ತಲಾ 11 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ ಎಂದು ನ್ಯಾಗಾಲ್ಯಾಂಡ್ ಮುಖ್ಯಮಂತ್ರಿ ನಿಫಿಯೋ ರಿಯೋ  ಮಾಹಿತಿ ನೀಡಿದ್ದಾರೆ. ಇಂದು ಮೊನ್‌ ಜಿಲ್ಲೆಯಲ್ಲಿ (Mon district)  ನಡೆದ ಮೃತರ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ನಿಫಿಯೂ ರಿಯೋ (Neiphiu Rio) ಪಾಲ್ಗೊಂಡಿದ್ದರು. 

 

Nagaland civilian killings: ನಾಗಾಲ್ಯಾಂಡ್‌ ನಾಗರಿಕರ ಹತ್ಯೆ, ನೀಯೋಗ ಕಳುಹಿಸಲಿರುವ ಮಮತಾ ಬ್ಯಾನರ್ಜಿ

ನ್ಯಾಯಾಲಯ ತನಿಖೆಗೆ ಭಾರತೀಯ ಸೇನೆ ಆದೇಶ!: ದುರಂತಕ್ಕೆ ಸಂಬಂಧಪಟ್ಟಂತೆ ಭಾರತೀಯ ಸೇನೆ ಕೋರ್ಟ್ ಆಫ್ ಎನ್ ಕ್ವೈರಿ (Court of Inquiry)ಗೆ ಆದೇಶ ನೀಡಿದೆ. ಅದರಂತೆ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ಭಾರತೀಯ ಸೇನೆಯು (Indian army) ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ ಎಂದು ಸೋಮವಾರ ವರದಿಯಾಗಿದೆ. ಈ ಬಗ್ಗೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು, 'ನಾಗಾಲ್ಯಾಂಡ್ ನಾಗರಿಕ ಹತ್ಯೆಗಳನ್ನು (Nagaland civilian killings) ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ಭಾರತೀಯ ಸೇನೆಯು ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ. ಅಧಿಕಾರಿಯನ್ನು ಈಶಾನ್ಯ ವಲಯದಲ್ಲಿ ಮಾತ್ರ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

Nagaland civilian killings: ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾಗಾಲ್ಯಾಂಡ್‌ ದುರಂತಕ್ಕೆ ರಾಹುಲ್ ಗಾಂಧಿ ಕಿಡಿ

ಭದ್ರತಾ ಪಡೆಗಳ ವಿರುದ್ಧ ಕೊಲೆ ಪ್ರಕರಣ ದಾಖಲು:  ಇನ್ನು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ 21ನೇ ಪ್ಯಾರಾ ವಿಶೇಷ ಪಡೆ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಸೋಮವಾರ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ಭದ್ರತಾ ಪಡೆಗಳಿಂದ 14 ನಾಗರಿಕರ ಹತ್ಯೆ ಖಂಡಿಸಿ ಬುಡಕಟ್ಟು ಸಂಸ್ಥೆಗಳು ಬಂದ್‌ಗೆ ಕರೆ ನೀಡಿವೆ. ಈ ನಡುವೆ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಗೊಂದಲ ಉಂಟಾಗಿದೆ. ಜಿಲ್ಲೆಯಲ್ಲಿನ ಕೊನ್ಯಾಕ್ ಯೂನಿಯನ್, ಗುಂಡಿನ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಹೇಳಿತ್ತು. ಆದರೆ ನಂತರ ಆ  ಸಂಖ್ಯೆಯನ್ನು 14ಕ್ಕೆ ಇಳಿಸಲಾಗಿದೆ.

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

ತಪ್ಪಾದ ಗುರುತಿನ ಪ್ರಕರಣ ಎಂದ  ಗೃಹ ಸಚಿವ ಅಮಿತ್ ಶಾ: ಸಂಸತ್‌ನ (parliament) ಉಭಯ ಸದನಗಳಲ್ಲಿ ನಾಗಾಲ್ಯಾಂಡ್ ನಲ್ಲಿ ಸೇನೆಯಿಂದ ಪ್ರಜೆಗಳ ಹತ್ಯೆಯಾಗಿರುವ ಪ್ರಕರಣ ಸದ್ದು ಮಾಡುತ್ತಿದ್ದು, ಈ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಹೇಳಿಕೆ ನೀಡಿದ್ದಾರೆ. "ಒಟಿಂಗ್ ಪ್ರದೇಶದಲ್ಲಿ ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ 21 ಕಮಾಂಡೋಗಳು ಅಡಗಿ ಕುಳಿತು ಶಂಕಿತ ಪ್ರದೇಶದಲ್ಲಿ ದಾಳಿಗೆ ಸಜ್ಜುಗೊಂಡಿದ್ದರು. ಅದೇ ಸಮಯಕ್ಕೆ ವಾಹನವೊಂದು ಅಲ್ಲಿಗೆ ಬಂದಿದ್ದರಿಂದ ನಿಲ್ಲುವಂತೆ ಸೂಚನೆ ನೀಡಲಾಯಿತು. ಆದರೆ ಸೂಚನೆಯನ್ನೂ ಧಿಕ್ಕರಿಸಿ ಪರಾರಿಯಾಗಲು ಯತ್ನಿಸಿದಾದ ಆ ವಾಹನದಲ್ಲಿ ಉಗ್ರರನ್ನು ಸಾಗಿಸಲಾಗುತ್ತಿದೆ ಎಂಬ ಅನುಮಾನದೊಂದಿಗೆ ಸೇನೆ ದಾಳಿ ನಡೆಸಿದೆ ಎಂದಿದ್ದಾರೆ. 

 

Follow Us:
Download App:
  • android
  • ios