ಕುಟುಂಬದವರಿಂದ ತಪ್ಪಿ ಹೋಗಿ ದಿಕ್ಕು ಕಾಣದೇ ನಿಂತಿದ್ದ ಮಹಿಳೆಯನ್ನು ಪೊಲೀಸರು ಕುಟುಂಬದೊಂದಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮುಂಬೈ: ಕುಟುಂಬದವರಿಂದ ತಪ್ಪಿ ಹೋಗಿ ದಿಕ್ಕು ಕಾಣದೇ ನಿಂತಿದ್ದ ಮಹಿಳೆಯನ್ನು ಪೊಲೀಸರು ಕುಟುಂಬದೊಂದಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಉತ್ತರಪ್ರದೇಶದ ಮಹಿಳೆಯೊಬ್ಬರು ಮುಂಬೈನ ಬಾಂದ್ರಾದ ಟರ್ಮಿನಸ್ ರೈಲು ನಿಲ್ದಾಣದಲ್ಲಿ 65 ವರ್ಷದ ಮಹಿಳೆಯೊಬ್ಬರು ತಮ್ಮ ಕುಟುಂಬದಿಂದ ಬೇರ್ಪಟ್ಟು ದಿಕ್ಕು ಕಾಣದಂತೆ ನಿಂತಿದ್ದರು. ಅಲ್ಲದೇ ಅವರು ತಮ್ಮ ಕುಟುಂಬದವರಿಗಾಗಿ ವಿರ್ಲೆ ಪಾರ್ಲೆ ಪೊಲೀಸರ ನೆರವು ಕೋರಿದರು. ಕೂಡಲೇ ಆಕೆಯ ನೆರವಿಗೆ ಬಂದ ಪೊಲೀಸರು ಆಕೆಯ ಕುಟುಂಬವನ್ನು ಸಂಪರ್ಕಿಸಿದಲ್ಲದೇ ಅವರು ಅಲ್ಲಿಗೆ ಬರುವವರೆಗೂ ಆಕೆಯನ್ನು ಸುರಕ್ಷಿತವಾಗಿ ಕಾಯ್ದುಕೊಂಡರು. ಇದರ ವಿಡಿಯೋವನ್ನು ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಅನೇಕರು ಮುಂಬೈ ಪೊಲೀಸರ ಕಾರ್ಯಕ್ಕೆ ಶ್ಲಾಘನ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ವಯಸ್ಸಾದ ಮಹಿಳೆಯೊಬ್ಬರು ಪೊಲೀಸ್ ಇಲಾಖೆಯ (Mumbai Police)ಕುರ್ಚಿಯಲ್ಲಿ ಕುಳಿತಿದ್ದು, ಅಲ್ಲಿದ್ದ ಅಧಿಕಾರಿ ಮಹಿಳೆ ಕುಟುಂಬ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅಲ್ಲದೇ ಇನ್ನೊಬ್ಬ ಅಧಿಕಾರಿ ಮಹಿಳೆಗೆ ಹಸಿವಾಗಿದೆಯೇ ತಿನ್ನಲು ಏನಾದರು ಬೇಕೆ ಎಂದು ಕೇಳುತ್ತಿದ್ದಾರೆ. ಆದರೆ ಮಹಿಳೆ ಅವರಿಗೆ ಕೈ ಮುಗಿಯುತ್ತಾ ಧನ್ಯವಾದ ಸಲ್ಲಿಸಿದ್ದಲ್ಲದೇ ತಿನ್ನಲು ತನಗೇನು ಬೇಡ ಎಂದು ಆಕೆ ನಿರಾಕರಿಸುತ್ತಾಳೆ. ಅಲ್ಲದೇ ಅಧಿಕಾರಿಯ ಪಾದ ಮುಟ್ಟಿ ನಮಸ್ಕರಿಸಿದ ಆಕೆ ಅವರಿಗೆ ಧನ್ಯವಾದ ಸಲ್ಲಿಸುತ್ತಾಳೆ. ನಂತರ ಆಕೆಯ ಕುಟುಂಬ ಸದಸ್ಯರು ಬಂದು ಆಕೆಯನ್ನು ಕರೆದೊಯ್ಯುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿದೆ.
Mumbai: 2 ಸಾವಿರ ರೂ. ಡಿಸ್ಕೌಂಟ್ ನೀಡದಿದ್ದಕ್ಕೆ 1 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನ ಕದ್ದ ಕಳ್ಳ..!
ಕುಟುಂಬ ಸದಸ್ಯರು ಆಗಮಿಸಿದ ಬಳಿಕ ಆಕೆ ಮತ್ತೆ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಾರೆ. ಅಲ್ಲದೇ ಆಕೆಯ ಕುಟುಂಬ ಸದಸ್ಯರು ಕೂಡ ಅಧಿಕಾರಿಗಳಿಗೆ ಧನ್ಯವಾದ ಹೇಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಕೊನೆಯಲ್ಲಿ ಮಹಿಳೆ ಉತ್ತರ ಪ್ರದೇಶದ ತನ್ನ ಮನೆಗೆ ಭೇಟಿ ನೀಡುವಂತೆ ಅಧಿಕಾರಿಗಳನ್ನು ವಿನಂತಿಸುತ್ತಾಳೆ. ನಾಗರಿಕರ ಹೃದಯದೊಳಗೆ ಜಾಗ ಮಾಡುವುದು ಎಂದು ಬರೆದು ಮುಂಬೈ ಪೋಲೀಸ್‌ನ ಇನ್‌ಸ್ಟಾಗ್ರಾಮ್ ಪೇಜ್ (Instagram Page) ಈ ವಿಡಿಯೋ ಪೋಸ್ಟ್ ಮಾಡಿದೆ. ಇನ್ನು ಈ ವಿಡಿಯೋಗೆ ಅನೇಕರು ಧನ್ಯವಾದ ತಿಳಿಸಿದ್ದಾರೆ. ಪೊಲೀಸರ ತ್ವರಿತ ಹಾಗೂ ದಕ್ಷ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ. ಅನೇಕರು ಈ ರೀತಿ ಎಲ್ಲಾ ಪೊಲೀಸರು ಕೆಲಸ ಮಾಡಲಿ ಎಂದು ಮನವಿ ಮಾಡಿದರು.
ಗುಜರಾತ್‌ನಲ್ಲಿ 1,026 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ ಮುಂಬೈ ಪೊಲೀಸ್
