ದೇವಸ್ಥಾನದೊಳಗೆ ನಮಾಜ್‌ ಮಾಡಿದ ಮಹಿಳೆಯರು: ವಿಡಿಯೋ ವೈರಲ್‌

ಮಹಿಳೆಯರು ದೇವಾಲಯದಲ್ಲಿ ನಿಂತುಕೊಂಡು ಇಸ್ಲಾಮಿಕ್‌ ಭಂಗಿಯಲ್ಲಿ ಪ್ರಾರ್ಥಿನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ಹಿನ್ನೆಲೆ ಮಹಿಳೆಯರನ್ನು ಬಂಧಿಸಲಾಗಿದೆ.

uttar pradesh woman step mother held for offering namaz inside temple ash

ಲಖನೌ (ಸೆಪ್ಟೆಂಬರ್ 18, 2023): ತನ್ನ ಮಲತಾಯಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ದೆಹಲಿಯ 20 ವರ್ಷದ ಮುಸ್ಲಿಂ ಮಹಿಳೆಯನ್ನು ಉತ್ತರ ಪ್ರದೇಶದಲ್ಲಿ ಭಾನುವಾರ ಬಂಧಿಸಲಾಗಿದೆ. ಬರೇಲಿಯ ಭೂತಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ "ಅಪರಾಧ ಸಂಚು" ಮತ್ತು "ಧಾರ್ಮಿಕ ಭಾವನೆಗೆ ಧಕ್ಕೆ ತರುವ" ಆರೋಪಗಳಡಿಯಲ್ಲಿ ಬಂಧಿಸಲಾಗಿದೆ.  ಮಹಿಳೆ, ಆಕೆಯ ಮಲತಾಯಿ ಮತ್ತು ಸ್ಥಳೀಯರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ದೆಹಲಿಯಲ್ಲಿ ತನ್ನ ಸಹೋದರನೊಂದಿಗೆ ವಾಸಿಸುತ್ತಿರುವ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಬರೇಲಿಯಲ್ಲಿರುವ ತನ್ನ ತಂದೆಯನ್ನು ನೋಡಲು ಬಂದಿದ್ದರು ಎಂದು ತಿಳಿದುಬಂದಿದೆ. "ಔಷಧಿ ಆಕೆಯನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ" ಎಂಬ ಕಾರಣದಿಂದಾಗಿ, ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಅವರ ಮಲತಾಯಿ ಸಲಹೆ ನೀಡಿದರು. ಶನಿವಾರ ಸಂಜೆ ಆಕೆಯೊಂದಿಗೆ ಅಲ್ಲಿಗೆ ಹೋದಾಗ ಯಾರೋ ಒಬ್ಬರು ವೀಡಿಯೋ ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆಕೆ ದೇವಸ್ಥಾನದೊಳಗೆ ನಮಾಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಸಂಗಾತಿ ಲೈಂಗಿಕ ಸಂಬಂಧ ನಿರಾಕರಿಸೋದು ಕ್ರೌರ್ಯಕ್ಕೆ ಸಮ: ಹೈಕೋರ್ಟ್

ಈ ಹಿನ್ನೆಲೆ ಬಲಪಂಥೀಯ ಗುಂಪು ಪೊಲೀಸರಿಗೆ ದೂರು ನೀಡಿದೆ ಮತ್ತು ಮಹಿಳೆ, ಆಕೆಯ ಮಲತಾಯಿ ಮತ್ತು ಸ್ಥಳೀಯ ನಿವಾಸಿಗಳ ವಿರುದ್ಧ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಯನ್ನು ಆಕ್ರೋಶಗೊಳಿಸುವುದು), 120 ಬಿ (ಅಪರಾಧದ ಪಿತೂರಿ) ಮತ್ತು 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯರು ದೇವಾಲಯದಲ್ಲಿ ನಿಂತುಕೊಂಡು ಇಸ್ಲಾಮಿಕ್‌ ಭಂಗಿಯಲ್ಲಿ ಪ್ರಾರ್ಥಿನೆ ಸಲ್ಲಿಸುತ್ತಿರುವುದು ವ್ಯಾಪಕವಾಗಿ ವೈರಲ್‌ ಆದ ವಿಡಿಯೋದಲ್ಲಿ ಕಾಣಬಹುದು. ಇನ್ನು, ಎರಡನೇ ವಿಡಿಯೋ ಕ್ಲಿಪ್‌ನಲ್ಲಿ ಮಹಿಳೆ ತನ್ನ ಸುತ್ತಲಿನ ಕೆಲವು ಜನರೊಂದಿಗೆ ಶಿವನ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ಇದನ್ನು ಓದಿ: ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್‌ ಮಾಡಿದ ನೀಚ ತಂದೆ!

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ತಿಳಿಸಿದ ಎಎಸ್ಪಿ (ಗ್ರಾಮೀಣ) ಮುಖೇಶ್ ಚಂದ್ರ ಮಿಶ್ರಾ “ಶನಿವಾರ ಭೂತಾ ಪೊಲೀಸ್ ವ್ಯಾಪ್ತಿಯ ಕೇಸರ್‌ಪುರ ಗ್ರಾಮದ ಪುರಾತನ ಶಿವ ದೇವಾಲಯದೊಳಗೆ ಇಬ್ಬರು ಮಹಿಳೆಯರು 'ನಮಾಜ್' ಮಾಡುತ್ತಿರುವುದು ಕಂಡುಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತಕ್ಷಣ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ’’ ಎಂದಿದ್ದಾರೆ. ಹಾಗೂ, ದೂರುದಾರರು ಎರಡನೇ ವಿಡಿಯೊವನ್ನು ನಮಗೆ ಒದಗಿಸಿಲ್ಲ. ಹೆಚ್ಚಿನ ವಿಡಿಯೋಗಳು ಲಭ್ಯವಿದ್ದರೆ ನಾವು ಪರಿಶೀಲಿಸುತ್ತೇವೆ ಮತ್ತು ನಮ್ಮ ತನಿಖೆಯ ಸಮಯದಲ್ಲಿ ಅವುಗಳನ್ನು ಪರಿಗಣಿಸುತ್ತೇವೆ ಎಂದೂ ಹೇಳಿದ್ದಾರೆ.

ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆಯ ಸೋದರ, “ನನ್ನ ತಂಗಿಗೆ ಆರೋಗ್ಯವಿಲ್ಲ ಮತ್ತು ನನ್ನ ತಾಯಿ ಅವರನ್ನು ಚಿಕಿತ್ಸೆಗಾಗಿ ಬರೇಲಿಗೆ ಕರೆದೊಯ್ದರು, ಅಲ್ಲಿ ಅವರನ್ನು ಗುಣಪಡಿಸಲು ಇದೊಂದೇ ಮಾರ್ಗವೆಂದು ಹೇಳುವ ಮೂಲಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ನನ್ನ ತಂಗಿ ಅಪರಾಧಿಯಲ್ಲ. ಆಕೆಯನ್ನು ಜೈಲಿಗೆ ಕಳುಹಿಸಬಾರದು. ಅವರು ಕೇವಲ ರೋಗಿ’’ ಎಂದಿದ್ದಾರೆ. 

ಇದನ್ನು ಓದಿ: ಬ್ರೇಕಪ್​ಗೆ ಒಪ್ಪದಿದ್ದಕ್ಕೆ ಪ್ರಿಯಕರನ ಹತ್ಯೆ: ವಿಷ ನೀಡಿದ್ದ ಗ್ರೀಷ್ಮಾ ಕಾಟಕ್ಕೆ ಬೇಸತ್ತ ಕೈದಿಗಳು!

Latest Videos
Follow Us:
Download App:
  • android
  • ios