Asianet Suvarna News Asianet Suvarna News

Nagaland civilian killings: ನಾಗಾಲ್ಯಾಂಡ್‌ ನಾಗರಿಕರ ಹತ್ಯೆ, ನೀಯೋಗ ಕಳುಹಿಸಲಿರುವ ಮಮತಾ ಬ್ಯಾನರ್ಜಿ

  • ನಾಗಾ ಲ್ಯಾಂಡ್ ಗೆ ಟಿಎಂಸಿ ನಿಯೋಗ ಕಳಿಸಲು ದೀದಿ ನಿರ್ಧಾರ
  • ಐದು ಜನರ ತಂಡ ಕಳುಹಿಸಲು ನಿರ್ಧರಿಸಿರುವ ಮಮತಾ ಬ್ಯಾನರ್ಜಿ
  • ಸಾವನ್ನಪ್ಪಿದ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳಲಿರುವ ನಿಯೋಗ
Mamata Banerjee to send team to mon district to meet victims of Nagaland civilian killings
Author
Bengaluru, First Published Dec 6, 2021, 11:51 AM IST

ಗುವಾಹಟಿ (ಡಿ.5): ನಾಗಾಲ್ಯಾಂಡ್‌ನಲ್ಲಿ (Nagaland)  ಡಿಸೆಂಬರ್ 4 ರಂದು ಸಂಜೆ ನಡೆದಿದ್ದ 14 ಮಂದಿ ನಾಗರಿಕರ ಹತ್ಯೆ (civilian killings) ಘಟನೆಯನ್ನು ಖಂಡಿಸಿ ಭದ್ರತಾ ಪಡೆಗಳ (security forces) ವಿರುದ್ಧ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಹಿಂಸಾರೂಪಕ್ಕೆ ತಲುಪಿದೆ. ದೇಶದ ಹಲವು ನಾಯಕರುಗಳು ಕೇಂದ್ರ ಸರಕಾರ ಮತ್ತು ಗೃಹ ಸಚಿವಾಲಯ ಇದಕ್ಕೆ ಸೂಕ್ತ ಉತ್ತರ ನೀಡಬೇಕು. ತನಿಖೆ ನಡೆಯಬೇಕೆಂದು ಆಗ್ರಹಿಸಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ (west bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee ) ಅವರು ಘಟನೆ ನಡೆದ  ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಗೆ  (Mon district) ಟಿಎಂಸಿ ನಿಯೋಗ ಕಳಿಸಲು ನಿಯೋಗವೊಂದನ್ನು ಕಳುಹಿಸಲು ನಿರ್ಧರಿಸಿದ್ದಾರೆ.  ಈ ನಿಯೋಗವು ಸಾವನ್ನಪ್ಪಿದ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳಲಿದೆ. 

ಈ ನಿಯೋಗದಲ್ಲಿ ಮಿಜೋರಾಂನ ಮಾಜಿ ಅಡ್ವೊಕೇಟ್ ಜನರಲ್ ಬಿಸ್ವಜಿತ್ ದೇಬ್, ಪ್ರಸೂನ್ ಬ್ಯಾನರ್ಜಿ, ಸುಸ್ಮಿತಾ ದೇವ್, ಅಪರೂಪ ಪೊದ್ದಾರ್ ಮತ್ತು ಸಂತಾನು ಸೇನ್ ರನ್ನು ಒಳಗೊಂಡ  ಐದು ಜನರ ತಂಡ ಇರಲಿದೆ. ಈ ಹಿಂದೆ ನಡೆದ ಹಲವು ಘಟನೆಗಳ ಸಮಯದಲ್ಲೂ ದೀದಿ ತನ್ನ ನಿಯೋಗವನ್ನು ಕಳುಹಿಸುತ್ತಿದ್ದರು. ದೆಹಲಿ ಗಡಿ ಭಾಗಗಳಲ್ಲಿ ರೈತರ ಪ್ರತಿಭಟನೆ, ಲಖೀಂಪುರ ರೈತರ ಹತ್ಯೆ ಸಮಯದಲ್ಲಿ ಕೂಡ ಮಮತಾ ಬ್ಯಾನರ್ಜಿ ನಿಯೋಗ ಕಳುಹಿಸಿದ್ದರು.

Nagaland firing: ಮೊಬೈಲ್‌, ಇಂಟರ್‌ನೆಟ್‌ ಎಸ್‌ಎಂಎಸ್‌ ಸೇವೆ ಸ್ಥಗಿತ

 ಘಟನೆ ಬಗ್ಗೆ  ವಿಷಾಧ ವ್ಯಕ್ತಪಡಿಸಿದ್ದ ದೀದಿ: ಈ ದುರಂತಕ್ಕೆ ಸಂಬಂಧಿಸಿ ಭಾನುವಾರ ಟ್ವೀಟ್ ಮಾಡಿದ್ದ  ಮಮತಾ ಬ್ಯಾನರ್ಜಿ (Mamata Banerjee ) " ನ್ಯಾಗಲ್ಯಾಂಡ್ ನಿಂದ ಸುದ್ದಿ ಆತಂಕಕಾರಿಯಾಗಿಯಾಗಿದೆ. ಅಗಲಿದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯ ಸಂಪೂರ್ಣ ತನಿಖೆಯನ್ನು ನಾವು ತಿಳಿದುಕೊಳ್ಳಬೇಕು ಮತ್ತು ಎಲ್ಲಾ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಿ" ಎಂದು ಬರೆದುಕೊಂಡಿದ್ದರು. 

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

ಮೊಬೈಲ್‌ ಸೇವೆ, ಇಂಟರ್‌ನೆಟ್‌ ಬಂದ್:  ಘಟನೆ ಬಳಿಕ ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ ಸೇವೆ, ಇಂಟರ್‌ನೆಟ್‌ (Internet ) ಹಾಗೂ ಬಲ್ಕ್‌ ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

ಘಟನೆ ಹಿನ್ನೆಲೆ: ಶನಿವಾರ ಸಂಜೆ ಕೆಲಸ ಮುಗಿಸಿ ನಾಗರಿಕರು ಪಿಕ್ ಅಪ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ  ದಂಗೆಕೋರರು ಎಂದು ತಪ್ಪಾಗಿ ಭಾವಿಸಿದ ಸೇನಾ ಸಿಬ್ಬಂದಿ  ಗುಂಡಿನ ದಾಳಿ ನಡೆಸಿತ್ತು. ಈ ಮಧ್ಯೆ ಕೆಲಸಕ್ಕೆ ತರಳಿದ್ದ ಮನೆ ಮಂದಿ ರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆ ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಅವರನ್ನು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಉಂಟಾದ ಗಲಭೆಯಲ್ಲಿ ಒಬ್ಬ ಯೋಧ ಸಾವಿಗೀಡಾಗಿದ್ದಲ್ಲದೇ, ಸೇನಾ ವಾಹನಗಳು ಆಕ್ರೋಶಿತರ ಕೋಪಕ್ಕೆ ಆಹುತಿಯಾಗಿವೆ. ಘಟನೆ ಖಂಡಿಸಿ ಭಾನುವಾರ ಮಧ್ಯಾಹ್ನ ಗಲಭೆ  ಎಲ್ಲೆಡೆ ಹರಡಿದ್ದು, ಕೋಪಗೊಂಡ ಜನರು ಕೊನ್ಯಾಕ್ ಯೂನಿಯನ್‌ಗೆ ಸೇರಿದ  ಕಚೇರಿಗಳನ್ನು ಮತ್ತು ಆ ಪ್ರದೇಶದಲ್ಲಿದ್ದ ಅಸ್ಸಾಂ ರೈಫಲ್ಸ್ (Assam Rifles) ಶಿಬಿರವನ್ನು ಧ್ವಂಸಗೊಳಿಸಿದ್ದಾರೆ.

Follow Us:
Download App:
  • android
  • ios