ನಮ್ಮ ಹಿಜಾಬ್‌, ಗಡ್ಡ ಕೊನೆಗೆ ನಾವು ಆಡುವ ಕ್ರಿಕೆಟ್‌ ಬಗ್ಗೆಯೂ ನಿಮಗೆ ದ್ವೇಷವಿದೆ: ಓವೈಸಿ!

ಮುಂದಿನ ವರ್ಷದ ಏಷ್ಯಾಕಪ್‌ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದ್ದು, ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳಿಸುವುದಿಲ್ಲ ಎಂದು ಹೇಳಿದೆ. ಇದನ್ನು ಕಟುವಾಗಿ ಟೀಕಿಸಿರುವ ಎಐಎಂಐಎಂ ಚೀಫ್‌ ಅಸಾದುದ್ದೀನ್‌ ಓವೈಸಿ, ನಿಮಗೆ ದೇಶದ ಮೇಲೆ ಅಷ್ಟೆಲ್ಲಾ ಪ್ರೀತಿ ಇದ್ದರೆ, ಆಸೀಸ್‌ ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಆಡಬೇಡಿ ಎಂದು ಹೇಳಿದ್ದಾರೆ.
 

AIMIM chief Asaduddin Owaisi says You have a problem with our hijab with our beard and also with our cricket san

ನವದೆಹಲಿ (ಅ. 22): ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳಿಸಲು ಬಿಸಿಸಿಐ ನಿರಾಕರಿಸಿದ ವಿಚಾರವಾಗಿ ಮಾತನಾಡಿರುವ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ, ಪಾಕಿಸ್ತಾನಕ್ಕೆ ತಂಡವನ್ನು ಕಳಿಸುತ್ತಿಲ್ಲ ಎಂದಾದಲ್ಲಿ ಮೆಲ್ಬೋರ್ನ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಟವಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. 'ಪಾಕಿಸ್ತಾನಕ್ಕೆ ಹೋಗಿ ಆಡೋದಿಲ್ಲ ಅಂತೀರಿ, ಹಾಗಿದ್ದಲ್ಲಿಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ವಿರುದ್ಧ ನಾಳೆ ಯಾಕೆ ಆಟವಾಡುತ್ತಿದ್ದೀರಿ? ನೀವು ಆಡಬಾರದಿತ್ತು ತಾನೆ. ಪಾಕಿಸ್ತಾನಕ್ಕೆ ಹೋಗೋದಿಲ್ಲ. ಆದರೆ, ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ವಿರುದ್ಧ ಆಡ್ತೇವೆ ಅಂದರೆ ಏನರ್ಥ. ಈ ಪ್ರೀತಿಗೆ ಏನನ್ನೋಣ? ಪಾಕಿಸ್ತಾನದ ವಿರುದ್ಧ ನಾವು ಆಡೋದೇ ಬೇಡ. ಪಾಕಿಸ್ತಾನದ ವಿರುದ್ಧ ಆಡಿಲ್ಲ ಎಂದಾದಲ್ಲಿ ಆಗೋದಾದರೂ ಏನು? ಟಿವಿಯವರಿಗೆ ಒಂದು 2 ಸಾವಿರ ಕೋಟಿ ನಷ್ಟವಾಗಬಹುದು. ಆದರೆ, ಇದಕ್ಕಿಂತ ಭಾರತವೇ ಮುಖ್ಯ? ಹಾಗಾಗಿ ಪಾಕಿಸ್ತಾನದ ವಿರುದ್ಧ ಭಾರತ ಆಡೋದೇ ಬೇಡ ಎಂದು ಹೇಳಿದ್ದಾರೆ. ಪಾಕಿಸ್ತಾನದ ಅತಿಥ್ಯದಲ್ಲಿ ನಡೆಯಲಿರುವ 2023ರ ಏಷ್ಯಾಕಪ್‌ಗೆ ಭಾರತ ತಂಡವನ್ನು ಕಳಿಸುತ್ತಿಲ್ಲ ಎಂದು ನಿರ್ಧಾರ ಮಾಡಿದ ಬಳಿಕ ಈ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಗೊತ್ತಿಲ್ಲ ಪಂದ್ಯದಲ್ಲಿ ಯಾರು ಗೆಲುವು ಸಾಧಿಸ್ತಾರೆ ಅನ್ನೋದು. ಹಾಗಿದ್ದರೂ ನಾನು ಭಾರತ ಗೆಲುವು ಸಾಧಿಸಲಿ ಎಂದು ಬಯಸುತ್ತೇನೆ. ನಮ್ಮ ಮಕ್ಕಳಾದ ಮೊಹಮದ್‌ ಶಮಿ ಹಾಗೂ ಮೊಹಲದ್ ಸಿರಾಜ್‌ ಪಾಕಿಸ್ತಾನವನ್ನು ಸೋಲಿಸಲು ಶ್ರೇಷ್ಠ ಆಟವಾಡಲಿ ಎಂದು ಬಯಸೋದಾಗಿ ಹೇಳಿದ್ದಾರೆ. "ಆದರೆ ಈ ಜನರು ಭಾರತ ಗೆದ್ದರೆ ಎದೆಯನ್ನು ಬಡಿದುಕೊಂಡು ಕೇಕೆ ಹಾಕುತ್ತಾರೆ ಹಾಗೇನಾದರೂ ಭಾರತ ಸೋತರೆ, ಅವರು ಯಾರ ತಪ್ಪು ಎಂದು ಹುಡುಕಲು ಪ್ರಾರಂಭಿಸುತ್ತಾರೆ. ಇವರಿಗಿರುವ ಸಮಸ್ಯೆ ಏನು ಅನ್ನೋದು ಅರ್ಥವಾಗಿಲ್ಲ. ಇದು ಕ್ರಿಕೆಟ್ ಅಷ್ಟೇ," ಹೈದರಾಬಾದ್ (Hyderabad MP) ಸಂಸದರು ತಂಡದಲ್ಲಿರುವ ಮುಸ್ಲಿಂ ಆಟಗಾರರನ್ನು (Muslim players) ಟ್ರೋಲ್ ಮಾಡುವ ಕುರಿತು ಮಾತನಾಡಿದ್ದಾರೆಮ "ನಿಮಗೆ ನಮ್ಮ ಹಿಜಾಬ್ (Hijab), ನಮ್ಮ ಗಡ್ಡ ಮತ್ತು ನಮ್ಮ ಕ್ರಿಕೆಟ್‌ನಲ್ಲಿಯೂ ಸಮಸ್ಯೆ ಕಾಣುತ್ತಿದೆ' ಎಂದು ಓವೈಸಿ ಹೇಳಿದರು.

ಟೀಂ ಇಂಡಿಯಾ ಏಷ್ಯಾಕಪ್ ಆಡಲು ಪಾಕ್‌ ಪ್ರವಾಸ ಕೈಗೊಳ್ಳದಿರುವ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು..?

ಬಿಸಿಸಿಐ ಕಾರ್ಯದರ್ಶಿಯಾಗಿರುವ ಹಾಗೂ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥರೂ ಆಗಿರುವ ಜಯ್‌ ಶಾ (BCCI secretary Jay Shah), ಮುಂದಿನ ವರ್ಷದ ಏಷ್ಯಾಕಪ್‌ (Asian Cricket Council) ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಆದರೆ, ಭಾರತ (India) ಪಾಕಿಸ್ತಾನ (Pakistan) ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದ್ದರು.

T20 World Cup 2022 ಇಂಡೋ ಪಾಕ್ ಪಂದ್ಯಕ್ಕೆ ಮಳೆ ಭೀತಿ, ರಿಸರ್ವ್ ಡೇ ಇದೆಯಾ?

ಇದರ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೂಡ, ನೀವು ಹಾಗೇನಾದರೂ ಮಾಡಿದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ ಎಂದು ಹೇಳಿತ್ತು. ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಅಂತಿಮ ನಿರ್ಧಾರವನ್ನು ಗೃಹ ಸಚಿವಾಲಯ ತೆಗೆದುಕೊಳ್ಳುತ್ತದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಪಾಕಿಸ್ತಾನದ ಬೆದರಿಕೆಯ ಕುರಿತು ಸಚಿವರು, ಎಲ್ಲಾ ದೇಶಗಳು ವಿಶ್ವಕಪ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios