ಮುಂಬೈ(ಫೆ.20): ಕೊರೋನಾ ವೈರಸ್ 2ನೇ ಅಲೆ ಆರಂಭವಾಗುತ್ತಿದೆ ಅನ್ನೋ ಸೂಚನೆ ತಜ್ಞರಿಂದ ಬಂದಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಪ್ರಕರಣ ತೀವ್ರಗತಿಯಲ್ಲಿ ಹರಡುತ್ತಿದೆ. ಇದು ಕರ್ನಾಟಕಕ್ಕೂ ಆತಂಕ ತಂದಿದೆ. ಇದೀಗ ಮುಂಬೈನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಮುಂಬೈ ಮೇಯರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಕೇಸ್‌: ಆರೋಗ್ಯ ಸಚಿವರಿಂದ ಸುದ್ಧಿಗೋಷ್ಠಿ

ಮುಂಬೈನಲ್ಲಿ ಜನರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಶುಚಿತ್ವದ ಕಡೆ ಗಮನಹರಿಸುತ್ತಿಲ್ಲ. ಜನರ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ, ಮತ್ತೆ ಲಾಕ್‌ಡೌನ್ ಜಾರಿ ಮಾಡದೆ ಬೇರಿ ದಾರಿ ಇಲ್ಲ ಎಂದು ಮುಂಬೈ ಮೈಯರ್ ಕಿಶೋರ್ ಪೆಡ್ನೇಕರ್ ಎಚ್ಚರಿಸಿದ್ದಾರೆ.

ಮುಂಬೈನಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಮಂಬೈ ಮಹಾನಗರಿಯಲ್ಲಿನ ಈ ಬೆಳವಣಿಗೆ ಮಹಾರಾಷ್ಟ್ರಕ್ಕೆ ಮತ್ತೆ ಸಂಕಷ್ಟ ತಂದೊಡ್ಡಿದೆ. ಮಹಾರಾಷ್ಟ್ರ ಜೊತೆ ಗಡಿ ಹಂಚಿಕೊಂಡಿರುವ ಕರ್ನಾಟಕಕ್ಕೂ ಸಂಕಷ್ಟ ಎದುರಾಗಿದೆ. ಮುಂಬೈನಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ.