ಚಿಕನ್ ಆರ್ಡರ್ ಮಾಡಿದ್ರೆ ಇಲಿ ಮಾಂಸ ಕೊಟ್ಟ ರೆಸ್ಟೋರೆಂಟ್: ನಾವು ಚೀನಾದವರಲ್ಲವೆಂದ ಗ್ರಾಹಕ
ವಾಣಿಜ್ಯ ನಗರಿ ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಚಿಕನ್ ಆರ್ಡರ್ ಮಾಡಿದ ಗ್ರಾಹಕನಿಗೆ ಇಲಿ ಮಾಂಸವನ್ನು ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ಮುಂಬೈ (ಆ.16): ದೇಶದ ವಾಣಿಜ್ಯನಗರಿ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕುಟುಂಬ ಸಮೇತವಾಗಿ ಪಾರ್ಟಿಗೆ ಹೋದಾಗ ಥಾಲಿ ಮತ್ತು ಚಿಕನ್ ಆರ್ಡರ್ ಮಾಡಲಾಗುತ್ತು. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ಚಿಕನ್ ಬದಲು ಇಲಿಯ ಮಾಂಸವನ್ನು ಸರಬರಾಜು ಮಾಡಿದ್ದಾರೆ. ಚಿಕನ್‌ನಲ್ಲಿ ಇಲಿಯ ಕಾಲಿನ ಮೂಳೆ ಸಿಕ್ಕಿದೆ ಎಂದು ಗ್ರಾಹಕ ಆರೋಪ ಮಾಡಿದ್ದಾನೆ.
ಹೌದು, ಸಾಮಾನ್ಯವಾಗಿ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಕೆಲವೊಂದು ಬಾರಿ ಊಟ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಆದರೆ, ನಾವು ಕೇಳಿದ ಆಹಾರಕ್ಕಿಂತಲೂ ಭಿನ್ನವಾಗಿರುವ ಮತ್ತೊಂದು ಆಹಾರ ಕೊಟ್ಟಿರುತ್ತಾರೆ. ಆಹಾರದಲ್ಲಿ ಹುಳ, ಜಿರಳೆ, ಹಲ್ಲಿ ಇತ್ಯಾದಿ ಕಂಡುಬಂದಿದ್ದು, ದೊಡ್ಡ ಸುದ್ದಿಯೇ ಆಗಿವೆ. ಇನ್ನು ಚಿಕನ್ ಅಥವಾ ಮಟನ್ ಊಟದಲ್ಲಿ ಬೇರೆ ಮಾಂಸವನ್ನು ಮಿಶ್ರಣ ಮಾಡಲಾಗುತ್ತದೆ ಎಂಬ ಆರೋಪವೂ ಕೇಳಿಬರುತ್ತದೆ. ಆದರೆ, ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಚಿಕನ್ ಆರ್ಡರ್ ಮಾಡಿದ ಗ್ರಾಹಕನಿಗೆ ಇಲಿಯ ಮಾಂಸವನ್ನು ಸರಬರಾಜು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಕಾಲೇಜು ಲೆಕ್ಚರ್- ಸ್ಕೂಲ್ ಟೀಚರ್ ರಕ್ಷಾ ಸಾವು
ರೆಸ್ಟೋರೆಂಟ್ ವಿರುದ್ಧ ಗ್ರಾಹಕನ ಆರೋಪ: ಮುಂಬೈನ ಬಾಂದ್ರಾ ಪ್ರದೇಶದ ಪಾಲಿ ಹಿಲ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಅನುರಾಗ್ ಸಿಂಗ್ ಎಂಬುವರಿಂದ ಪೊಲೀಸ್ ಗೆ ದೂರು ನೀಡಲಾಗಿದೆ. ಬ್ರೆಡ್‌ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ ಪ್ಲ್ಯಾಟರ್ ಆರ್ಡರ್ ಮಾಡಿದ್ದರು. ಈ ವೇಳೆ ಚಿಕನ್ ಜೊತೆಗೆ ಅನುಮಾನಸ್ಪದ ಮಾಂಸದ ತುಂಡು ಪತ್ತೆಯಾಗಿದೆ. ಇದನ್ನು ಇಲಿಯ ಮಾಂಸ ಎಂದು ಆರೋಪಿಸಿ ದೂರು ನೀಡಿದ್ದಾನೆ. ದೂರಿನ ಹಿನ್ನಲೆ ಹೋಟೆಲ್ ಮ್ಯಾನೇಜರ್, ಬಾಣಸಿಗ ಮತ್ತು ಸಪ್ಲೇಯರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಬ್ರೆಡ್ ಚಿಕನ್, ಮಟನ್ ಥಾಲಿ ಆರ್ಡರ್: ಮುಂಬೈನ ಬಾಂದ್ರಾ ಪ್ರದೇಶದ ಜನಪ್ರಿಯ ರೆಸ್ಟೋರೆಂಟ್‌ನ ವ್ಯವಸ್ಥಾಪಕರು ಮತ್ತು ಬಾಣಸಿಗರು ಮಂಗಳವಾರ ತಮ್ಮ ಚಿಕನ್ ಖಾದ್ಯದಲ್ಲಿ ಸತ್ತ ಇಲಿಯನ್ನು ಕೊಟ್ಟಿದ್ದಾರೆ ಎಂದು ಗ್ರಾಹಕ ಆರೋಪ ಮಾಡಿದ್ದಾನೆ. ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೂರುದಾರರಾದ ಅನುರಾಗ್ ಸಿಂಗ್ ಹೇಳುವ ಪ್ರಕಾರ, ಅವರು ಬಾಂದ್ರಾ ಪಶ್ಚಿಮದ ಪಾಲಿ ಹಿಲ್‌ನಲ್ಲಿರುವ ರೆಸ್ಟೋರೆಂಟ್‌ಗೆ ತಮ್ಮ ಸ್ನೇಹಿತನೊಂದಿಗೆ ಊಟ ಮಾಡಲು ಹೋಗಿದ್ದರು. ಅವರು ಬ್ರೆಡ್ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ (ಪ್ಲ್ಯಾಟರ್) ಆರ್ಡರ್ ಮಾಡಿದರು.
Watch: ಲೂಧಿಯಾನಾದ ರೆಸ್ಟೋರೆಂಟ್‌ನ ಚಿಕನ್ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಇಲಿ!
ಚಿಕನ್‌ಬದಲು ವಿಭಿನ್ನ ರುಚಿ, ಇಲಿಯ ಮಾಂಸದ ತುಂಡು ಪತ್ತೆ: ಇನ್ನು ಊಟ ಮಾಡುವಾಗ ಮಾಂಸದ ತುಂಡು ವಿಭಿನ್ನ ರುಚಿ ಕಂಡುಬಂದಿದೆ. ಹತ್ತಿರದಿಂದ ನೋಡಿದಾಗ, ಅವರು ಒಂದು ಸಣ್ಣ ಇಲಿಯ ಮಾಂಸದ ರೀತಿಯ ತುಂಡನ್ನು ಗಮನಿಸಿದ್ದಾರೆ. ಈ ಬಗ್ಗೆ ಅನುರಾಗ್ ಸಿಂಗ್ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಕೇಳಿದಾಗ ಅವರು ನಿರ್ಲಕ್ಷ್ಯತನದ ಉತ್ತರವನ್ನು ನೀಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ಅನುರಾಗ್ ಸಿಂಗ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ವಿವಿಯನ್ ಆಲ್ಬರ್ಟ್ ಶಿಕಾವರ್ ಹಾಗೂ ಆ ಸಮಯದಲ್ಲಿ ಹೋಟೆಲ್‌ನಲ್ಲಿದ್ದ ಬಾಣಸಿಗ ಮತ್ತು ಚಿಕನ್ ಸರಬರಾಜುದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.