Asianet Suvarna News Asianet Suvarna News

ದಾವೂದ್ ಇಬ್ರಾಹಿಂ ಒಂದು ಕಾಲದ ಪ್ರೇಯಸಿ ಈಗೆಲ್ಲಿದ್ದಾಳೆ ನಿಮಗೆ ಗೊತ್ತೇ?

ಒಂದು ಕಾಲದಲ್ಲಿ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಪಕ್ಕದಲ್ಲಿ ಆತನ ತೊಡೆಗೆ ತೊಡೆ ತಾಕಿಸಿ ಕೂತಿರುತ್ತಿದ್ದ ನಟಿ ಮಂದಾಕಿನಿ, ಈಗ ಎಲ್ಲಿದ್ದಾಳೆ, ಏನ್ ಮಾಡ್ತಿದ್ದಾಳೆ ಅಂತ ಗೊತ್ತಾದರೆ ನಿಮಗೆ ಅಚ್ಚರಿ ಆಗದೇ ಇರದು.

what dawood ibrahims old friend actress mandakini doing now?
Author
First Published Apr 28, 2024, 4:17 PM IST

ಮಂದಾಕಿನಿ, ಬಾಲಿವುಡ್‌ನ ಒಂದು ಕಾಲದ ಬಹು ಬೇಡಿಕೆಯ ನಟಿ. ಈಕೆಯ ಕಾಲ್‌ಶೀಟ್‌ಗಾಗಿ ಹೀರೋಗಳು, ನಿರ್ಮಾಪಕರು, ನಿರ್ದೇಶಕರು ಕೂಡ ಕಾದು ನಿಲ್ಲುತ್ತಿದ್ದರು. ಆಮೇಲೆ ವಿಧಿ ಹಾಗೂ ಕಾಲ ಈಕೆಯನ್ನು ಎಲ್ಲೆಲ್ಲಿಗೋ ಒಯ್ದು ಬಿಟ್ಟಿತು. ಈಕೆಯ ಜೀವನದಲ್ಲಿ ನಡೆದ ಪರಿವರ್ತನೆಗಳನ್ನು ನೋಡುವುದು ಕುತೂಹಲಕಾರಿ. ಮಂದಾಕಿನಿ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಒಮ್ಮೆ ದಾವೂದ್ ಇಬ್ರಾಹಿಂ ಜೊತೆಗೆ ಕಾಣಿಸಿಕೊಂಡಳು. ಮುಂದೆ ಅದೇ ಆಕೆಯ ಕೆರಿಯರ್‌ಗೆ ಮುಳುವಾಯಿತು. 

ಮಂದಾಕಿನಿ ಮೀರತ್‌ನಲ್ಲಿ ಬ್ರಿಟಿಷ್ ತಂದೆ ಮತ್ತು ಕಾಶ್ಮೀರಿ ತಾಯಿಗೆ ಜನಸಿದವಳು. ಮೂಲ ಹೆಸರು ಯಾಸ್ಮೀನ್ ಜೋಸೆಫ್. 22ನೇ ವಯಸ್ಸಿನಲ್ಲಿ, ಚಲನಚಿತ್ರ ನಿರ್ದೇಶಕ ರಾಜ್ ಕಪೂರ್ ಇವರನ್ನು ಫಿಲಂಗೆ ಕರೆತಂದರು. "ಮಂದಾಕಿನಿ" ಎಂಬ ಹೆಸರನ್ನು ನೀಡಿದರು. 'ರಾಮ್ ತೇರಿ ಗಂಗಾ ಮೈಲಿ'  ಬಿಡುಗಡೆ ಆದಾಗ, ಎಲ್ಲರೂ ನಿಬ್ಬೆರಗಾಗಿ ಈಕೆಯನ್ನು ನೋಡಿದರು. ಮಂದಾಕಿನಿ ತುಂಬಾ ಸುಂದರವಾಗಿದ್ದಳು. ಬಿಳಿ ಸೀರೆಯುಟ್ಟು ಫಾಲ್ಸ್‌ನಲ್ಲಿ ಹಾಡುವ ಈಕೆ ಎಲ್ಲರ ಡ್ರೀಮ್ ಗರ್ಲ್ ಆಗಿಬಿಟ್ಟಳು. ರಾತ್ರೋರಾತ್ರಿ ತಾರೆ ಆದ ಈಕೆ ಪ್ರತಿಯೊಬ್ಬ ನಿರ್ಮಾಪಕರ ಡಾರ್ಲಿಂಗ್ ಆದಳು. 

1994ರಲ್ಲಿ ನಡೆದ ಘಟನೆಯ ಬಳಿಕ ಮಂದಾಕಿನಿಯ ಹೆಸರು ದಾವೂದ್ ಇಬ್ರಾಹಿಂನೊಂದಿಗೆ ಸೇರಿಕೊಳ್ಳಲಾರಂಭಿಸಿತು. ಆಕೆಯ ಚಲನಚಿತ್ರ ಕೆರಿಯರ್ ಇಳಿಮುಖವಾಗಲು ಪ್ರಾರಂಭಿಸಿತು. ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ದಾವೂದ್ ಇಬ್ರಾಹಿಂ ಜೊತೆಗಿದ್ದ ಮಂದಾಕಿನಿಯ ಚಿತ್ರಗಳು ಕಾಣಿಸಿಕೊಂಡಾಗ ಎಲ್ಲೆಡೆ ಸಂಚಲನ ಉಂಟಾಯಿತು. ದಾವೂದ್ ಜೊತೆ ಮಂದಾಕಿನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಹರಿದಾಡಿದವು. ದಾವೂದ್ ಜೊತೆ ಮಂದಾಕಿನಿ ಇರುವ ಈ ಚಿತ್ರಗಳು ಆಗ ವೈರಲ್ ಆಗಿದ್ದವು.

ಅದಕ್ಕೂ ಒಂದು ವರ್ಷ ಮೊದಲು ಅಂದರೆ 1994ರಲ್ಲಿ ಮಾಯಾನಗರ ಬಾಂಬ್ ಸ್ಫೋಟದಿಂದ ಮುಂಬೈ ತತ್ತರಿಸಿತ್ತು. ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಆಗ ಭಾರತದಿಂದ ತಲೆಮರೆಸಿಕೊಂಡಿದ್ದ. ಹೀಗಿರುವಾಗ ದಾವೂದ್ ಇಬ್ರಾಹಿಂ ಜೊತೆಗಿನ ಮಂದಾಕಿನಿಯ ಚಿತ್ರಗಳು ವೈರಲ್ ಆಗಿದ್ದು ಎಲ್ಲರ ಮನದಲ್ಲಿ ಭಯ ಹುಟ್ಟಿಸಿತ್ತು. ಮಂದಾಕಿನಿ ದಾವೂದ್‌ನ ಲವರ್ ಎಂಬ ಚರ್ಚೆ ನಡೆಯಿತು. ದಾವೂದ್ ಇಬ್ರಾಹಿಂ ಮಂದಾಕಿನಿ ಮೇಲೆ ಎಷ್ಟು ವ್ಯಾಮೋಹ ಹೊಂದಿದ್ದನೆಂದರೆ, ಆಕೆಗಾಗಿ ಚಿತ್ರಗಳನ್ನು ಮಾಡುವಂತೆ ಚಲನಚಿತ್ರ ನಿರ್ಮಾಪಕರಿಗೆ ಬೆದರಿಕೆ ಹಾಕಲು ಅವನು ಹಿಂದೆ ಸರಿಯಲಿಲ್ಲ.

ಆಗ ಬಾಲಿವುಡ್ ನಲ್ಲಿ ದಾವೂದ್ ಇಬ್ರಾಹಿಂ ಪ್ರಭಾವ ಹೆಚ್ಚಿತ್ತು. ಹಿಂದಿ ಚಿತ್ರರಂಗದಲ್ಲಿ ಆತನ ಪಾರ್ಟಿಗಳು ಸದಾ ಸುದ್ದಿಯಲ್ಲಿದ್ದವು. ಮಂದಾಕಿನಿ ಕೂಡ ದಾವೂದ್‌ನೊಂದಿಗೆ ಒಡನಾಟ ಹೊಂದಿದ್ದಳು. ಆದರೆ ನಂತರ ಅವಳು ಸಂದರ್ಶನವೊಂದರಲ್ಲಿ ಅದನ್ನು ನಿರಾಕರಿಸಿದಳು. ದಾವೂದ್ ಇಬ್ರಾಹಿಂ ಜೊತೆ ಕೇವಲ ಸ್ನೇಹ ಸಂಬಂಧವನ್ನು ಹೊಂದಿದ್ದೆ ಎಂದು ಹೇಳಿದಳು. 2010ರಲ್ಲಿ 'ಮಿಡ್ ಡೇ'ಗೆ ನೀಡಿದ ಸಂದರ್ಶನದಲ್ಲಿ ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ಬಗ್ಗೆ ಕೇಳಿದಾಗ, ಮಂದಾಕಿನಿ ತಾನು ಈಗ ಅವನ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದರು.

ಹನಿಮೂನ್​ಗೆ ಹೋಗುವಾಗ ಐಶ್​ಗೆ ಮದ್ವೆಯಾಗಿದ್ದು ನೆನಪಾಯ್ತಂತೆ! ಅಂದಿನ ಘಟನೆ ನೆನೆದ ನಟಿ

"ಜನರು ನನ್ನ ಹೆಸರನ್ನು ದಾವೂದ್‌ನೊಂದಿಗೆ ಸೇರಿಸುವುದು ಅಥವಾ ಆ ಘಟನೆಯ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ. ಅದು ಈಗ ಹಿಂದಿನ ವಿಷಯ. ಆ ಘಟನೆಯೊಂದಿಗೆ ಜನ ನನ್ನ ಹೆಸರನ್ನೇ ಇಟ್ಟುಕೊಂಡು ಈಗಲೂ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗುತ್ತಿದೆ. ಆದರೆ ನಾನು ಆ ಸಮಯದಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದೆ" ಎಂದಿದ್ದಳು. ಆದರೆ ಪೊಲೀಸರು ಆಕೆಯನ್ನು ಬಿಟ್ಟಿರಲಿಲ್ಲ. ಮುಂಬೈ ಬಾಂಬ್ ಸ್ಫೋಟದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾಗ, ದಾವೂದ್ ಜೊತೆ ಮಂದಾಕಿನಿಯ ನಿಕಟತೆಯ ಕಾರಣದಿಂದ ನಟಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಯಿತು. ನಂತರ ಈ ಪ್ರಕರಣದಲ್ಲಿ ಮಂದಾಕಿನಿಗೆ ಕ್ಲೀನ್ ಚಿಟ್ ಸಿಕ್ಕಿತು, ಆದರೆ ಅವರ ಚಲನಚಿತ್ರ ವೃತ್ತಿಜೀವನವು ನಾಶವಾಯಿತು.

ಸಿನಿಮಾಕ್ಕಾಗಿ ಸರ್ಕಾರಿ ಕೆಲಸವನ್ನೇ ಬಿಟ್ಟ ಸೆಲೆಬ್ರೆಟಿಗಳಿವರು!

ಮಂದಾಕಿನಿ ವೃತ್ತಿಜೀವನದಲ್ಲಿ ಚಲನಚಿತ್ರಗಳು ಬರುವುದನ್ನು ನಿಲ್ಲಿಸಿದವು. ಅವರ ಜೊತೆ ಕೆಲಸ ಮಾಡಲು ಯಾವ ನಿರ್ಮಾಪಕ-ನಿರ್ದೇಶಕನೂ ಬಯಸಲಿಲ್ಲ. ಮಂದಾಕಿನಿ 1990ರಲ್ಲಿ ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದರು. ಆದರೆ ದಾವೂದ್‌ನೊಂದಿಗಿನ ಅವರ ಸಂಪರ್ಕದ ಪರಿಣಾಮಗಳನ್ನು ಅವರ ವೃತ್ತಿಜೀವನ ಅನುಭವಿಸಬೇಕಾಯಿತು. ಇದರ ಪರಿಣಾಮ ಮಂದಾಕಿನಿ 1996ರಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಬೇಕಾಯಿತು. ೨೦೨೨ರಲ್ಲಿ ಹಿಂದಿ ಚಿತ್ರರಂಗಕ್ಕೆ ಮರಳಿ ಬರಲು ಂದಾಕಿನಿ ಯತ್ನಿಸಿದ್ದರು. 'ಮಾ ಓ ಮಾ' ಎಂಬ ಹೆಸರಿನ ಒಂದು ಆಲ್ಬಂ ಅನ್ನು ಹೊರತಂದರು. ಆದರೆ ಮಂದಾಕಿನಿಯ ಕಂಬ್ಯಾಕ್ ಕನಸು ನನಸಾಗಲಿಲ್ಲ.   

ಮಂದಾಕಿನಿ ಅವರು ಮಾಜಿ ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ. ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದ ಬಳಿಕ ಬೌದ್ಧ ಧರ್ಮವನ್ನು ಸ್ವೀಕರಿಸಿದರು. 1980 ರ ದಶಕಗಳಲ್ಲಿ ಮರ್ಫಿ ರೇಡಿಯೊ ಜಾಹೀರಾತುಗಳಲ್ಲಿ ಮಗುವಾಗಿ ಕಾಣಿಸಿಕೊಂಡಿದ್ದರಿಂದ ಆಕೆಯ ಪತಿ ಬಾಲ್ಯದಲ್ಲಿ ಖ್ಯಾತಿಯನ್ನು ಗಳಿಸಿದ್ದರು. ದಂಪತಿಗೆ ರಬ್ಬಿಲ್ ಎಂಬ ಮಗ ಮತ್ತು ರಬ್ಜೆ ಇನ್ನಾಯ ಎಂಬ ಮಗಳು ಇದ್ದಾರೆ. ಬೌದ್ಧಧರ್ಮವನ್ನು ಸ್ವೀಕರಿಸಿದ ನಂತರ ಮತ್ತು ದಲೈ ಲಾಮಾ ಅವರ ಅನುಯಾಯಿಯಾದ ನಂತರ, ಮಂದಾಕಿನಿ ಟಿಬೆಟಿಯನ್ ಯೋಗದಲ್ಲಿ ತರಗತಿಗಳನ್ನು ನಡೆಸಲು ಪ್ರಾರಂಭಿಸಿದರು. ಅವರ ಪತಿ ಟಿಬೆಟಿಯನ್ ಗಿಡಮೂಲಿಕೆ ಕೇಂದ್ರವನ್ನು ನಡೆಸುತ್ತಾರೆ.

Latest Videos
Follow Us:
Download App:
  • android
  • ios