ಮಂಪರು ಪರೀಕ್ಷೆಯಲ್ಲಿ ಇಡೀ ಕೃತ್ಯದ ಮಾಸ್ಟರ್‌ ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ. 

ನವದೆಹಲಿ(ಜ.14):  ಡಿ.13ರಂದು ಸಂಸತ್ ಭವನದ ಒಳಗೆ 'ಹೊಗೆ ಬಾಂಬ್‌' ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಇಡೀ ಕೃತ್ಯದ ಮಾಸ್ಟರ್‌ ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ ಪೊಲೀಸ್ ಮೂಲಗಳು ತಿಳಿಸಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಮಂಪರು ಪರೀಕ್ಷೆಯಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮಗೆ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ವೇಳೆ ಸತ್ಯ ಹೊರಬಂದಿದೆ. 

‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್‌? ಸಂಸತ್‌ ದಾಳಿಗೆ ಪ್ಲ್ಯಾನ್‌ ಬಿ ಸಹ ಯೋಜಿಸಿದ್ದ ದಾಳಿಕೋರರು!

ಈ ಹಿಂದೆ ಸಂಸತ್ ಸ್ಫೋಟದ ರೂವಾರಿ ಬಂಗಾಳ ಮೂಲದ ಲಲಿತ್ ಝಾ ಎಂದು ಹೇಳಲಾಗಿತ್ತು.