26/11 Attack: ಮರೆಯದಿರಿ ನಮ್ಮ ಹೋರಾಟ, ಮರೆಯಲಾಗದು ಕಾಂಗ್ರೆಸ್ ನಾಟಕ; ರಾಜೀವ್ ಚಂದ್ರಶೇಖರ್ ಸಂದೇಶ
- ಮುಂಬೈ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ 13 ವರ್ಷ
- ದಾಳಿಯಲ್ಲಿ ಹುತಾತ್ಮ ವೀರ ಯೋಧರು ಹಾಗೂ ಮಡಿದ ಸಾರ್ವಜನಿಕರಿಗೆ ರಾಜೀವ್ ನಮನ
- ಟ್ವೀಟ್ ಮೂಲಕ ಕಾಂಗ್ರೆಸ್ ಕಪಟ ನಾಟಕ, ರಾಜಕೀಯದಾಟ ವಿವರಿಸಿದ ಸಚಿವ
ನವದಹೆಲಿ(ನ.26): 26/11 ದಾಳಿಯನ್ನು(Mumbai Terror Attack) ಯಾವ ಭಾರತೀಯನು ಮರೆಯಲಾರ. ಭಾರತ ಇತಿಹಾಸದಲ್ಲಿ ನಡೆದ ಅತೀ ಭೀಕರ ಭಯೋತ್ಪಾದಕ ದಾಳಿ. 166 ಮಂದಿ ಜೀವ ತೆತ್ತಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ನಡೆದು ಇಂದಿಗೆ 113 ವರ್ಷಗಳು ಸಂದಿದೆ. ಆದರೆ ನೋವು ಇನ್ನೂ ಮಾಸಿಲ್ಲ, ಭಯೋತ್ಪಾದನೆ ವಿರುದ್ಧ ಹೋರಾಟ ನಿಂತಿಲ್ಲ. ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರು(Martyrs) ಹಾಗೂ ಮಡಿದ ಸಾರ್ವಜನಿಕರಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್(rajeev chandrasekhar) ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್(Congress) ಕಪಟ ನಾಟಕವನ್ನು ತೆರೆದಿಟ್ಟಿದ್ದಾರೆ.
ಪಾಕಿಸ್ತಾನದ(Pakistan) ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ 10 ಉಗ್ರರು ಭಾರತದ ಮುಂಬೈ ಮಹಾನಗರಕ್ಕೆ ನುಗ್ಗಿ ನಡೆಸಿದ ಈ ದಾಳಿಗೆ 13 ವರ್ಷ ಕಳೆದರೂ ಕ್ರೂರ ಕೃತ್ಯಕ್ಕೆ ಕ್ಷಮೆಯೇ ಇಲ್ಲ. ಈ ಕುರಿತು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಭಯೋತ್ಪಾದನೆ ಕೃತ್ಯಕ್ಕೆ ಬಲಿಯಾದವರ ಹಾಗೂ ಹುತಾತ್ಮರಾದವರ ಕುರಿತು ನಾವು ದುಖಿಸುತ್ತಿದ್ದೇವೆ. ಈ ವೇಳೆ ನಮ್ಮ ವೀರ ಯೋಧರು, ಭದ್ರತಾ ಪಡೆಗಳು ಧೈರ್ಯದಿಂದ ಹೋರಾಡಿ ಪಾಕಿಸ್ತಾನ ಭಯೋತ್ಪಾದಕರನ್ನು ಮಟ್ಟ ಹಾಕಿದ್ದಾರೆ. ಇದನ್ನು ಎಂದಿಗೂ ಮರೆಯಬೇಡಿ. ಆದರೆ 26/11 ಮುಂಬೈ ದಾಳಿಯನ್ನು ಆರ್‌ಆರ್‌ಎಸ್(RSS) ಪ್ಲಾನ್ ಎಂದು ಕಾಂಗ್ರೆಸ್ ಕರೆದಿತ್ತು. ದಾಳಿ ಬೆನ್ನಲ್ಲೇ ಪಾಕಿಸ್ತಾನವನ್ನು ರಕ್ಷಿಸಲು ಕಾಂಗಿಗಳು ಯತ್ನಿಸಿದ್ದರು. ಇದೀಗ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡು ಭಾಯಿ ಬಾಯಿ ಎಂದು ಕರೆಯುವ ಅದೇ ಕಾಂಗಿಗಳನ್ನು ಎಂದಿಗೂ ಮರೆಯದಿರಿ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಮುಂಬೈ ದಾಳಿ ಭಾರತದ ಭದ್ರತೆಗೆ ಸವಾಲೋಡ್ಡಿದ ದಾಳಿಯಾಗಿತ್ತು. ಭಾರದ ಭದ್ರತೆಯನ್ನು ಪ್ರಶ್ನಿಸಿದ್ದ ದಾಳಿಯಾಗಿದೆ. ಈ ದಾಳಿ ನಡೆದ ಸ್ಥಳಗಳಲ್ಲಿ ರಕ್ತದ ಕಲೆ ಇನ್ನೂ ಮಾಸಿರಲಿಲ್ಲ, ಭಯೋತ್ಪಾದಕರ ಗುಂಡೇಟಿಗೆ ಹಲವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದರು. ಮಡಿವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. NSG ಕಮಾಂಡೋ, ಕನ್ನಡಿಗ ಸಂದೀಪ್ ಉಣ್ಣಿಕೃಷ್ಣನ್(sandeep unnikrishnan), ತುಕಾಂರ ಒಂಬ್ಳೆಗೆ(tukaram omble) ಸರ್ಕಾರಿ ಗೌರವ ನಮನ ಸಿಗುವ ಮೊದಲೇ ಕಾಂಗ್ರೆಸ್ ನೇರವಾಗಿ ಈ ದಾಳಿಯನ್ನು ಆರ್‌ಎಸ್ಎಸ್ ಸಂಘಟನೆ ಮೇಲೆ ಹೊರಿಸಿತ್ತು. ಈ ದಾಳಿ ಆರ್‌ಎಸ್ಎಸ್ ಮಾಸ್ಟರ್ ಪ್ಲಾನ್, ಯುಪಿಎ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡಿದ ಪ್ಲಾನ್ ಎಂದಿತ್ತು. ಈ ಮೂಲಕ ಪಾಕಿಸ್ತಾನ ಭಯೋತ್ಪಾದಕರನ್ನು ರಕ್ಷಿಸವು ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿತ್ತು.
ಈ ದಾಳಿ ಹಿಂದೆ ಪಾಕಿಸ್ತಾನ ಕೈವಾಡ ಜಗಜ್ಜಾಹೀರಾಗಿತ್ತು. ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್(Ajmal Kasab) ಪಾಕಿಸ್ತಾನ ಮಾಸ್ಟರ್ ಪ್ಲಾನ್ ಬಯಲು ಮಾಡಿದ್ದ. ಅಂದೇ ಕಾಂಗ್ರೆಸ್ ನಾಟಕ ಬಯಲಾಗಿತ್ತು. ಆದರೆ ಕಾಂಗ್ರೆಸ್ ಪಾಠ ಕಲಿಯಲಿಲ್ಲ. ಭಾರತದ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಬಲಿಪಡೆಯುತ್ತಿರುವ, ಭಯೋತ್ಪಾದಕರನ್ನು ಛೂ ಬಿಟ್ಟು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪಾಕಿಸ್ತಾನ ಸೇನಾ ಮುಖ್ಯ ಖಮರ್ ಜಾವೇದ್ ಬಾಜ್ವರನ್ನು ಕಾಂಗ್ರೆಸ್ ನಾಯಕ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಪ್ಪಿಕೊಂಡು ಭಾಯಿ ಭಾಯಿ ಎಂದಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ರನ್ನು ನನ್ನ ಅಣ್ಣ ಎಂದಿದ್ದರು. ಕಾಂಗ್ರೆಸ್ ನಡೆ ತೀವ್ರ ಆಕ್ರೋಶ, ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನಾಟಕವನ್ನು ಎಂದಿಗೂ ಮರೆಯಬೇಡಿ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
26/11 Attack: ಮುಂಬೈ ದಾಳಿಗೆ 13 ವರ್ಷ: ಎಂದೂ ಮರೆಯಲಾಗದ ಭೀಕರ ದಾಳಿ!
ಪಾಕಿಸ್ತಾನದ 10 ಭಯೋತ್ಪಾದಕರ ಗುಂಪು ಭಾರತದ ಮೇಲೆ ದಾಳಿ ಮಾಡಿದ ಮೇಲೂ, ಮಿಂಚಿನ ಕಾರ್ಯಾಚರಣೆ ಬದಲು ಕಾಂಗ್ರೆಸ್ ರಾಜಕೀಯದಲ್ಲಿ ಮುಳುಗಿತು. ಕಾಂಗ್ರೆಸ್ ಇದೇ ನಡೆಯನ್ನು ತಮ್ಮದೇ ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ತಮ್ಮ 10 ಫ್ಲ್ಯಾಶ್ ಪಾಯಿಂಟ್ಸ್, 20 ವರ್ಷ ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ವಿಚಾರ ಪುಸ್ತಕದಲ್ಲಿ ಟೀಕಿಸಿದ್ದಾರೆ. ಭಾರತದ ಮೇಲೆ ದಾಳಿ ಬಳಿಕ ಕಾಂಗ್ರೆಸ್ ಹೇಳಿಕೆಗಳನ್ನು ನೀಡಿತು. ಘಟನೆಯನ್ನು ಖಂಡಿಸಿತು. ಆದರೆ ತಿರುಗೇಟು ನೀಡದೆ ಸುಮ್ಮನೆ ಕುಳಿತಿತು ಎಂದು ಮನೀಶ್ ತಿವಾರಿ ಹೇಳಿದ್ದಾರೆ. ಯುಪಿಎ ಸರ್ಕಾರ ಅತೀಯಾದ ಸಂಯವನ್ನು ತಾಳಿತು. ಸಮಯ ವ್ಯರ್ಥ ಮಾಡಿತು. ತಕ್ಷಣ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲಿಲ್ಲ. ಯುಪಿಎ ತಾಳ್ಮೆ ದೌರ್ಬಲ್ಯವಾಗಿ ಮಾರ್ಪಟ್ಟಿತ್ತು. ಯಾವ ಸ್ಪಷ್ಟ ಸಂದೇಶವನ್ನು ನೀಡದೆ ಹೇಡಿಯಂತೆ ಸುಮ್ಮನಾಯಿತು ಎಂದು ಮನೀಶ್ ತಿವಾರಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಮುಂಬೈ ದಾಳಿ:
ನವೆಂಬರ್ 26, 2008ರಲ್ಲಿ ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ 10 ಉಗ್ರರು ಪಾಕಿಸ್ತಾನದ ಕರಾಚಿಯಿಂದ ಬೋಟ್ ಮೂಲಕ ಮುಂಬೈಗೆ ತಲುಪಿದರು. ಬಳಿಕ ತಾಜ್ ಹೊಟೆಲ್, ನರಿಮನ್ ಪಾಯಿಂಟ್, ಒಬೆರಾಯ್, ಚತ್ರಪತಿ ಶಿವಾಜಿ ಟರ್ಮಿನಲ್ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಗುಂಡಿನ ದಾಳಿ ನಡೆಸಿದರು. ಪೊಲೀಸ್ ಪೇದೆ ತುಕರಾಂ ಒಂಬ್ಳೆ ಬರಿಗೈಯಲ್ಲಿ ಎಕೆ47 ಗುಂಡಿನ ದಾಳಿ ನಡೆಸುತ್ತಿದ್ದ ಅಜ್ಮಲ್ ಕಸಾಬ್‌ನನ್ನು ಹಿಡಿದು ಹುತಾತ್ಮರಾಗಿದ್ದರು. ಪ್ರವಾಸಿಗರನ್ನು ಒತ್ತಾಯಾಳಾಗಿಟ್ಟುಕೊಂಡಿದ್ದ ಉಗ್ರರ ಸದೆಬಡಿಯಲು ಅಖಾಡಕ್ಕಿಳಿದ NSG ಕಮಾಂಡೋ ಸಂದೀಪ್ ಉಣ್ಣಿಕೃಷ್ಣನ್ ಈ ದಾಳಿಯಲ್ಲಿ ಹುತಾತ್ಮರಾಗಿದ್ದರು. 9 ಉಗ್ರರನ್ನು ಭಾರತೀಯ ಭದ್ರತಾ ಪಡೆ ಹತ್ಯೆ ಮಾಡಿತ್ತು, ಕಸಾಬ್‌ನನ್ನು ಜೀವಂತವಾಗಿ ಹಿಡಿದಿತ್ತು.