* ಪತ್ನಿಗೆ ಸುಳ್ಳು ಹೇಳಿ ಮಾಲ್ಡೀವ್ಸ್‌ಗೆ ಸ್ನೇಹಿತೆ ಜೊತೆ ಪ್ರವಾಸ* ಪತ್ನಿಗೆ ತಿಳಿಯದಿರಲು ಮಹಾ ಎಡವಟ್ಟು* ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಇಂಜಿನಿಯರ್ ಈಗ ಜೈಲುಪಾಲು

ಮುಂಬೈ(ಜು.10): ಒಬ್ಬ ವ್ಯಕ್ತಿ ಗೆಳತಿಯೊಂದಿಗೆ ತನ್ನ ಪ್ರಯಾಣಿಸಿರುವುದನ್ನು ಮರೆಮಾಚಲು ಹೋಗಿ ಸಂಕಷ್ಟಕ್ಕೀಡಾಗಿದ್ದಾನೆ. ಆತ ತನ್ನ ಸ್ನೇಹಿತೆ ಜೊತೆ ಮಾಲ್ಡೀವ್ಸ್‌ಗೆ ರಜೆ ಮೇಲೆ ಹೋಗಿದ್ದ. ಆದರೆ ಹಿಂತಿರುಗಿದಾಗ ಈ ವಿಚಾರ ಯಾರಿಗೂ ತಿಳಿಯದಿರಲಿ ಎಂದು ಪಾಸ್ ಪೋರ್ಟ್ ನಲ್ಲಿದ್ದ ವೀಸಾ ಸ್ಟಾಂಪ್ ನ ಪುಟಗಳನ್ನು ಹರಿದು ಹಾಕಿದ್ದಾನೆ. ವಾಸ್ತವವಾಗಿ, ಆ ವ್ಯಕ್ತಿ ತನ್ನ ಗೆಳತಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿರುವುದು ಆತನ ಹೆಂಡತಿಗೆ ತಿಳಿದಿರಲಿಲ್ಲ, ಅಲ್ಲದೇ ಆಕೆಗೆ ತಿಳಿಯದಿರಲಿ ಎಂಬುವುದಷ್ಟೇ ಆತ ಬಯಸಿದ್ದ.

ನಾದಿನಿ ಮೇಲೆ ವ್ಯಾಮೋಹ : ಹೆಚ್‌ಐವಿಯಿಂದ ಬಳಲುತ್ತಿದ್ದ ಪತ್ನಿಯ ಕೊಂದ ಪತಿ

ಪತ್ನಿಯ ಕೋಪದಿಂದ ಪಾರಾಗಲು ಆ ವ್ಯಕ್ತಿ ಪಾಸ್‌ಪೋರ್ಟ್‌ನಿಂದ ವೀಸಾ ಸ್ಟಾಂಪ್ ಪುಟಗಳನ್ನು ತೆಗೆದಿದ್ದ. ಆದರೆ ಾತ ಎಡವಿದ್ದೇ ಅಲ್ಲಿ, ಯಾಕೆಂದರೆ ಪಾಸ್‌ಪೋರ್ಟ್ ತಪಾಸಣೆ ವೇಳೆ ಆತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. 'ಮಿಡ್ ಡೇ' ಪತ್ರಿಕೆಯ ಪ್ರಕಾರ, 32 ವರ್ಷದ ಈ ವ್ಯಕ್ತಿ ಮುಂಬೈ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಆತನ ಗುರುತು ಬಹಿರಂಗಗೊಂಡಿಲ್ಲ. ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ, ವ್ಯಕ್ತಿಯ ಪಾಸ್‌ಪೋರ್ಟ್‌ನ ಕೆಲವು ಪುಟಗಳು ನಾಪತ್ತೆಯಾಗಿರುವುದು ಇಮಿಗ್ರೇ‍ಶನ್ ಡಿಪಾರ್ಟ್‌ಮೆಂಟ್‌ಗೆ ತಿಳಿಯಿತು. ಕೂಡಲೇ ಆತನನ್ನು ಸಹಾರ್‌ ಪೊಲೀಸರಿಗೆ ಒಪ್ಪಿಸಲಾಗಿದೆ.

ವಿಚಾರಣೆಯ ನಂತರ, ಪೊಲೀಸರು ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಪತ್ನಿಯ ಕೋಪದಿಂದ ಪಾರಾಗಲು ಇಂತಹ ತಪ್ಪು ಮಾಡಿದೆ ಎಂದು ಎಂಜಿನಿಯರ್ ಪೊಲೀಸರಿಗೆ ತಿಳಿಸಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ಬಗ್ಗೆ ತನ್ನ ಹೆಂಡತಿಗೆ ಎಂದಿಗೂ ತಿಳಿಯಬಾರದು ಎಂದು ಖಚಿತಪಡಿಸಿಕೊಳ್ಳಲು ತಾನು ಪುಟಗಳನ್ನು ಹರಿದು ಹಾಕಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. 

ಹೆಂಡತಿಗೆ ತಿಳಿಯದಂತೆ ಗೆಳತಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದ

ವರದಿಯ ಪ್ರಕಾರ, ಈ ವ್ಯಕ್ತಿ ತನ್ನ ಹೆಂಡತಿಗೆ ಕಚೇರಿ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ತನ್ನ ಗೆಳತಿಯನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ. ಆದರೆ ಫೋನ್ ತೆಗೆಯದಿದ್ದಾಗ ಪತ್ನಿಗೆ ಅನುಮಾನ ಬಂದಿತ್ತು. ಇಂತಹ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಕಥೆಯನ್ನು ಮರೆಮಾಚಲು, ವ್ಯಕ್ತಿ ತನ್ನ ಪಾಸ್‌ಪೋರ್ಟ್‌ನ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣವನ್ನು ತಲುಪಿದ್ದಾನೆ.

Crime News: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಹೆತ್ತವರನ್ನೇ ಕೊಂದ ಮಗಳು

ಆದರೆ ವಲಸೆ ಅಧಿಕಾರಿಗಳು ಆತನ ಪಾಸ್‌ಪೋರ್ಟ್‌ನಲ್ಲಿದ್ದ ಕೆಲವು ಪುಟಗಳು ಕಾಣೆಯಾದಾಗ, ಆತನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಆತ ಈ ವೇಳೆ ಅಸಲಿಯತ್ತು ಮುಚ್ಚಿಟ್ಟು ತಡಬಡಾಯಿಸಿದ್ದಾನೆ. ಹೀಗಾಗಿ ಅಧಿಕಾರಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂತಿಮವಾಗಿ ಬೇರೆ ದಾರಿ ಕಾಣದಾಗ ಆತ ತಾನು ಹೀಗೇಕೆ ಮಾಡಿದೆ ಎಂದು ವಿವರಿಸಿದ್ದಾನೆ. 

ಆದರೆ, ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಹಾಕುವುದು ಅಪರಾಧ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. ವಾಸ್ತವವಾಗಿ, ಪಾಸ್‌ಪೋರ್ಟ್ ಅನ್ನು ಭಾರತ ಸರ್ಕಾರವು ನೀಡುತ್ತದೆ ಮತ್ತು ಇದನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹಾನಿಯನ್ನುಂಟುಮಾಡುವುದು ಅಪರಾಧ ಕೃತ್ಯವೆಂದು ಪರಿಗಣಿಸಲಾಗಿದೆ.