IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!
ಐಪಿಎಲ್ ಆರಂಭಕ್ಕೂ ಮುನ್ನ ಬಿಗ್ ಅಪ್ ಡೇಟ್
ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸಿದ ಎಂಎಸ್ ಧೋನಿ
ರವೀಂದ್ರ ಜಡೇಜಾಗೆ ನಾಯಕತ್ವ ಹಸ್ತಾಂತರಿಸಿದ ಕ್ಯಾಪ್ಟನ್ ಕೂಲ್
ಚೆನ್ನೈ (ಮಾ. 24): ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಕುರಿತಾಗಿ ಇದ್ದ ಊಹಾಪೋಹಗಳು ನಿಜವಾಗಿದೆ. 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ನಾಯಕನ ಅಡಿಯಲ್ಲಿ ಆಡಲಿದೆ. ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಅಗ್ರ ನಾಯಕ ಎಂಎಸ್ ಧೋನಿ (MS Dhoni), ತಮ್ಮ ಸ್ಥಾನವನ್ನು ಸೂಪರ್ ಆಲ್ರೌಂಡರ್ ರವೀಂದ್ರ ಜಡೇಜಾಗೆ (Ravindra Jadeja) ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸುದ್ದಿಯನ್ನು ಖಚಿತಪಡಿಸಿದ್ದು, 2022ರ ಐಪಿಎಲ್ ಅನ್ನು ರವೀಂದ್ರ ಜಡೇಜಾ ನೇತೃತ್ವದಲ್ಲಿ ಹಾಲಿ ಚಾಂಪಿಯನ್ ತಂಡ ಆಡಲಿದೆ. ಮಾರ್ಚ್ 26 ರಂದು ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸುವ ಮೂಲಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಭಿಯಾನವನ್ನು ಆರಂಭಿಸಲಿದೆ.
2008 ರಲ್ಲಿ ಉದ್ಘಾಟನಾ ಋತುವಿನಲ್ಲಿ ಚೆನ್ನೈ ಫ್ರಾಂಚೈಸಿಯಿಂದ ಕಾನ್ ಆಟಗಾರನಾಗಿ ಖರೀದಿಸಲ್ಪಟ್ಟ ಧೋನಿ, ಅವರು ತಂಡವನ್ನು ಮುನ್ನಡೆಸಿರುವ 12 ಋತುಗಳಲ್ಲಿ ಚೆನ್ನೈ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಮಾಡಿದ್ದಾರೆ. ಧೋನಿ ಅಡಿಯಲ್ಲಿ, ಚೆನ್ನೈ ತಂಡ , ಲೀಗ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿತ್ತು. ಈವರೆಗೂ ತಾನು ಆಡಿದ 12 ಆವೃತ್ತಿಗಳ ಪೈಕಿ ಒಂದು ವರ್ಷ ಮಾತ್ರವೇ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು.
"ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಮತ್ತು ತಂಡವನ್ನು ಮುನ್ನಡೆಸಲು ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದಾರೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ. 2012ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಮೂರನೇ ಆಟಗಾರ ಎನಿಸಲಿದ್ದಾರೆ. "ಧೋನಿ ಈ ಋತುವಿನಲ್ಲಿ ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ" ಎಂದು ತಿಳಿಸಲಾಗಿದೆ. ಧೋನಿ ಹೊರತಾಗಿ ಚೆನ್ನೈ ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. 2012ರ ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಯಾರ್ಕ್ ಷೈರ್ ವಿರುದ್ಧದ ಪಂದ್ಯದಲ್ಲಿ ಸುರೇಶ್ ರೈನಾ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.
IPL 2022 ಭಾರತದ ಭವಿಷ್ಯದ ನಾಯಕ ರೇಸ್‌ನಲ್ಲಿರುವವರಿಗೆ ವೇದಿಕೆ: T20 ವಿಶ್ವಕಪ್‌ಗೆ ಆಡಿಷನ್?
ಐಪಿಎಲ್ 2022 ರ ಮೊದಲು, ಸಿಎಸ್‌ಕೆ ತಂಡ ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿತ್ತು.ಫೆಬ್ರವರಿ 2008 ರಲ್ಲಿ ನಡೆದ ಉದ್ಘಾಟನಾ IPL ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಚೆನ್ನೈ ತಂಡವನ್ನು ಸೇರಿಕೊಂಡಿದ್ದ ಎಂಎಸ್ ಧೋನಿ, ಚೆನ್ನೈ ತಂಡವನ್ನು ಐಪಿಎಲ್ ನಲ್ಲಿ 204 ಪಂದ್ಯಗಳಲ್ಲಿ ಮುನ್ನಡೆಸಿದ್ದು ಅಭೂತಪೂರ್ವ ಎನಿಸುವಂಥ 121 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದಾರೆ.
IPL 2022: ಐಪಿಎಲ್‌ಗೆ ಕಾಲಿಡಲು ಕಾಯ್ತಿದ್ದಾರೆ ಈ 5 ಸ್ಟಾರ್ ಕ್ರಿಕೆಟಿಗರು!
2010, 2011, 2018 ಹಾಗೂ 2021ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿದ್ದರೆ, 2008, 2012, 2013, 2015 ಹಾಗೂ 2019ರಲ್ಲಿ ದಾಖಲೆಯ 5 ಬಾರಿಗೆ ಚೆನ್ನೈ ತಂಡ ರನ್ನರ್ ಅಪ್ ಸಾಧನೆಯನ್ನು ಮಾಡಿದೆ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಧೋನಿ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಕಳೆದ ನವೆಂಬರ್‌ನಲ್ಲಿ, ಚೆನ್ನೈನಲ್ಲಿ ಸೂಪರ್ ಕಿಂಗ್ಸ್ ಆಯೋಜಿಸಿದ್ದ ಸಮಾರಂಭದಲ್ಲಿ, ಧೋನಿ ತಮ್ಮ ಅಭಿಮಾನಿಗಳಿಗೆ ಫ್ರಾಂಚೈಸಿಗಾಗಿ ಕನಿಷ್ಠ ಒಂದು ಸೀಸನ್‌ಗಾಗಿ ಆಡುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು.