ಮುಂಬೈನ ವಾಂಖೆಡೆಯಲ್ಲಿ ಈ ಬಾರಿಯ ಐಪಿಎಲ್ ನ 20 ಪಂದ್ಯಗಳುಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿವಾಂಖೆಂಡೆ ಸ್ಟೇಡಿಯಂ, ಟೀಮ್ ಹೋಟೆಲ್ ಬಳಿ ಬಿಗಿ ಭದ್ರತೆ
ಮುಂಬೈ (ಮಾ. 24): ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ಮೇಲೆ ಭಯೋತ್ಪಾದಕ ದಾಳಿಯ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (Maharashtra anti-terrorism squad )ಅಥವಾ ಎಟಿಎಸ್ ನ (ATS) ವಿಚಾರಣೆಯ ಬಳಿಕ, ವಾಂಖೆಡೆ ಸ್ಟೇಡಿಯಂ (Wankhede Stadium), ಟ್ರೈಡಂಟ್ ಹೋಟೆಲ್ ( Trident Hotel)ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಯೋತ್ಪಾದಕ ದಾಳಿ (Terror Attack )ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನ 2022ರ ಐಪಿಎಲ್ ನಲ್ಲಿ (IPL 2022 ) 20 ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ.
ಈ ವರ್ಷದ ಐಪಿಎಲ್ ವೇಳೆ ಭಯೋತ್ಪಾದಕರ ದಾಳಿಯ ಬಗ್ಗೆ ಮುಂಬೈ ಪೊಲೀಸರಿಗೆ (Mumbai Police) ಎಚ್ಚರಿಕೆ ನೀಡಲಾಗಿದ್ದು, ದೇಶದ ಆರ್ಥಿಕ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರ ಈ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಐಪಿಎಲ್ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವಿಕ್ ರೆಸ್ಪಾನ್ಸ್ ಟೀಮ್ (Quick Response Team), ಬಾಂಬ್ ಸ್ಕ್ವಾಡ್ (Bomb Squad), ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು (State Reserve Police Force ) ಮಾರ್ಚ್ 26 ರಿಂದ ಮೇ 22 ರವರೆಗೆ ಭದ್ರತೆಗಾಗಿ ನಿಯೋಜಿಸಲಾಗಿದೆ. ಅಂತರಿಕ ಸುತ್ತೋಲೆಯಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಫ್ರಾಂಚೈಸಿಗಳು ಮತ್ತು ಸಿಬ್ಬಂದಿಗಳು ಅನುಸರಿಸಬೇಕಾದ ಭದ್ರತಾ ಮಾರ್ಗಸೂಚಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದರ ಅನುಸಾರ ಐಪಿಎಲ್ ತಂಡದ ಬಸ್‌ಗಳನ್ನು ಕಾಂಬಾಂಟ್ ವೆಹಿಕಲ್ ಮೂಲಕ ಬೆಂಗಾವಲು ಮಾಡಲಾಗುತ್ತದೆ. ತಂಡದ ಹೋಟೆಲ್‌ನಿಂದ ಕ್ರೀಡಾಂಗಣದವರೆಗೆ ಕಾರುಗಳ ಪಾರ್ಕಿಂಗ್ ಮಾಡಲು ಅನುಮತಿ ನೀಡಲಾಗಿಲ್ಲ. ಆಟಗಾರರ ಸುರಕ್ಷತೆಗಾಗಿ ಪ್ರತ್ಯೇಕ ತುರ್ತು ನಿರ್ಗಮನವನ್ನು ಗೊತ್ತುಪಡಿಸಲಾಗಿದೆ. ಬಸ್ ಚಾಲಕರು ಮತ್ತು ಇತರ ಕಾರ್ಮಿಕರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ. ಐಪಿಎಲ್ ಸಮಯದಲ್ಲಿ ಅವರನ್ನು ಬದಲಾಯಿಸಲಾಗುವುದಿಲ್ಲ.
IPL 2022 ಭಾರತದ ಭವಿಷ್ಯದ ನಾಯಕ ರೇಸ್‌ನಲ್ಲಿರುವವರಿಗೆ ವೇದಿಕೆ: T20 ವಿಶ್ವಕಪ್‌ಗೆ ಆಡಿಷನ್?
ಆಟಗಾರನು ಸಂದರ್ಶಕರನ್ನು ನಿರೀಕ್ಷೆ ಮಾಡುತ್ತಿದ್ದರೆ ತಂಡದ ವ್ಯವಸ್ಥಾಪಕರಿಂದ ಪೂರ್ವ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಗುರುತಿನ ಪುರಾವೆ ಇಲ್ಲದೆ ಹೋಟೆಲ್ ಸಿಬ್ಬಂದಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಐಪಿಎಲ್‌ಗೆ ಕೆಲವೇ ದಿನಗಳು ಬಾಕಿಯಿದ್ದು, ಈ ಸುದ್ದಿ ಮುಂಬೈ ಪೊಲೀಸರನ್ನು ಹೈ ಅಲರ್ಟ್‌ನಲ್ಲಿ ಇರಿಸಿದೆ. ಐಪಿಎಲ್ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯುತ್ತದೆ: ವಾಂಖೆಡೆ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಪುಣೆಯಲ್ಲಿರುವ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.
IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೇವಲ 2 ದಿನ ಮಾತ್ರ ಬಾಕಿ ಇದೆ. ಈ ವರ್ಷ 2 ಹೊಸ ತಂಡಗಳ ಸೇರ್ಪಡೆಯಿಂದ ಟೂರ್ನಿಯ ಕಳೆ ಹೆಚ್ಚಲಿದೆ. ಟೂರ್ನಿಯಿಂದ ಅಭಿಮಾನಿಗಳು ಏನೇನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಆವೃತ್ತಿ ಯಾಕೆ ವಿಶೇಷ ಎನಿಸಿದೆ. ಇಲ್ಲಿದೆ ಸಂಪೂರ್ಣ ವಿವರ. ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಐಪಿಎಲ್ ಟಿ20 ಹಬ್ಬ: ಈ ವರ್ಷ ಟೂರ್ನಿಯಲ್ಲಿ ಹಲವು ಬದಲಾವಣೆಗಳಾಗಿವೆ. ಹೊಸದಾಗಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರ್ಪಡೆಗೊಂಡಿವೆ. ಇದರಿಂದಾಗಿ ಒಟ್ಟು ಪಂದ್ಯಗಳ ಸಂಖ್ಯೆಯೂ ಏರಿಕೆಯಾಗಿದ್ದು, ಅಭಿಮಾನಿಗಳಿಗೆ ಹೆಚ್ಚುವರಿ ಮನರಂಜನೆ ದೊರೆಯಲಿದೆ. ಈ ಬಾರಿ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ತಂಡಗಳು ಈ ಹಿಂದಿನಂತೆ ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. ‘ಎ’ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿವೆ.
