ಗುಜರಾತ್‌ನಲ್ಲಿ 1,026 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ ಮುಂಬೈ ಪೊಲೀಸ್
ಮುಂಬೈ ಪೊಲೀಸರು ಡ್ರಗ್ಸ್ ದಂಧೆಯ ಭರ್ಜರಿ ಬೇಟೆ ನಡೆಸಿದ್ದು, ಗುಜರಾತ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮೆಫೆಡ್ರೋನ್ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿದೆ.
ದೇಶದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳನ್ನು ಹಾಗೂ ಮಾದಕ ವಸ್ತು ಮಾರಾಟದ ಆರೋಪದ ಮೇರೆ ಆರೋಪಿಗಳನ್ನು ಬಂಧಿಸುವುದು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಅಮಿತ್ ಶಾ ವರ್ಚುಯಲ್ ಸಭೆಯೊಂದರ ವೇಳೆ 30 ಸಾವಿರ ಕೆಜಿಗೂ ಹೆಚ್ಚು ಡ್ರಗ್ಸ್ ಅನ್ನು ನಾಶ ಮಾಡಲಾಗಿತ್ತು. ಈಗ ಗುಜರಾತ್‌ನಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಮುಂಬೈ ಪೊಲೀಸರು ಸೀಜ್ ಮಾಡಿದ್ದಾರೆ.
ಮುಂಬೈ ಪೊಲೀಸರು ಗುಜರಾತ್‌ನಲ್ಲಿ ಮೆಫೆಡ್ರೋನ್ (Mephedrone) ಅಥವಾ MD ಉತ್ಪಾದನಾ ಘಟಕವನ್ನು ಪತ್ತೆ ಹಚ್ಚಿದ್ದು, ಈ ವೇಳೆ 1,026 ಕೋಟಿ ರೂ. ಮೌಲ್ಯದ 500 ಕೆಜಿಗೂ ಅಧಿಕ ಮೌಲ್ಯದ ನಿಷಿದ್ಧ ವಸ್ತುಗಳನ್ನು ಸೀಜ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣ ಸಂಬಂಧ ಮಹಿಳೆ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದೂ ತಿಳಿದುಬಂದಿದೆ.
88 ಕೆಜಿ ಗಾಂಜಾ ಸೇರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಎನ್‌ಸಿಬಿ: ಮೂವರ ಬಂಧನ
ಸುಳಿವಿನ ಆಧಾರದ ಮೇಲೆ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ್ ಪ್ರದೇಶದ ಉತ್ಪಾದನಾ ಘಟಕವನ್ನು ಮುಂಬೈ ಪೊಲೀಸ್‌ನ ವೋರ್ಲಿ ಘಟಕದ ನಾರ್ಕೋಟಿಕ್ಸ್ ವಿರೋಧಿ ಸೆಲ್ (Anti Narcotics Cell) ಆಗಸ್ಟ್ 13 ರಂದು ರೇಡ್ ಮಾಡಿದ್ದರು. ಈ ವೇಳೆ 513 ಕೆಜಿ ಸಿಂಥೆಟಿಕ್ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿದೆ ಎಂದು ಅವರು ಹೇಳಿದರು. ಇನ್ನೊಂದೆಡೆ, ಈ ಉತ್ಪಾದನಾ ಘಟಕದ ಮಾಲೀಕ ಗಿರಿರಾಜ್ ದೀಕ್ಷಿತ್ ಎಂಬುವರನ್ನು ಸಹ ನಾರ್ಕೋಟಿಕ್ಸ್ ವಿರೋಧಿ ಸೆಲ್ ಬಂಧಿಸಿದ್ದಾರೆ. ಇವರು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
1980 ಹಾಗೂ 1990 ರಿಂದ ತಲೆಮರೆಸಿಕೊಂಡಿದ್ದವರನ್ನು ವಶಕ್ಕೆ ಪಡೆಯಲಾಗಿದೆ ಎಂದ ಪಂಜಾಬ್ ಪೊಲೀಸ್
ಡ್ರಗ್ಸ್ ಕೇಸ್‌ಗಳ 186 ಘೋಷಿತ ಅಪರಾಧಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಹಲವರು 1980 ರ ದಶಕ ಹಾಗೂ 1990ರ ದಶಕದಿಂದಲೂ ತಪ್ಪಿಸಿಕೊಂಡಿದ್ದರು ಎಂದು ಪಂಜಾಬ್ ಪೊಲೀಸ್ ಮಂಗಳವಾರ ಮಾಹಿತಿ ನೀಡಿದ್ದಾರೆ. ಡ್ರಗ್ಸ್ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಜುಲೈ 5 ರಿಂದ ಈ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ 30 ಅಥವಾ 40 ವರ್ಷಗಳಿಂದ ತಪ್ಪಿಸಿಕೊಂಡಿದ್ದವರು ಅಥವಾ ತಲೆ ಮರೆಸಿಕೊಂಡಿದ್ದವರನ್ನು ಸಹ ಬಂಧಿಸಲಾಗಿದೆ ಎಂದು ಚಂಡೀಗಢ ಪ್ರಧಾನ ಕಚೇರಿಯ ಐಜಿಪಿ ಸುಖ್‌ಚೈನ್ ಸಿಂಗ್ ಗಿಲ್ ಮಾಹಿತಿ ನೀಡಿದ್ದಾರೆ.
ನವೆಂಬರ್ 1985 ರಲ್ಲಿ ಕೋಟ್ಲಾ ಹೋಶಿಯಾರ್‌ಪುರದ ಘೋಷಿತ ಅಪರಾಧಿಯಾಗಿದ್ದ ಗುರ್ದೀಪ್ ಸಿಂಗ್ ಅಲಿಯಾಸ್ ಕಾಕು ಎಂಬುವನನ್ನು ಲುಧಿಯಾನಾ ಕಮೀಷನರೇಟ್ ಪೊಲೀಸರು ಬಂಧಿಸಿದ್ದಾರೆ ಎಂದೂ ಗಿಲ್ ಹೇಳಿದ್ದಾರೆ. ಇದೇ ರೀತಿ, 1988 ರಿಂದ ತಲೆ ಮರೆಸಿಕೊಂಡಿದ್ದ ಅಮರ್‌ಜಿತ್ ಸಿಂಗ್ ಅವರನ್ನು ಫತೇಘರ್ ಸಾಹಿಬ್ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, 1989 ರಲ್ಲಿ ಘೋಷಿತ ಅಪರಾಧಿಯಾಗಿದ್ದ ಹರ್ಯಾಣದ ದಭಾಲ್‌ಖೇರಿ ಗ್ರಾಮದ ಮೋಹಿಂದರ್ ಸಿಂಗ್ ಎಂಬುವರನ್ನು ಸಂಗ್ರೂರ್ ಪೊಲೀಸರು ಬಂಧಿಸಲಾಗಿದೆ ಎಂದೂ ಸುಖ್‌ಚೈನ್ ಸಿಂಗ್ ಗಿಲ್ ಹೇಳಿದ್ದಾರೆ. 1990ರ ದಶಕದಿಂದಲೂ ಈ ಮೂವರು ಘೋಷಿತ ಅಪರಾಧಿಗಳು ಬಂಧನವಾಗುವುದರಿಂದ ತಪ್ಪಿಸಿಕೊಂಡಿದ್ದರು ಎಂದೂ ಹೇಳಿದ್ದಾರೆ.
ಅಮಿತ್ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್ ನಾಶ
ಇನ್ನು, ಕಳೆದ ಒಂದು ವಾರದಿಂದ ಪಂಜಾಬ್ ಪೊಲೀಸರು, ಎನ್‌ಡಿಪಿಎಸ್ ಕಾಯ್ದೆಯಡಿ 251 ಎಫ್‌ಐಆರ್‌ಗಳನ್ನು ಹಾಕಲಾಗಿದ್ದು, 335 ಡ್ರಗ್ ಸ್ಮಗ್ಲರ್‌ಗಳನ್ನು ಬಂಧಿಸಿದ್ದಾರೆ ಎಂದೂ ಐಜಿಪಿ ಡ್ರಗ್ಸ್ ವಿರೋಧಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, 9.76 ಕೆಜಿ ಹೆರಾಯಿನ್, 8.68 ಕೆಜಿ ಓಪಿಯಂ, 11.56 ಕೆಜಿ ಗಾಂಜಾ, 49 ಸಾವಿರ ಮಾತ್ರೆ, ಕ್ಯಾಪ್ಸೂಲ್, ಇಂಜೆಕ್ಷನ್‌ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಡ್ರಗ್ಸ್ ಹೆಚ್ಚು ಮಾರಾಟವಾಗುವ ಪ್ರದೇಶದಲ್ಲಿ 40 ಲಕ್ಷ 50 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಚಂಡೀಗಢ ಪ್ರಧಾನ ಕಚೇರಿಯ ಐಜಿಪಿ ಸುಖ್‌ಚೈನ್ ಸಿಂಗ್ ಗಿಲ್ ಮಾಹಿತಿ ನೀಡಿದ್ದಾರೆ.