ಹಣಕಾಸಿನ ಸಮಸ್ಯೆಯಿಂದ ಉದ್ವಿಗ್ನಗೊಂಡಿದ್ದ ಹಾಗೂ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಗೂಗಲ್‌ ಸರ್ಚ್‌ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. 

ಮುಂಬೈ (ಸೆಪ್ಟೆಂಬರ್ 28, 2023): ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಸಾಕಷ್ಟು ವರದಿಯಾಗುತ್ತಲೇ ಇರುತ್ತದೆ. ಅಲ್ಲದೆ, ಕೆಲವರು ಎಲ್ಲದಕ್ಕೂ ಗೂಗಲ್‌ ಸರ್ಚ್‌ ಮಾಡೋ ಹಾಗೆ, ಸೂಸೈಡ್‌ ಮಾಡಿಕೊಳ್ಳೋದಕ್ಕೂ ಗೂಗಲ್‌ ಸರ್ಚ್ ಮಾಡ್ತಾರೆ. ಇದೇ ರೀತಿ, ಆತ್ಮಹತ್ಯೆ ಮಾಡ್ಕೊಳ್ಳೋದು ಹೇಗೆ ಅಂತ ವ್ಯಕ್ತಿಯೊಬ್ಬರು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಆದರೆ, ನಂತರ ಸಂಭವಿಸಿದ್ದೇ ಬೇರೆ. 

ಕ್ರಿಮಿನಲ್ ಪ್ರಕರಣವೊಂದರಲ್ಲಿ ತನ್ನ ತಾಯಿಗೆ ಜಾಮೀನು ಕೊಡಿಸುವಲ್ಲಿ ವಿಫಲವಾದ ಮತ್ತು 6 ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡ ನಂತರ ಕೆಲಸ ಸಿಗದೆ ಹತಾಶೆಗೊಂಡ 28 ವರ್ಷದ ಮಲಾಡ್ ನಿವಾಸಿಯೊಬ್ಬರು ಆತ್ಮಹತ್ಯೆಯ ಮೂಲಕ ಸಾಯುವ ಉತ್ತಮ ಮಾರ್ಗವನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ. ಆದರೆ, ಅಂತರ್ಜಾಲದ ಮೇಲೆ ನಿಗಾ ಇರಿಸಿರುವ ಇಂಟರ್‌ಪೋಲ್ ತಕ್ಷಣವೇ ಈ ಸಂಬಂಧ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. ಅಪರಾಧ ವಿಭಾಗದ ಸಿಬ್ಬಂದಿ 2 ಗಂಟೆಯೊಳಗೆ ವ್ಯಕ್ತಿಯನ್ನು ಪತ್ತೆ ಮಾಡಿ ಕೌನ್ಸೆಲಿಂಗ್ ಮಾಡಿದ್ದಾರೆ.

ಇದನ್ನು ಓದಿ: ಭಾರತದ ಶೇ. 80 ರಷ್ಟು ಸೈಬರ್ ಅಪರಾಧ ಇಲ್ಲೇ ನಡೆಯುತ್ತೆ: ಕುಖ್ಯಾತ ಟಾಪ್ 10 ಜಿಲ್ಲೆಗಳ ಪಟ್ಟಿ ಹೀಗಿದೆ..

ಮಂಗಳವಾರ ಮಧ್ಯಾಹ್ನ ಪೊಲೀಸರಿಗೆ ಇಂಟರ್‌ಪೋಲ್‌ನ ಇಮೇಲ್ ಬಂದಿದ್ದು. ಇಂಟರ್‌ನೆಟ್ ಸರ್ಚ್‌ ವೇಳೆ ವ್ಯಕ್ತಿ ಬಳಸಿದ ಮೊಬೈಲ್ ಸಂಖ್ಯೆಯನ್ನು ಅಂತಾರಾಷ್ಟ್ರೀಯ ಸಂಸ್ಥೆ ಹಂಚಿಕೊಂಡಿದೆ. ನಂತರ ಹಿರಿಯ ಪಿಐ ವಿನಾಯಕ್ ಚವ್ಹಾಣ್ ಸೇರಿದಂತೆ ಜಂಟಿ ಸಿಪಿ (ಅಪರಾಧ) ಲಕ್ಷ್ಮೀ ಗೌತಮ್ ಅವರ ಮೇಲ್ವಿಚಾರಣೆಯ ತಂಡವು ಮೊಬೈಲ್ ಸಂಖ್ಯೆಯ ಬಗ್ಗೆ ತಾಂತ್ರಿಕ ಗುಪ್ತಚರವನ್ನು ಸಂಗ್ರಹಿಸಿದೆ ಮತ್ತು ಮಲಾಡ್‌ನ ಮಾಲ್ವಾನಿಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದ ವ್ಯಕ್ತಿ ಮೊಬೈಲ್‌ ಬಳಸುತ್ತಿರುವುದನ್ನು ಪತ್ತೆ ಮಾಡಿದೆ.

ಈ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಎರಡು ಗಂಟೆಯೊಳಗೆ ಆ ವ್ಯಕ್ತಿಯನ್ನು ನಮ್ಮ ತಂಡವು ಪತ್ತೆಹಚ್ಚಿ ಅಪರಾಧ ವಿಭಾಗದ ಘಟಕದ ಕಚೇರಿಗೆ ಕರೆತಂದಿದೆ.ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಗೂಗಲ್‌ ಸರ್ಚ್‌ ಮಾಡಿದ ಯುವಕನಿಗೆ ಕೆಲಸ ಹುಡುಕಲು ಸಹಾಯ ಮಾಡುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ. ಇಂಟರ್ನೆಟ್‌ನಲ್ಲಿ 'ಆತ್ಮಹತ್ಯೆ ಮಾಡಿಕೊಳ್ಳಲು ಉತ್ತಮ ಮಾರ್ಗ' ಕುರಿತು ಮಾಹಿತಿಯನ್ನು ಏಕೆ ಹುಡುಕುತ್ತಿದ್ದೀರಿ ಎಂದು ನಾವು ಅವರನ್ನು ಕೇಳಿದಾಗ, ಅವರು ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದಾಗಿ ಹೇಳಿದರು. 

ಇದನ್ನೂ ಓದಿ: ದೇವಸ್ಥಾನದೊಳಗೆ ನಮಾಜ್‌ ಮಾಡಿದ ಮಹಿಳೆಯರು: ವಿಡಿಯೋ ವೈರಲ್‌

2 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಆಕೆಯ ಜಾಮೀನಿಗಾಗಿ ಕಾನೂನು ವೆಚ್ಚಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದೂ ಅವರು ಹೇಳಿದರು’’ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ತಾನು ಮೂಲತಃ ರಾಜಸ್ಥಾನಕ್ಕೆ ಸೇರಿದವನಾಗಿದ್ದು, 3 ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಜೂನಿಯರ್ ಕಾಲೇಜು ಪರೀಕ್ಷೆ ಉತ್ತೀರ್ಣರಾದ ನಂತರ ಕಂಪ್ಯೂಟರ್‌ನಲ್ಲಿ ಡಿಪ್ಲೊಮಾ ಮಾಡಿದರು. ಮೀರಾ ರಸ್ತೆಯಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ತನಗೆ ಕೆಲಸ ಸಿಕ್ಕಿದ್ದು. ಆದರೆ, ಆರು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಹಲವು ಕಡೆ ಪ್ರಯತ್ನಿಸಿದರೂ ಕೆಲಸ ಸಿಗಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಇದನ್ನು ಓದಿ: ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್‌ ಮಾಡಿದ ನೀಚ ತಂದೆ!

ಹಣಕಾಸಿನ ಸಮಸ್ಯೆಯಿಂದ ಉದ್ವಿಗ್ನಗೊಂಡಿದ್ದ ಅವರು ಕಳೆದ ಎರಡು ದಿನಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರ ಕಡೆಯ ಕಥೆಯನ್ನು ಕೇಳಿದ ಪೊಲೀಸರು ಅವರಿಗೆ ಸಲಹೆ ನೀಡಿದ್ದು, ಕೆಲಸ ಹುಡುಕಲು ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು. ನಂತರ ಅವರನ್ನು ಸಂಬಂಧಿಕರೊಬ್ಬರ ಮನೆಗೆ ಕಳುಹಿಸಲಾಗಿದೆ ಎಂದೂ ಹೇಳಿದರು.

ಇದನ್ನೂ ಓದಿ: ಸಂಗಾತಿ ಲೈಂಗಿಕ ಸಂಬಂಧ ನಿರಾಕರಿಸೋದು ಕ್ರೌರ್ಯಕ್ಕೆ ಸಮ: ಹೈಕೋರ್ಟ್