ಆಂಧ್ರ ಪ್ರದೇಶ(ಡಿ.06): ಕೊರೋನಾ ವೈರಸ್ ಇಡೀ ವಿಶ್ವವನ್ನೇ ನಲುಗಿಸಿದೆ. ಭಾರತ ಕೊರೋನಾ ನಿಯಂತ್ರಣಕ್ಕ ಸರ್ವ ಪ್ರಯತ್ನ ಮಾಡುತ್ತಿದೆ. ಇದೀಗ ಲಸಿಕೆಯಿಂದ ಸಂಪೂರ್ಣ ನಿಯಂತ್ರಣ ಮಾತ್ರ ಸಾಧ್ಯ ಎಂದು ಲಸಿಕೆ ಬಿಡುಗಡೆಗೆ ಎಲ್ಲಾ ದೇಶಗಳು ಕಾಯುತ್ತಿವೆ.

ಕೊರೋನಾ ಲಸಿಕೆ ಇನ್ನು ಮಾರುಕಟ್ಟೆಗೆ ಬಂದಿಲ್ಲ. ಇದರ ನಡುವೆ ನಿಗೂಢ ರೋಗವೊಂದು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ನಿಗೂಢ ರೋಗ ಕಾಣಿಸಿಕೊಂಡಿದೆ. ಇದಕ್ಕಿದ್ದಂತೆ ಅಸ್ವಸ್ಥರಾಗೋ ಮೂಲಕ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೂರ್ಚೆ ರೋಗದ ಕೆಲ ಲಕ್ಷಣಗಳು ಹೊಂದಿದೆ. ಆದರೆ ನಿಖರವಾಗಿ ಯಾವ ರೋಗ ಎಂದು ವೈದ್ಯರಿಗೆ ತಿಳಿಯುತ್ತಿಲ್ಲ.

ರೈತರಿಂದ ಭಾರತ್ ಬಂದ್ ಖಚಿತ, ಸನ್ನಿ ಪೋಸ್ಟ್‌ಗೆ ಫ್ಯಾನ್ಸ್ ಚಕಿತ: ಡಿ.6ರ ಟಾಪ್ 10 ಸುದ್ದಿ!..

ಎಲೂರಿನ ಸುತ್ತಮುತ್ತ ಪ್ರದೇಶದ ಸುಮಾರು 228 ಮಂದಿ ಇದುವರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲಾ ಎಲ್ಲೂ ಕೂಡ ಭೇಟಿಯಾಗಿಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಆದರೂ ಎಲ್ಲರಿಗೂ ಒಂದೇ ರೀತಿ ನಿಗೂಢ ರೋಗ ಕಾಣಿಸಿಕೊಂಡಿದೆ. ವೃದ್ಧರು ಮತ್ತು ಮಕ್ಕಳು ಹೆಚ್ಚಾಗಿ ಈ ನಿಗೂಢ ರೋಗಕ್ಕೆ ತುತ್ತಾಗಿದ್ದಾರೆ.

ಒರ್ವ ಬಾಲಕಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ತುರ್ತು ನಿಘಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಆಸ್ಪತ್ರೆ ದಾಖಲಾಗಿರುವ ರೋಗಿಗಳ ರಕ್ತದ ಮಾದರಿ ಸೇರಿದಂತೆ ಎಲ್ಲಾ ಸ್ಯಾಂಪಲ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.