ಭಜನೆ ಮಾಡಿದ ಕೂಡಲೇ ಹಿಂದೂಗಳಾಗುತ್ತಾರಾ: Mehbooba Mufti ಹೇಳಿಕೆಗೆ Farooq Abdullah ಆಕ್ರೋಶ

ಜಮ್ಮು ಕಾಶ್ಮೀರದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಜನೆ ಹಾಡಿಸಿದ್ದು ಈಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದು ಕೇಂದ್ರ ಸರ್ಕಾರದ ಹಿಂದುತ್ವ ಅಜೆಂಡಾ ಎಂದು ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದರೆ, ಮುಫ್ತಿ ವಿರುದ್ಧ ಫಾರೂಕ್ ಅಬ್ದುಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. 

mehbooba mufti claims students forced to sing bhajans in jammu and kashmir school farooq abdullah reaction ash

ಮುಸ್ಲಿಂ ಮಕ್ಕಳನ್ನು ಶಾಲೆಗಳಲ್ಲಿ ಭಜನೆ (Bhajans) ಹಾಡುವಂತೆ ಒತ್ತಾಯಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾವನ್ನು (Hindutva Ajenda) ಮುಂದಿಡುತ್ತಿದೆ ಎಂದು ಮಾಜಿ ಸಿಎಂ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಶಾಲೆಗಳಲ್ಲಿ ಸೆಪ್ಟೆಂಬರ್ 13 ರಂದು ಶಾಲೆಗಳು "ಸರ್ವ ನಂಬಿಕೆಯ ಪ್ರಾರ್ಥನೆ - ರಘುಪತಿ ರಾಘವ ರಾಜಾ ರಾಮ್.. ಈಶ್ವರ ಅಲ್ಲಾ ತೇರೋ ನಾಮ್" ಅನ್ನು ಪಠಿಸಲು ಸರ್ಕಾರಿ ಆದೇಶ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ. ಇನ್ನು, ಮೆಹಬೂಬಾ ಮುಫ್ತಿಯವರ ಕಾಮೆಂಟ್‌ಗಳು ಬಿಜೆಪಿಯಿಂದ ತೀವ್ರ ಟೀಕೆಗೆ ಕಾರಣವಾಗಿದ್ದು, ಕೇಸರಿ ಪಕ್ಷ ಇದನ್ನು  'ನಕಲಿ ಸುದ್ದಿ' ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೆ, ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಸಹ ಮೆಹಬೂಬಾ ಮುಫ್ತಿ ಹೇಳಿಕೆಗೆ ತರಾಟೆ ತೆಗೆದುಕೊಂಡಿದ್ದಾರೆ. ನಾನೂ ಭಜನೆ ಹಾಡುತ್ತಿದ್ದೆ, ಭಜನೆ ಹಾಡಿದ ಕೂಡಲೇ ನಾನು ಹಿಂದೂ ಆಗಿದ್ದೀನಾ..? ಎಂದು ಪ್ರಶ್ನೆ ಮಾಡಿದ್ದಾರೆ. 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಚಟುವಟಿಕೆಗಳ ಸರಣಿಯ ಭಾಗವಾಗಿ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ 'ರಘುಪತಿ ರಾಘವ್...' (Raghupati Raghav) ಪಠಣವನ್ನು ಮಾಡಲಾಯಿತು. 'ರಘುಪತಿ ರಾಘವ...' ಗಾಂಧೀಜಿಯವರ ಅಚ್ಚುಮೆಚ್ಚಿನ ಭಜನೆಗಳಲ್ಲಿ ಒಂದಾಗಿದ್ದರಿಂದ ಅದು ಆಚರಣೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. 

'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

ಕುಲ್ಗಾಮ್ ಶಾಲೆಯಲ್ಲಿ ವಿದ್ಯಾರ್ಥಿಗಳು 'ರಘುಪತಿ ರಾಘವ್ ರಾಜಾ ರಾಮ್' ಹಾಡುವ ಸೋಮವಾರ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಮೆಹಬೂಬಾ ಮುಫ್ತಿ,  "ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಾಮಾ ಮಸೀದಿಯನ್ನು ಮುಚ್ಚುವುದು ಮತ್ತು ಇಲ್ಲಿನ ಶಾಲಾ ಮಕ್ಕಳಿಗೆ ಹಿಂದೂ ಗೀತೆಗಳನ್ನು ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ನಿಜವಾದ ಹಿಂದುತ್ವದ ಅಜೆಂಡಾವನ್ನು ಬಹಿರಂಗಪಡಿಸುತ್ತದೆ. ಈ ಕ್ರೋಧೋನ್ಮತ್ತ ಆದೇಶಗಳನ್ನು ನಿರಾಕರಿಸುವುದು PSA ಮತ್ತು UAPA ಅನ್ನು ಆಹ್ವಾನಿಸುತ್ತದೆ. "ಬದಲ್ತಾ ಜಮ್ಮು ಕಾಶ್ಮೀರ ಎಂದು ಕರೆಯಲ್ಪಡುವ ಇದಕ್ಕಾಗಿ ನಾವು ಪಾವತಿಸುತ್ತಿರುವ ವೆಚ್ಚವಾಗಿದೆ" ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 

ಅಲ್ಲದೆ, ಇದಕ್ಕೆ ಕೋಮುವಾದದ ದೃಷ್ಟಿ ನೀಡಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ, "ಮುಸ್ಲಿಂ ಮಕ್ಕಳನ್ನು ಶಾಲೆಯಲ್ಲಿ ಭಜನೆ ಹಾಡಲು ಬಲವಂತಪಡಿಸಲಾಗುತ್ತಿದೆ. ಬಿಜೆಪಿಯು ತಮ್ಮ ಹಿಂದುತ್ವದ ಅಜೆಂಡಾವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪರೀಕ್ಷಿಸಲು ಬಯಸುತ್ತದೆ" ಎಂದು ಹೇಳಿದರು. 105 ಸೆಕೆಂಡ್‌ಗಳ ವಿಡಿಯೋ ಮೊದಲು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಬೋರ್ಡ್ ಅನ್ನು ತೋರಿಸುತ್ತದೆ. ನಂತರ, ಶಾಲಾ ಸಮವಸ್ತ್ರದಲ್ಲಿ ಸುಮಾರು 2 ಡಜನ್ ವಿದ್ಯಾರ್ಥಿಗಳು ಶಿಕ್ಷಕರ ಗುಂಪಿನ ಸಮ್ಮುಖದಲ್ಲಿ ಕೈ ಜೋಡಿಸಿ ಹಾಡನ್ನು ಹಾಡುವುದನ್ನು ತೋರಿಸುತ್ತದೆ.

ಮೆಹಬೂಬಾ ಮುಫ್ತಿ ಹೇಳಿಕೆಗೆ ಫಾರೂಕ್‌ ಅಬ್ದುಲ್ಲಾ ಆಕ್ರೋಶ
ಇನ್ನು, ಜಮ್ಮು ಕಾಶ್ಮೀರದ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪ್ರಸಿದ್ಧ ಭಜನೆ "ರಘುಪತಿ ರಾಘವ ರಾಜಾ ರಾಮ್..." ಅನ್ನು ಪಠಿಸುವಂತೆ ಶಾಲಾ ಸಿಬ್ಬಂದಿ ಆದೇಶ ನೀಡಿದೆ ಎಂದು ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಸಂಸದ ಫಾರೂಕ್‌ ಅಬ್ದುಲ್ಲಾ ಅವರ ವಿರುದ್ಧ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಭಜನೆಗಳನ್ನು ಹಾಡುವ ಮೂಲಕ ಅಥವಾ ಮುಸ್ಲಿಂ ಅಥವಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಯಾರೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. 

ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ

ಜತೆಗೆ, "ನಾನೂ ಭಜನೆ ಹಾಡುತ್ತಿದ್ದೆ" ಎಂದು ಫಾರೂಕ್‌ ಅಬ್ದುಲ್ಲಾ ಹೇಳಿದರು. ಹಾಗೂ, ಭಜನೆ ಹಾಡುವ ಮೂಲಕ ನಾನು ಹಿಂದೂ ಆಗಿದ್ದೇನೆಯೇ? ಒಬ್ಬ ಹಿಂದೂ ಅಜ್ಮೀರ್ ಷರೀಫ್ ದರ್ಗಾ ಅಥವಾ ನಿಜಾಮುದ್ದೀನ್ ಔಲಿಯಾ ದೇಗುಲಕ್ಕೆ ಭೇಟಿ ನೀಡಿದರೆ ಅವನು ಮುಸ್ಲಿಂ ಆಗುತ್ತಾನೆಯೇ?""ನಮ್ಮ ಹಲವಾರು ಜನರು ಮಾತಾ (ವೈಷ್ಣೋ ದೇವಿ) ಮಂದಿರದಲ್ಲಿ ನಮನ ಸಲ್ಲಿಸುತ್ತಾರೆ, ಅವರೂ ಹಿಂದೂಗಳಾಗಿ ಬದಲಾಗುತ್ತಾರೆಯೇ? ಇಲ್ಲ, ಜನರು ಅಲ್ಲಿಗೆ ಹೋಗುತ್ತಾರೆ. ಏಕೆಂದರೆ ಅವರು ತಮ್ಮ ಸಮಸ್ಯೆಗಳು ಅಲ್ಲಿ ಪರಿಹಾರವಾಗುತ್ತವೆ ಎಂದು ಅವರು ಭಾವಿಸುತ್ತಾರೆ. ಎಲ್ಲರೂ ಸರ್ವಶಕ್ತನಿಗೆ ಸೇರಿದ್ದಾರೆ ಎಂದು ಫಾರೂಕ್‌ ಅಬ್ದುಲ್ಲಾ ಹೇಳಿದರು. 

Latest Videos
Follow Us:
Download App:
  • android
  • ios