Asianet Suvarna News Asianet Suvarna News

ವಿದ್ಯಾ​ರ್ಥಿ​ಗಳ ಮಧ್ಯಾ​ಹ್ನ ಊಟಕ್ಕೆ ದನದ ಮೇವು ಕಳಿ​ಸಿದ ಪುಣೆ ನಗರ ಪಾಲಿ​ಕೆ!

ವಿದ್ಯಾ​ರ್ಥಿ​ಗಳ ಮಧ್ಯಾ​ಹ್ನ ಊಟಕ್ಕೆ ದನದ ಮೇವು ಕಳಿ​ಸಿದ ಪುಣೆ ನಗರ ಪಾಲಿ​ಕೆ!| 58 ವಿದ್ಯಾ​ರ್ಥಿ​ಗ​ಳಿ​ರುವ ಶಾಲೆಗೆ ದನದ ಆಹಾ​ರಗಳ ಪೂರೈ​ಕೆ| ಘಟ​ನೆಗೆ ಕಾರ​ಣ​ರಾ​ದ​ವರ ವಿರುದ್ಧ ಕಠಿಣ ಕ್ರಮ: ಮೇಯ​ರ್‌

Municipal School In Pune Receives Cattle Feed As Mid Day Meal For Students pod
Author
Bangalore, First Published Mar 20, 2021, 9:47 AM IST

ಪುಣೆ(ಮಾ.20): ದೇಶದ ಅತೀ ಶ್ರೀಮಂತ ನಗರ ಪಾಲಿ​ಕೆ​ಗಳಲ್ಲಿ ಒಂದಾ​ಗಿ​ರುವ ಮಹಾ​ರಾ​ಷ್ಟ್ರದ ಪುಣೆ ನಗರ ಪಾಲಿ​ಕೆಯು ತನ್ನ ವ್ಯಾಪ್ತಿಯ ಶಾಲೆ​ಯೊಂದಕ್ಕೆ ಮಧ್ಯಾ​ಹ್ನದ ಊಟ ಕಳಿ​ಸುವ ಬದ​ಲಿಗೆ ದನದ ಪೌಷ್ಠಿ​ಕಾಂಶ ಆಹಾರ ರವಾ​ನಿ​ಸಿ ಎಡವಟ್ಟು ಮಾಡಿದೆ.

ಈ ಬಗ್ಗೆ ಶುಕ್ರ​ವಾರ ಮಾತ​ನಾ​ಡಿದ ಪುಣೆ ಮೇಯರ್‌ ಮುರ​ಳೀ​ಧರ್‌ ಮೊಹಲ್‌, ‘ವಿದ್ಯಾ​ರ್ಥಿ​ಗ​ಳ ಮಧ್ಯಾ​ಹ್ನದ ಊಟಕ್ಕೆ ದನದ ಮೇವು ಕಳಿ​ಸಿ​ರು​ವುದು ಅಕ್ಷಮ್ಯ. ಈ ಘಟ​ನೆಗೆ ಕಾರ​ಣ​ರಾ​ದ​ವರ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳ​ಲಾ​ಗು​ತ್ತ​ದೆ’ ಎಂದು ಹೇಳಿ​ದ್ದಾರೆ.

ಆಗಿ​ದ್ದೇ​ನು?: ಕೊರೋನಾ ಲಾಕ್‌​ಡೌನ್‌ ಹಿನ್ನೆ​ಲೆ​ಯಲ್ಲಿ ಮಹಾ​ರಾ​ಷ್ಟ್ರ​ದಾ​ದ್ಯಂತ ಇರುವ ಶಾಲೆ​ಗ​ಳನ್ನು ಮುಚ್ಚ​ಲಾ​ಗಿದೆ. ಆದಾಗ್ಯೂ, ಶಾಲಾ ಮಕ್ಕ​ಳಿಗೆ ಮಧ್ಯಾ​ಹ್ನದ ಊಟ ಸರ​ಬ​ರಾಜು ಆಗು​ವಂತೆ ನೋಡಿ​ಕೊ​ಳ್ಳುವ ಜವಾ​ಬ್ದಾ​ರಿ​ಯನ್ನು ಶಾಲೆ​ಗ​ಳಿಗೆ ವಹಿ​ಸ​ಲಾ​ಗಿದೆ. ಈ ಪ್ರಕಾರ ರಾಜ್ಯ​ದೆ​ಲ್ಲೆಡೆ ಎಲ್ಲಾ ಮಕ್ಕ​ಳಿಗೂ ಮಧ್ಯಾ​ಹ್ನದ ಊಟಕ್ಕಾಗಿ ಆಹಾರ ಧಾನ್ಯ​ಗ​ಳ​ನ್ನು ಪೂರೈ​ಸ​ಲಾ​ಗು​ತ್ತಿದೆ. ಅದೇ ರೀತಿ ಪುಣೆ ನಗರ ಪಾಲಿಕೆ ವ್ಯಾಪ್ತಿಗೆ ಬರುವ 58 ವಿದ್ಯಾ​ರ್ಥಿ​ಗ​ಳನ್ನು ಒಳ​ಗೊಂಡ ಪಾಲಿಕೆ ಶಾಲೆಗೆ ಇತ್ತೀ​ಚೆ​ಗಷ್ಟೇ ದನ​ಗ​ಳಿಗೆ ಇಡ​ಬ​ಹು​ದಾದ ಪೋಷ್ಠಿ​ಕಾಂಶದ ಆಹಾ​ರ​ಗ​ಳನ್ನು ಪೂರೈ​ಸ​ಲಾ​ಗಿದೆ.

ಈ ಆಹಾ​ರದ ಪೊಟ್ಟ​ಣ​ಗ​ಳನ್ನು ಕಂಡು ಶಾಲಾ ಸಿಬ್ಬಂದಿಯೇ ಒಂದು ಕ್ಷಣ ದಂಗಾ​ಗಿ​ದ್ದಾರೆ. ಈ ವಿಚಾರ ಭಾರ​ತೀಯ ಆಹಾರ ಗುಣ​ಮಟ್ಟಮತ್ತು ಸುರ​ಕ್ಷತಾ ಪ್ರಾಧಿ​ಕಾ​ರ(ಎಪ್‌​ಎ​ಸ್‌​ಎ​ಸ್‌​ಎ​ಐ)ಕ್ಕೆ ಮುಟ್ಟಿದ್ದು, ದನದ ಆಹಾ​ರ​ವನ್ನು ವಶಕ್ಕೆ ಪಡೆ​ದು​ಕೊಂಡಿದೆ

Follow Us:
Download App:
  • android
  • ios