ಸ್ನೇಹಿತೆ ಜತೆ ವಾಕ್: ಬಾಲಕನ ಮೇಲೆ ಲವ್ ಜಿಹಾದ್ ಕೇಸ್ | ಲವ್ ಜಿಹಾದ್ ಆರೋಪ ನಿರಾಕರಿಸಿದ ಸ್ನೇಹಿತೆ
ಲಖನೌ(ಡಿ.26): ಹಿಂದೂ ಸ್ನೇಹಿತೆ ಜತೆ ನಡೆದುಕೊಂಡು ಹೋದ ಕಾರಣಕ್ಕೆ ಮುಸ್ಲಿಂ ಧರ್ಮದ ಅಪ್ರಾಪ್ತನ ಮೇಲೆ ನೂತನ ಲವ್ ಜಿಹಾದ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಡಿ.14ರಂದು ದಲಿತ ಬಾಲಕಿ ಮತ್ತು ಮುಸ್ಲಿಂ ಬಾಲಕ ಸ್ನೇಹಿತರ ಹುಟ್ಟಿದ ಹಬ್ಬದ ಪಾರ್ಟಿ ಮುಗಿಸಿ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದರು. ಆಗ ಗುಂಪೊಂದು ಹಿಂಬಾಲಿಸಿ, ಥಳಿಸಿ ಪ್ರಶ್ನಿಸಿತ್ತು.
ಹಣ ಪಡೆದು ವಂಚನೆ: ನಿರ್ಮಾಪಕ ಕೆ. ಮಂಜು ಸೇರಿ ನಾಲ್ವರ ಮೇಲೆ ಎಫ್‌ಐಆರ್
ಇಬ್ಬರೂ ಬೇರೆ ಬೇರೆ ಧರ್ಮದವರು ಎಂದು ತಿಳಿದ ಅವರು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದರು. ಈ ದೂರಿನ ಅನ್ವಯ ಅಪ್ರಾಪ್ತ ಬಾಲಕನ ಮೇಲೆ ಲವ್ ಜಿಹಾದ್ ಕಾಯ್ದೆ, ಎಸ್‌ಸಿ/ಎಸ್‌ಟಿ ಕಾಯ್ದೆ, ಪೋಕ್ಸೋ ಕಾಯ್ದೆಯಡಿಯೂ ಕೇಸು ದಾಖಲಿಸಿ ಬಂಧಿಸಲಾಗಿದೆ.
ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಲಾಗಿದೆ. ಆದರೆ ಬಾಲಕಿ ತಂದೆ ಇದನ್ನು ಅಲ್ಲಗಳೆದು, ‘ನನ್ನ ಮಗಳ ಮೇಲೆ ನನಗೆ ನಂಬಿಕೆ ಇದೆ. ಅವಳು ಸ್ನೇಹಿತನ ಜೊತೆ ನಡೆದುಕೊಂಡು ಹೋಗಿದ್ದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ.
ಡ್ಯಾಂ ನೀರಿನಲ್ಲಿ ಮುಳುಗಿ ಮಲೆಯಾಳಂ ಖ್ಯಾತ ನಟ ದುರಂತ ಸಾವು
ಇತ್ತ ಬಾಲಕಿ ಸಹ, ‘ಹುಟ್ಟಿದ ಹಬ್ಬದ ಪಾರ್ಟಿ ಮುಗಿಸಿ ಸ್ನೇಹಿತನ ಜೊತೆ ನಡೆದುಕೊಂಡು ಹೋಗುತ್ತಿದ್ದದನ್ನು ಕೆಲವರು ವಿಡಿಯೋ ಮಾಡಿದ್ದರು. ಸದ್ಯ ಅದನ್ನೀಗ ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ. ಆದರೆ ಅಂಥದ್ದೇನೂ ಇಲ್ಲ. ಇದನ್ನು ಜಿಲ್ಲಾಧಿಕಾರಿ ಬಳಿಯೂ ಹೇಳಿದ್ದೇನೆ’ ಎಂದು ತಿಳಿಸಿದ್ದಾಳೆ.
