Asianet Suvarna News Asianet Suvarna News

ಓವೈಸಿಗೆ ಶಾಕ್, ಮುಸ್ಲಿಮ್ ಯುವಕರಿಂದ ಕಪ್ಪು ಬಾವುಟ ಪ್ರದರ್ಶಿಸಿ ಮೋದಿ ಮೋದಿ ಘೋಷಣೆ!

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೇ ಮೊದಲ ಭಾರಿ ತಮ್ಮದೇ ಸಮುದಾಯದಿಂದ ತೀವ್ರ ವಿರೋಧ ಎದುರಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖಂಡನ ಪ್ರಚಾರಕ್ಕೆ ತೆರಳಿದ ಒವೈಸಿಗೆ ಸ್ಥಳೀಯ ಮುಸ್ಲಿಂ ಯುವಕರ ಪ್ರತಿಭಟನೆ ಬಿಸಿ ತಟ್ಟಿದೆ. ಕಪ್ಪು ಪಟ್ಟಿ ಪ್ರದರ್ಶಿಸಿ, ಮೋದಿ ಮೋದಿ ಘೋಷಣೆಯೂ ಮೊಳಗಿದೆ. ಈ ವಿಡಿಯೋ ವೈರಲ್ ಆಗಿದೆ.
 

Muslims Youth shows Black flags chant modi modi slogan against AIMIM Asaduddin Owaisi during Gujarat assembly election rally ckm
Author
First Published Nov 14, 2022, 4:19 PM IST

ಸೂರತ್(ನ.14): ಮುಸ್ಲಿಮ್ ಸಮುದಾಯದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೀಗ ತಮ್ಮದೇ ಸಮುದಾದಿಂದ ಪ್ರತಿಭಟನೆ ಎದುರಿಸಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಅಸಾದುದ್ದೀನ್ ಓವೈಸಿ ಈಗಾಗಲೇ ಗುಜರಾತ್‍‌ನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮುಸ್ಲಿಮ್ ಪ್ರಾಬಲ್ಯದ ಪೂರ್ವ ಸೂರತ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ ಓವೈಸಿಗೆ ಹಿನ್ನಡೆಯಾಗಿದೆ.  AIMIM  ಪಕ್ಷದ ಪೂರ್ವ ಸೂರತ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರಕ್ಕೆ ಬೃಹತ್ ವೇದಿಕೆ ರೆಡಿ ಮಾಡಲಾಗಿತ್ತು. ಭಾಷಣಕ್ಕಾಗಿ ವೇದಿಕೆ ಮೇಲೆ ಹತ್ತಿದ ಅಸಾದುದ್ದೀನ್ ಓವೈಸಿ ಭಾಷಣ ಆರಂಭಿಸುತ್ತಿದ್ದಂತೆ ಮುಸ್ಲಿಮ್ ಯುವಕರು ಗೋ ಬ್ಯಾಕ್ ಒವೈಸಿ ಘೋಷಣೆ ಕೂಗಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಇಷ್ಟೇ ಅಲ್ಲ ಇದೇ ವೇಳೆ ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಒವೈಸಿ ತೀವ್ರ ಮುಜುಗರ ಅನುಭವಿಸಿದ್ದಾರೆ.

ಮುಸ್ಲಿಮ್ ಯುವಕರ ಈ ಘೋಷಣೆಯಿಂದ ಅಸಾದುದ್ದೀನ್ ಓವೈಸಿ ತೀವ್ರ ಮುಜುಗರ ಅನುಭವಿಸಿದ್ದಾರೆ. ಸ್ಥಳೀಯ ಮುಸ್ಲಿಮ್ ಯುವಕರ ನಡೆ ಓವೈಸಿಗೆ ತೀವ್ರ ಆಘಾತ ತಂದಿದೆ. ಒಂದು ಕ್ಷಣ ಎನೂ ಮಾತನಾಡಲು ಆಗದೆ ಕಂಗಾಲಾಗಿದ್ದಾರೆ. ಓವೈಸಿ ತಮ್ಮ ಪ್ರತಿ ಭಾಷಣದಲ್ಲಿ ಮುಸ್ಲಿಮ್ ಕಾರ್ಡ್ ಪ್ಲೇ ಮಾಡುತ್ತಾರೆ. ಇತ್ತೀಚೆಗೆ ಮುಸ್ಲಿಮ್ ಕಾರ್ಡ್ ಜೊತೆಗೆ ದಲಿತ ಹಾಗೂ ಒಬಿಸಿ ಕಾರ್ಡ್ ಕೂಡ ಪ್ಲೇ ಮಾಡಿದ್ದಾರೆ. ಇದು AIMIM ಸಮಾವೇಶಕ್ಕೆ ಆಗಮಿಸಿದ ಸ್ಥಳೀಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

 

 

AIMIM ಸದಸ್ಯತ್ವ ಹೆಚ್ಚಿಸಿಕೊಳ್ಳಲು Owaisi ಪಕ್ಷದಿಂದ Biryani ಆಫರ್‌!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘರ್ಜಿಸುತ್ತಾ ಭಾಷಣ ಆರಂಭಿಸಿದ ಒವೈಸಿಗೆ ಸ್ಥಳೀಯ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒವೈಸಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದಾರೆ. 

ಒವೈಸಿ ಸಂಚರಿಸುತ್ತಿದ್ದ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು
ಇಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ತಾವು ಪ್ರಯಾಣಿಸುವ ವೇಳೆ ತಾವು ಇದ್ದ ಕೋಚ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದುಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್‌ ಓವೈಸಿ ಆರೋಪಿಸಿದ್ದಾರೆ. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಆರೋಪವನ್ನು ರೈಲ್ವೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ‘ಅಂಕಲೇಶ್ವರ ಹಾಗೂ ಸೂರತ್‌ ನಡುವೆ ಹಳಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಪಶ್ಚಿಮ್‌ ಎಕ್ಸ್‌ಪ್ರೆಸ್‌ನ ವೇಗಕ್ಕೆ ಕಂಪನವಾಗಿ ಹಳಿ ಮೇಲಿದ್ದ ಕಲ್ಲುಗಳು ಸಿಡಿದು ವಂದೇ ಭಾರತ್‌ ರೈಲಿಗೆ ಬಡೆದಿವೆ. ಕಲ್ಲು ಸಿಡಿತಕ್ಕೆ ಕಿಟಕಿ ಗಾಜು ಸೀಳಿದೆ. ಆದರೆ ಯಾರಿಗೂ ಗಾಯವಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.1, 5ರಂದು ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಒವೈಸಿ ಗುಜರಾತ್‌ಗೆ ಬಂದಿದ್ದರು.

 

ನಮ್ಮ ಹಿಜಾಬ್‌, ಗಡ್ಡ ಕೊನೆಗೆ ನಾವು ಆಡುವ ಕ್ರಿಕೆಟ್‌ ಬಗ್ಗೆಯೂ ನಿಮಗೆ ದ್ವೇಷವಿದೆ: ಓವೈಸಿ!

ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಇಲ್ಲ: ಓವೈಸಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ, ನಾವು ಬಿಜೆಪಿಯ ಬಿ ಟೀಂ ಕೂಡ ಅಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರ ಕೇವಲ ಕ್ಯಾಂಪೇನ್‌ ಮಾಡಿದ್ದೆವು. ಆದರೆ, ಈ ಬಾರಿ ಜೆಡಿಎಸ್‌ ಜೊತೆಗೆ ಮೈತ್ರಿಯ ಮಾತಿಲ್ಲ. ಮುಂಬರುವ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ, ಜೆಡಿಎಸ್‌ನವರು ಅವರ ಕೆಲಸ ಮಾಡಲಿ ಎಂದರು.

Follow Us:
Download App:
  • android
  • ios