ಕೊಚ್ಚಿನ್(ಡಿ. 25)  ಮಲಯಾಳಂ ನ ಜನಪ್ರಿಯ ನಟ ಅನಿಲ್ ನೆಡುಮಂಗದ್ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.  ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಕನ್ನಡದ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

'ಅಯ್ಯಪ್ಪನುಂ ಕೋಶಿಯುಂ' ಸೇರಿ ಹಲವಾರು ಜನಪ್ರಿಯ ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದ ಅನಿಲ್ ನೆಡುಮಂಗದ್ ಮಲನ್‌ಕರ ಡ್ಯಾಂನಲ್ಲಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮಾಸ್ತಿಗುಡಿ ದುರಂತ ಹೇಗೆ ಸಂಭವಿಸಿತು?

ಮಲನ್‌ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ 'ಪೀಸ್‌' ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್‌ಕರ ಡ್ಯಾಂ ಗೆ ಹೋಗಿದ್ದರು.  ಈಜಾಡುವ ವೇಳೆ ಆಯತಪ್ಪಿದ್ದು ದುರಂತ ಸಾವಿಗೀಡಾಗಿದ್ದಾರೆ.

ಮಲೆಯಾಳಂ, ತೆಲಗು ಮತ್ತು ತಮಿಳಿನ ಅನೇಕ ನಟರು ಅನಿಲ್  ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಮಾಸ್ತಿಗುಡಿ  ಚಿತ್ರೀಕರಣದ ವೇಳೆಯೇ ಅವಗಢ ಸಂಭವಿಸಿತ್ತು. ಆದರೆ ಈ ಪ್ರಕರಣದಲ್ಲಿ ಸ್ನೇಹಿತರ ಜತೆ ಈಜಲು ತೆರಳಿದ್ದಾಗ ನಟ ಕೊನೆ ಉಸಿರೆಳೆದಿದ್ದಾರೆ.