ಜೈಲಿಂದ ಬಿಡುಗಡೆ ಭಾಗ್ಯ ಗೆಳೆಯರೊಂದಿಗೆ ಪಾರ್ಟಿ ಮಾಡಿದವನಿಗೆ ಮತ್ತೆ ಶಾಕ್

ಮುಂಬೈ(ಜು.03): ಕೊರೋನಾ ಬಂದ ಮೇಲೆ ಸಾರ್ವಜನಿಕ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಏನಾದರೂ ಆಚರಿಸಿ, ಆದ್ರೆ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ರೆ ಕೇಸ್ ಹಾಕಿ ಅರೆಸ್ಟ್ ಮಾಡ್ತೀವಿ ಅಂತಾರೆ ಪೊಲೀಸರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲವು ಬದಲಾವಣೆಗಳೊಂದಿಗೆ ಕೊರೋನಾ ರೂಲ್ಸ್ ಅಪ್ಡೇಟ್ ಆಗುತ್ತಲೇ ಇದೆ. ಆದರೆ ಜೈಲಿನೊಳಗಿದ್ದವರಿಗೆ ಈ ಕುರಿತು ಸ್ಪಷ್ಟ ಮಾಹಿತಿ ಇದೆಯಾ ? ಒಂದಷ್ಟು ಮಾಹಿತಿ ಇರಬಹುದು. ಇದರ ಪರಿಣಾಮ ಏನಾಗಿದೆ ನೋಡಿ.

ದೇಶದ 95% ಮುಸ್ಲಿಮರಿಗೆ ಭಾರತೀಯರೆಂಬ ಹೆಮ್ಮೆ ಇದೆ; Pew ಸಮೀಕ್ಷೆ!.

ಜೈಲಿನಿಂದ ಬಿಡುಗಡೆಯಾಗಲಿದ್ದ ವ್ಯಕ್ತಿ ಫುಲ್ ಖುಷಿಯಲ್ಲಿದ್ದ. ಆತ ಗೆಳೆಯರೊಂದಿಗೆ ಜೈಲಿನಿಂದ ಹೊರಬರುವ ಖುಷಿಯನ್ನು ಆಚರಿಸುತ್ತಿದ್ದ. 10-15 ಜನ ಆತನನ್ನು ಸ್ವಾಗತಿಸಲು ಜೀಪ್‌ನಲ್ಲಿ ಬಂದಿದ್ದರು.

ಬಿಡುಗಡೆಯಾಗಲಿದ್ದ ವ್ಯಕ್ತಿ ಖುಷಿಯಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದ. ಆದರೆ ಅಲ್ಲಿದ್ದ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಸು ದಾಖಲಿಸಿದ್ದಾರೆ.