ದೇಶದ 95% ಮುಸ್ಲಿಮರಿಗೆ ಭಾರತೀಯರೆಂಬ ಹೆಮ್ಮೆ ಇದೆ; Pew ಸಮೀಕ್ಷೆ!
- ಭಾರತೀಯ ಸಂಸ್ಕೃತಿ ಇತರ ಎಲ್ಲಾ ಸಂಸ್ಕೃತಿಗಿಂತ ಶ್ರೇಷ್ಠ
- ಶೇಕಡಾ 95 ರಷ್ಟು ಮುಸ್ಲಿಮರಿಗೆ ಭಾರತೀಯರು ಅನ್ನೋ ಹೆಮ್ಮೆ
- ವಾಶಿಂಗ್ಟನ್ ಡಿಸಿ ಮೂಲದ Pew ಕೇಂದ್ರದ ಸಮೀಕ್ಷೆ ವರದಿ ಪ್ರಕಟ
ನವದೆಹಲಿ(ಜು.03): ಭಾರತ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರ. ಹಲವು ಧರ್ಮ, ಭಾಷೆ, ಸಂಸ್ಕ್ರೃತಿ, ಆಚಾರ-ವಿಚಾರ, ಪದ್ದತಿಗಳನ್ನು ಆಚರಿಸುವ, ಅನುಸರಿಸವ ದೇಶ. ಇದೇ ಕಾರಣ ಭಾರತ ಅತ್ಯಂತ ವೈವಿಧ್ಯಮಯ ರಾಷ್ಟ್ರ. ಹಿಂದೂ, ಜೈನ, ಬುದ್ಧ, ಸಿಖ್, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಹಲವು ಧರ್ಮಗಳ ಜನ ಇಲ್ಲಿದ್ದಾರೆ. ಎಲ್ಲಾ ಧರ್ಮದ ಜನ ಅತ್ಯಂತ ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಧರ್ಮ-ಧರ್ಮಗಳ ನಡುವಿನ ತಿಕ್ಕಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆದರೆ ಭಾರತೀ-ಭಾರತೀಯತೆ ವಿಚಾರಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಇದೀಗ Pew ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆ ಇದೇ ವಿಚಾರ ಬಹಿರಂಗ ಪಡಿಸಿದೆ.
ಭಾರತೀಯರಲ್ಲಿ ಸಹಿಷ್ಣುತೆ ಹೆಚ್ಚು, ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಂ: Pew ವರದಿ!.
ಭಾರತದ ಶೇಕಡಾ 95 ರಷ್ಟು ಮುಸ್ಲಿಮರಿಗೆ ಭಾರತೀಯರು ಅನ್ನೋ ಹೆಮ್ಮೆ ಇದೆ ಎಂದು ಅಮೆರಿಕದ ವಾಶಿಂಗ್ಟನ್ ಡಿಸಿ ಮೂಲಕ Pew ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆ ಹೇಳಿದೆ. ಭಾರತೀಯರು ಹಾಗೂ ಭಾರತದ ಸಂಸ್ಕ್ರತಿ ವಿಚಾರದಲ್ಲೂ ಈ ಸಮೀಕ್ಷೆ ಬೆಳಕು ಚೆಲ್ಲಿದೆ. ಶೇಕಡಾ 85 ರಷ್ಟು ಮುಸ್ಲಿಮರು, ಭಾರತೀಯರು ಪರಿಪೂರ್ಣರಲ್ಲ, ಆದರೆ ಭಾರತದ ಸಂಸ್ಕೃತಿ ಇತರರಿಗಿಂತ ಶ್ರೇಷ್ಠವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
Pew ಸಂಶೋಧನಾ ಕೇಂದ್ರದ ಸಮೀಕ್ಷಾ ವರದಿಗೆ ಬಿಜೆಪಿ ರಾಜ್ಯಸಭಾ ಸಂಸದ ಪ್ರತಿಕ್ರಿಯಿಸಿದ್ದಾರೆ. ನರೇಂದ್ರ ಮೋದಿ ಆಡಳಿತದಲ್ಲಿ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಧ್ಯೇಯವಾಕ್ಯದಂತೆ ಪ್ರತಿಯೊಬ್ಬ ಭಾರತೀಯನು ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಪಡೆಯುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಲಾ ರಾಜ್ಯದಲ್ಲಿ ಡಿಸಿಎಂ ಪೋಸ್ಟ್ ಮುಸ್ಲಿಮರಿಗೆ ಮೀಸಲು..! AIMIM ಹೊಸ ಬೇಡಿಕೆ
ಹಿಂದೂ-ಮುಸ್ಲಿಂ ಬಾಂಧವ್ಯ:
ಇದೇ ಸಮೀಕ್ಷೆ ಹಿಂದೂ-ಮುಸ್ಲಿಂ ನಡುವಿನ ಬಾಂಧವ್ಯ ಹಾಗೂ ಹಿಂಸಾಚಾರ ಕುರಿತು ಕೆಲ ಮಹತ್ವ ಮಾಹಿತಿ ಬಹಿರಂಗಪಡಿಸಿದೆ. ಭಾರತದ ಹಿಂದೂ ಸಮುದಾಯ ಹಾಗೂ ಮುಸ್ಲಿಂ ಸಮುದಾಯ ಸಂಕೀರ್ಣವಾದ ಹಾಗೂ ಜಟಿಲವಾದ ಇತಿಹಾಸ ಹೊಂದಿದೆ. ಹಿಂದೂ ಸಮುದಾಯದ ಜೊತೆ ಶತಮಾನಗಳಿಂದ ಮುಸ್ಲಿಂ ಸಮುದಾಯ ನೆಲೆಯೂರಿದೆ. ಆಧರೆ ಅಶಾಂತಿ, ಸಂಘರ್ಷ, ಹಿಂಸಾಚಾರ ನಡೆಯುತ್ತಲೇ ಬಂದಿದೆ ಎಂದು ವರದಿ ಹೇಳಿದೆ.
ದೇಶದಲ್ಲಿ ತಾರತಮ್ಯ;
Pew ಸಂಶೋಧನಾ ಕೇಂದ್ರದ ಸಮೀಕ್ಷೆ ಪ್ರಕಾರ ಭಾರತದ ಶೇಕಡಾ 24 ರಷ್ಟು ಮುಸ್ಲಿಮರು ತಮ್ಮ ಸಮುದಾಯ ದೇಶದಲ್ಲಿ ತಾರತಮ್ಯ ಎದುರಿಸುತ್ತಿದೆ ಎಂದಿದ್ದಾರೆ. ಇನ್ನು ಶಕೇಡಾ 21 ರಷ್ಟು ಹಿಂದೂಗಳು ತಮ್ಮ ಸಮದಾಯ ಬಹುಸಂಖ್ಯವಾಗಿದ್ದರೂ ತಾರಮತ್ಯ ಎದುರಿಸಿದ್ದಾರೆ ಎಂದಿದ್ದಾರೆ.
ಹ,ಹ ಫೇಸ್‌ಬುಕ್ ಇಮೋಜಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಮೌಲ್ವಿ!
ಭಾರದ ವಿವಿಧ ಭಾಗಗಳಲ್ಲಿ ತಾರತಮ್ಯ ಕುರಿತು Pew ತನ್ನ ಸಮೀಕ್ಷೆಯಲ್ಲಿ ಉಲ್ಲೇಖಿಸಿದೆ. ಉತ್ತರದಲ್ಲಿ ಶೇಕಡಾ 40 ರಷ್ಟು ಮಂದಿ ಕಳೆದ 12 ತಿಂಗಳಲ್ಲಿ ವೈಯುಕ್ತಿಕವಾಗಿ ಧಾರ್ಮಕಿ ತಾರತಮ್ಯ ಎದುರಿಸಿದ್ದಾರೆ ಎಂದಿದ್ದಾರೆ. ಇನ್ನು ಈಶಾನ್ಯ ಭಾರತದಲ್ಲಿ ಈ ತಾರತಮ್ಯ ಪ್ರಮಾಣ ಶಕೇಡಾ 36, ದಕ್ಷಿಣದಲ್ಲಿ 19%, ಭಾರತದ ಮಧ್ಯ ಭಾಗಗಳಲ್ಲಿ ಶೇಕಡಾ 18, ಪೂರ್ವದಲ್ಲಿ ಶೇಕಡಾ 17 ಹಾಗೂ ಪಶ್ಚಿಮ ಭಾಗದಲ್ಲಿ ಶೇಕಡಾ 18 ರಷ್ಟಿದೆ ಎಂದಿದ್ದಾರೆ.
ಹಿಂದೂ-ಮುಸ್ಲಿಂ ರಾಷ್ಟ್ರೀಯ ಸಮಸ್ಯೆ:
ದೇಶದ ಶೇಕಜಾ 65 ರಷ್ಟು ಮುಸ್ಲಿಮರು ಕೋಮು, ಹಿಂಸಾಚಾರ ರಾಷ್ಟ್ರೀಯ ಸಮಸ್ಯೆಯಾಗಿ ನೋಡುತ್ತಾರೆ. ಮುಸ್ಲಿಮರು ಮದುವೆ ಸೇರಿದಂತೆ ಸಾರ್ವಜನಿಕ ಜೀವನದ ಕೆಲ ಅಂಶಗಳನ್ನು ತಮ್ಮ ಧರ್ಮದೊಳಗೆ ನಡೆಸಲು ಹಾಗೂ ಇತರ ಧರ್ಮದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಾರೆ ಅನ್ನೋದು ಸಮೀಕ್ಷೆ ಹೇಳುತ್ತಿದೆ.
ಮುಸ್ಲಿಮರಿಗೆ ಪ್ರತ್ಯೇಕ ಇಸ್ಲಾಮಿಕ್ ನ್ಯಾಯಾಲಯ:
ಭಾರತದ ಶೇಕಡಾ 74 ರಷ್ಟು ಮುಸ್ಲಿಮರು, ಪ್ರತ್ಯೇಕ ಇಸ್ಲಾಮಿಕ್ ನ್ಯಾಯಾಲಯ ವ್ಯವಸ್ಥೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತ್ಯೇಕ ನ್ಯಾಯಾಲದಿಂದ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಕೆಲ ಮುಸ್ಲಿಮರು ಅಭಿಪ್ರಾಯಪಟ್ಟಿದ್ದಾರೆ.