Asianet Suvarna News Asianet Suvarna News

ಭಾರತದ ಶೇ. 80 ರಷ್ಟು ಸೈಬರ್ ಅಪರಾಧ ಇಲ್ಲೇ ನಡೆಯುತ್ತೆ: ಕುಖ್ಯಾತ ಟಾಪ್ 10 ಜಿಲ್ಲೆಗಳ ಪಟ್ಟಿ ಹೀಗಿದೆ..

ರಾಜಸ್ಥಾನದ ಭರತ್‌ಪುರ ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಗಳು ಜಾರ್ಖಂಡ್‌ನ ಜಮ್ತಾರಾ ಮತ್ತು ಹರಿಯಾಣದ ನುಹ್ ಅನ್ನು ಭಾರತದಲ್ಲಿ ಸೈಬರ್ ಅಪರಾಧದ ಕುಖ್ಯಾತ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿವೆ ಎಂದು ಹೊಸ ಅಧ್ಯಯನ ಮಾಹಿತಿ ನೀಡಿದೆ.

80 per cent cybercrimes from 10 districts bharatpur new jamtara study ash
Author
First Published Sep 25, 2023, 2:01 PM IST

ನೋಯ್ಡಾ (ಸೆಪ್ಟೆಂಬರ್ 25, 2023): ದೇಶದಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಲೇ ಇವೆ. ಇತ್ತೀಚಿನ ಕೆಲ ವರ್ಷಗಳಲ್ಲಿ, ಅದ್ರಲ್ಲೂ ಕೋವಿಡ್‌ ನಂತರ ಹೆಚ್ಚು ಅಪರಾಧ ಪ್ರಕಣಗಳು ಬೆಖಿಗೆ ಬರುತ್ತಿವೆ. ಜಾರ್ಖಂಡ್‌ನ ಜಮ್ತಾರಾ ದೇಶದ ಸೈಬರ್ ಅಪರಾಧಗಳ ರಾಜಧಾನಿ ಎನಿಸಿಕೊಂಡಿತ್ತು. ಆದರೀಗ, ರಾಜಸ್ಥಾನದ ಭರತ್‌ಪುರ ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಗಳು ಭಾರತದಲ್ಲಿ ಸೈಬರ್ ಅಪರಾಧದ ಕುಖ್ಯಾತ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿದೆ. 

ರಾಜಸ್ಥಾನದ ಭರತ್‌ಪುರ ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಗಳು ಜಾರ್ಖಂಡ್‌ನ ಜಮ್ತಾರಾ ಮತ್ತು ಹರಿಯಾಣದ ನುಹ್ ಅನ್ನು ಭಾರತದಲ್ಲಿ ಸೈಬರ್ ಅಪರಾಧದ ಕುಖ್ಯಾತ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿವೆ ಎಂದು ಐಐಟಿ ಕಾನ್ಪುರಿನ್‌ಕ್ಯುಬೇಟೆಡ್ ಸ್ಟಾರ್ಟ್‌ಅಪ್‌ನ ಹೊಸ ಅಧ್ಯಯನ ಮಾಹಿತಿ ನೀಡಿದೆ. ದೇಶದ ಶೇ. 80 ರಷ್ಟು ಸೈಬರ್ ಅಪರಾಧಗಳಿಗೆ ಟಾಪ್ 10 ಜಿಲ್ಲೆಗಳು ಒಟ್ಟಾರೆಯಾಗಿ ಕೊಡುಗೆ ನೀಡುತ್ತವೆ ಎಂದೂ ಈ ಅಧ್ಯಯನವು ಬಹಿರಂಗಪಡಿಸಿದೆ.

ಇದನ್ನು ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?

ಈ ಸಂಶೋಧನೆಗಳನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಕಾನ್ಪುರ ಸಹಯೋಗದಲ್ಲಿ ನಡೆದ  ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (ಎಫ್‌ಸಿಆರ್‌ಎಫ್) ನಡೆಸಿದೆ. ಇದರ ಪ್ರಕಾರ ಟಾಪ್ 10 ಜಿಲ್ಲೆಗಳು ಹೀಗಿವೆ. ಭರತ್‌ಪುರ (ಶೇ 18), ಮಥುರಾ (ಶೇ 12), ನುಹ್ (ಶೇ 11), ದಿಯೋಘರ್ (ಶೇ 10), ಜಮ್ತಾರಾ (ಶೇ 9.6), ಗುರುಗ್ರಾಮ್ (ಶೇ 8.1), ಅಲ್ವಾರ್ (ಶೇ 5.1), ಬೊಕ್ಯಾರೋ (ಶೇ. 2.4), ಕರ್ಮ ತಾಂಡ್ (ಶೇ. 2.4) ಮತ್ತು ಗಿರಿದಿಹ್ (ಶೇ. 2.3) ಭಾರತದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳಿಗೆ ಪ್ರಮುಖ ಕೊಡುಗೆದಾರರಾಗಿದ್ದು, ಒಟ್ಟಾರೆಯಾಗಿ ವರದಿಯಾದ ಘಟನೆಗಳ ಶೇಕಡಾ 80 ರಷ್ಟಿದೆ ಎಂದು ಎಫ್‌ಸಿಆರ್‌ಎಫ್ ಹೇಳಿಕೊಂಡಿದೆ.

"ನಮ್ಮ ವಿಶ್ಲೇಷಣೆಯು ಸೈಬರ್ ಅಪರಾಧಕ್ಕೆ ಹೆಚ್ಚು ಒಳಗಾಗುವ ಭಾರತದ ಟಾಪ್ 10 ಜಿಲ್ಲೆಗಳ ಮೇಲೆ ಕೇಂದ್ರೀಕರಿಸುತ್ತದೆ. ಶ್ವೇತಪತ್ರದಲ್ಲಿ ಗುರುತಿಸಿದಂತೆ, ಈ ಜಿಲ್ಲೆಗಳಲ್ಲಿ ಸೈಬರ್ ಅಪರಾಧಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆಯ ತಂತ್ರಗಳನ್ನು ರೂಪಿಸಲು ಅತ್ಯಗತ್ಯವಾಗಿದೆ’’ ಎಂದು FCRF ಸಹಸ್ಥಾಪಕ ಹರ್ಷವರ್ಧನ್ ಸಿಂಗ್ ಎಂದರು.

ಇದನ್ನೂ ಓದಿ: 'Smishing' ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಈ ಅಂಶಗಳನ್ನು ಮರೀಲೇಬೇಡಿ: ಕೇಂದ್ರ ಸರ್ಕಾರ ಎಚ್ಚರಿಕೆ

ಭಾರತದಲ್ಲಿನ ಅಗ್ರ 10 ಸೈಬರ್ ಕ್ರೈಮ್ ಹಬ್‌ಗಳ (ಜಿಲ್ಲೆಗಳು) ವಿಶ್ಲೇಷಣೆಯು ಅವರ ದುರ್ಬಲತೆಗೆ ಕಾರಣವಾಗುವ ಹಲವಾರು ಸಾಮಾನ್ಯ ಅಂಶಗಳನ್ನು ಬಹಿರಂಗಪಡಿಸುತ್ತದೆ. ಮತ್ತು ಪ್ರಮುಖ ನಗರ ಕೇಂದ್ರಗಳಿಗೆ ಭೌಗೋಳಿಕ ಸಾಮೀಪ್ಯ, ಸೀಮಿತ ಸೈಬರ್ ಭದ್ರತಾ ಮೂಲಸೌಕರ್ಯ, ಆರ್ಥಿಕ ಸವಾಲುಗಳು ಮತ್ತು ಕಡಿಮೆ ಡಿಜಿಟಲ್ ಸಾಕ್ಷರತೆ ಸೇರಿವೆ ಎಂದೂ ಅವರು ಹೇಳಿದರು.

ಅಸಮರ್ಪಕ KYC ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಪರಿಶೀಲನಾ ಪ್ರಕ್ರಿಯೆಗಳು ಅಪರಾಧಿಗಳಿಗೆ ನಕಲಿ ಗುರುತನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಹಾಗೂ,  ಪೊಲಿಸರಿಗೆ ಅವರನ್ನು ಪತ್ತೆಹಚ್ಚಲು ಸವಾಲಾಗುತ್ತದೆ. ಇನ್ನು, ಕಾಳ ಸಂತೆಯಲ್ಲಿ ನಕಲಿ ಖಾತೆಗಳು ಮತ್ತು ಬಾಡಿಗೆ ಸಿಮ್ ಕಾರ್ಡ್‌ಗಳಿಗೆ ಸುಲಭ ಪ್ರವೇಶವು ಕಳ್ಳರು ಅನಾಮಧೇಯವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದೂ ಎಂದು ಅದು ಹೇಳಿದೆ. ಹಾಗೂ, ನಿರುದ್ಯೋಗಿ ಅಥವಾ ಕಡಿಮೆ ಸಂಬಳ ಬರುವ ವ್ಯಕ್ತಿಗಳನ್ನು ಸೈಬರ್ ಕ್ರೈಮ್ ಸಿಂಡಿಕೇಟ್‌ಗಳು ನೇಮಕಾತಿ ಮತ್ತು ತರಬೇತಿ ನೀಡಲಾಗುತ್ತದೆ. ಇದು ಸಂಭಾವ್ಯ ಅಪರಾಧಿಗಳ ಬೆಳೆಯುತ್ತಿರುವ ಸಮೂಹವನ್ನು ಸೃಷ್ಟಿಸುತ್ತದೆ ಎಂದೂ ಹೇಳಲಾಗಿದೆ. 

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್‌ ಸ್ಪೆಷಲಿಸ್ಟ್‌’!

Follow Us:
Download App:
  • android
  • ios