ಕೃಷ್ಣಾಷ್ಟಮಿ: ವೈರಲ್ ಆಯ್ತು ಕಲ್ಲಿನಿಂದ ಹೊಡೆದರು ಒಡೆಯದ ಮೊಸರು ಕುಡಿಕೆ
ಮೊಸರು ಕುಡಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ.
ಮೊಸರು ಕುಡಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ. ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಮಮಿ ನಡೆಯಿತು. ಕೋವಿಡ್‌ನಿಂದಾಗಿ ಎರಡು ವರ್ಷಗಳ ಬಳಿಕ ಜನ ಸಾರ್ವಜನಿಕವಾಗಿ ದೇಶಾದ್ಯಂತ ಜಗದೋದ್ಧಾರನ ಜನ್ಮಾಷ್ಟಮಿಯನ್ನು ಬಹಳ ಅದ್ಧೂರಿಯಾಗಿ ನಡೆಸಿದರು. ಕೃಷ್ಣಾಜನ್ಮಷ್ಟಮಿಯಂದು ಕೇವಲ ದೇವರ ಆರಾಧನೆಯಲ್ಲದೇ ಹಲವು ವಿಶೇಷ ಕ್ರೀಡಾ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ಬಹುತೇಕರು ತಮ್ಮ ಪುಟ್ಟ ಮಕ್ಕಳಿಗೆ ಬೆಣ್ಣೆಕಳ್ಳ ಬಾಲಕೃಷ್ಣನ ವೇಷವನ್ನು ಹಾಕಿ ಆನಂದಿಸುತ್ತಾರೆ. ಮಕ್ಕಳಲ್ಲೇ ಶ್ರೀಕೃಷ್ಣನನ್ನು ಕಾಣುತ್ತಾರೆ.
ಅದೇ ರೀತಿ ಕಂಬಕ್ಕೆ ಚೆನ್ನಾಗಿ ಗ್ರೀಸ್ ಹಾಗೂ ಎಣ್ಣೆ ಉಜ್ಜಿ ಅದರ ತುದಿಗೆ ಮೊಸರು ಕುಡಿಕೆ ಕಟ್ಟುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ಯುವಕರವರೆಗೆ ಮೊಸರು ಕುಡಿಕೆ ಒಡೆಯಲು ಬೆಳಗ್ಗೆಯಿಂದ ಸಂಜೆಯವರೆಗೆ ಕಂಬವೇರುತ್ತಾ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಆಕಾಶದೆತ್ತರದಲ್ಲಿ ಮೊಸರು ಕುಡಿಕೆಯನ್ನು ಕಟ್ಟಿ ಅದನ್ನು ಒಡೆಯುವ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಈ ಕ್ರೀಡೆಯನ್ನು ಒಂದೊಂದು ಕಡೆ ಒಂದೊಂದು ರೀತಿಯ ಹೆಸರಿನಿಂದ ಕರೆಯುತ್ತಾರೆ. ಉತ್ತರದಲ್ಲಿ ಈ ಮೊಸರು ಕುಡಿಕೆ ಸ್ಪರ್ಧೆಯನ್ನು ದಹಿ ಹಂಡಿ ಸ್ಪರ್ಧೆ ಎಂದು ಕರೆಯುತ್ತಾರೆ.
ಮೇಲೆ ಕಟ್ಟಿದ ಮೊಸರು ಕುಡಿಕೆಯಲ್ಲಿ ಒಂದೊಂದು ಕಡೆ ಒಂದೊಂದು ವಸ್ತುಗಳನ್ನು ಇಟ್ಟಿರುತ್ತಾರೆ. ಅದಕ್ಕಾಗಿ ಹುಡುಗರು ತಂಡ ಕಟ್ಟಿ ಮೊಸರು ಕುಡಿಕೆಯನ್ನು ಒಡೆಯುವ ಸಾಹಸಕ್ಕೆ ಇಳಿಯುತ್ತಾರೆ. ಗೆದ್ದ ತಂಡಕ್ಕೆ ಒಳ್ಳೆಯ ಮೊತ್ತದ ಬಹುಮಾನವನ್ನು ಕಾರ್ಯಕ್ರಮ ಆಯೋಜಕರು ನೀಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಕಟ್ಟಿದ ಮೊಸರು ಕುಡಿಕೆ ಮಾತ್ರ ಅಷ್ಟೆತ್ತರಕ್ಕೆ ಏರಿ ಕಲ್ಲಿನಿಂದ ಕುಟ್ಟಿ ಕುಟ್ಟಿ ಹೊಡೆದರು ಮಡಕೆ ಮಾತ್ರ ಒಡೆಯದೇ ಸೋಜಿಗ ಮೂಡಿಸಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಟ್ರೋಲಿಗರು ಮೀಮ್ಸ್ ಪೇಜ್‌ಗಳು ಈ ವಿಡಿಯೋವನ್ನು ಶೇರ್ ಮಾಡಿಕೊಂಡು ವಿಭಿನ್ನವಾಗಿ ಟ್ರೋಲ್ ಮಾಡುತ್ತಿದ್ದಾರೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಾ ಎಲ್ಲರಿಗೂ ಕಚಗುಳಿ ಇಡುತ್ತಿದೆ.
Krishna Janmashtami: ಇಸ್ಕಾನ್‌ನಲ್ಲಿ ಸಡಗರ, ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಕೆಲವರು ಈ ಮಡಕೆ ಮಾಡಿದ ಕುಂಬಾರನಿಗಾಗಿ ಯುವಕರ ತಂಡ ಹುಡುಕಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇದು ಸ್ಟೀಲ್ ಮಡಿಕೆಗೆ ಮಣ್ಣಿನ ಬಣ್ಣದ ಪೇಂಟಿಂಗ್ ನೀಡಿ ಕಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಮಡಕೆ ಒಡೆಯಲು ಮಾನವ ಪಿರಮಿಡ್ ತಂಡ ಮೇಲೆರಿ ಸುಮಾರು 23 ಬರೀ ಈ ಮೊಸರು ಕುಡಿಕೆಗೆ ಹೊಡೆದರು ಅದು ಜಪ್ಪಯ್ಯ ಎಂದಿಲ್ಲ. ಈ ವಿಡಿಯೋವನ್ನು ಎಪಿಎನ್ ನ್ಯೂಸ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾಕಷ್ಟು ವೈರಲ್ ಅದ ವಿಡಿಯೋಗಳನ್ನು ನಾವು ನೋಡಿದ್ದೇವೆ. ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸಿದರೆ ಮತ್ತೆ ಕೆಲವು ವಿಡಿಯೋಗಳು ಕಣ್ಣಂಚನ್ನು ತೇವಗೊಳಿಸುತ್ತವೆ. ಹೀಗೆ ವಿವಿಧ ರೀತಿಯ ವೆರೈಟಿ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬರವಿಲ್ಲ. ಅದೇ ರೀತಿ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದಂತು ನಿಜ.
ಕೃಷ್ಣ ಜನ್ಮಾಷ್ಟಮಿಗೆ ಲಂಡನ್‌ನಲ್ಲಿರುವ ದೇವಸ್ಥಾನಕ್ಕೆ ರಿಶಿ ಸುನಕ್ ಕುಟುಂಬ ಸಮೇತ ಭೇಟಿ!