* ಏರ್‌ಪೋರ್ಟಲ್ಲೂ ಮಾಸ್‌್ಕ ಹಾಕದಿದ್ದರೆ ದಂಡ, ಬಂಧನ* ಮಾಸ್‌್ಕ ಧರಿಸದ ಪ್ರಯಾಣಿಕರು ವಿಮಾನದಿಂದ ಔಟ್* ಹೈಕೋರ್ಚ್ ಸೂಚನೆ ಅನುಸಾರ ಡಿಜಿಸಿಎ ಆದೇಶ
ನವದೆಹಲಿ(ಜೂ,09): ‘ಮಾಸ್‌್ಕ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಹೊರಹಾಕಿ’ ಎಂದು ದಿಲ್ಲಿ ಹೈಕೋರ್ಚ್ ನೀಡಿದ ಆದೇಶದ ಬೆನ್ನಲ್ಲೇ, ಈ ಆದೇಶವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಜಾರಿಗೊಳಿಸಿದೆ. ‘ವಿಮಾನ ಹತ್ತಿದ ನಂತರ, ಎಚ್ಚರಿಕೆ ನೀಡಿದ ಹೊರತಾಗಿಯೂ ಮಾಸ್‌್ಕ ಧರಿಸದಿದ್ದರೆ ಅಂಥ ಪ್ರಯಾಣಿಕರನ್ನು ಕೆಳಗೆ ಇಳಿಸಬೇಕು’ ಎಂದು ಎಲ್ಲ ವಿಮಾನಯಾನ ಕಂಪನಿಗಳಿಗೆ ಅದು ಆದೇಶಿಸಿದೆ.
ಇದಲ್ಲದೆ, ಏರ್‌ಪೋರ್ಚ್‌ಗಳಲ್ಲಿ ಮಾಸ್‌್ಕ ಧರಿಸದ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಬೇಕು. ಒಂದು ವೇಳೆ ಏರ್‌ಪೋರ್ಚ್ ಪ್ರವೇಶದ ಬಳಿಕ ಮಾಸ್‌್ಕ ಧರಿಸದಿದ್ದರೆ ದಂಡ ವಿಧಿಸಲು ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳ ಸಹಾಯ ಪಡೆಯಬೇಕು. ಅಂಥ ಪ್ರಯಾಣಿಕನನ್ನು ಸ್ಥಳೀಯ ಪೊಲೀಸರ ವಶಕ್ಕೂ ಒಪ್ಪಿಸಬಹುದು ಎಂದೂ ವಿಮಾನ ನಿಲ್ದಾಣಗಳ ಆಡಳಿತ ಸಿಬ್ಬಂದಿಗೆ ಸೂಚಿಸಿದೆ.
‘ವಿಮಾನದಲ್ಲಿ ಎಲ್ಲ ಪ್ರಯಾಣಿಕರು ಮಾಸ್‌್ಕ ಧರಿಸಿಯೇ ಇರುವಂತೆ ನೋಡಿಕೊಳ್ಳಬೇಕು. ಕೆಲವು ಅನಿವಾರ್ಯ ಸಂದರ್ಭದಲ್ಲಿ ಹಾಗೂ ಪೂರ್ವಾನುಮತಿ ಪಡೆದ ಪ್ರಕರಣಗಳಿದ್ದರೆ ಮಾತ್ರ ಮಾಸ್‌್ಕಗೆ ವಿನಾಯಿತಿ ನೀಡಬೇಕು. ಒಂದು ವೇಳೆ ಪ್ರಯಾಣಿಕ ಹೆಚ್ಚುವರಿ ಮಾಸ್‌್ಕ ಬಯಸಿದರೆ ವಿಮಾನದಲ್ಲೇ ಆತನಿಗೆ ಮಾಸ್‌್ಕ ನೀಡಬೇಕು. ಒಂದು ವೇಳೆ ವಿಮಾನ ಹತ್ತಿದ ನಂತರ ಮಾಸ್‌್ಕ ಧರಿಸದ ಪ್ರಯಾಣಿಕ, ಸಿಬ್ಬಂದಿಯ ಎಚ್ಚರಿಕೆ ಕಡೆಗಣಿಸಿದರೆ ವಿಮಾನ ಹೊರಡುವ ಮುನ್ನವೇ ಆತನನ್ನು ಕೆಳಗಿಳಿಸಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
‘ಒಂದು ವೇಳೆ ವಿಮಾನ ಹಾರಿದ ನಂತರ ಪ್ರಯಾಣಿಕ ಮಾಸ್‌್ಕ ಬಿಚ್ಚಿಟ್ಟರೆ ಅಂಥ ಪ್ರಯಾಣಿಕನಿಗೆ ‘ಪುಂಡ ಪ್ರಯಾಣಿಕ’ ಎಂದು ಹಣೆಪಟ್ಟಿಅಂಟಿಸಬೇಕು ಎಂದು ಸೂಚಿಸಿದೆ. ಈ ರೀತಿಯ ಪುಂಡ ಪ್ರಯಾಣಿಕರಿಗೆ ನಂತರದ ಕೆಲವು ಅವಧಿಯಲ್ಲಿ ವಿಮಾನಯಾನ ನಿರ್ಬಂಧಿಸಲಾಗುತ್ತದೆ.
