Crime News: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಹೆತ್ತವರನ್ನೇ ಕೊಂದ ಮಗಳು
Latest Crime News: ಕಾನ್ಪುರದ ಮನೆಯಿಂದ ವಯೋವೃದ್ಧ ದಂಪತಿಗಳ ಶವಗಳನ್ನು ವಶಪಡಿಸಿಕೊಂಡ ಗಂಟೆಗಳ ನಂತರ ಪೊಲೀಸರು ಮಂಗಳವಾರ ಅವರ ಮಗಳನ್ನು ಬಂಧಿಸಿದ್ದಾರೆ.
ಕಾನ್ಪುರ (ಜು. 07): ಉತ್ತರಪ್ರದೇಶ (Uttar Pradesh) ಕಾನ್ಪುರದ ಬರ್ರಾ ಪ್ರದೇಶದಲ್ಲಿ ವೃದ್ಧ ದಂಪತಿಯ ಶವಗಳನ್ನು (Dead Bodies) ಅವರ ಮನೆಯಿಂದ ವಶಪಡಿಸಿಕೊಂಡ ಗಂಟೆಗಳ ನಂತರ ಪೊಲೀಸರು ಮಂಗಳವಾರ ಅವರ ಮಗಳನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮುನ್ನಾ ಲಾಲ್ ಉತ್ತಮ್ (62) ಮತ್ತು ಅವರ ಪತ್ನಿ ರಾಜ್ ದೇವಿ (55) ಅವರ ಕತ್ತು ಸೀಳಿದ ಸ್ಥಿತಿಯಲ್ಲಿದ್ದ ಶವಗಳು ಅವರ ಮನೆಯ ನೆಲ ಅಂತಸ್ತಿನ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿದ್ದವು. ದಂಪತಿ ತಮ್ಮ ಮಗ ಅನೂಪ್ ಮತ್ತು ಮಗಳು ಕೋಮಲ್ ಜೊತೆ ವಾಸಿಸುತ್ತಿದ್ದರು.
ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪೋಷಕರನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕೋಮಲ್ ಸೋಮವಾರ ರಾತ್ರಿ ತನ್ನ ಪೋಷಕರು ಮತ್ತು ಸಹೋದರನಿಗೆ ಅಮಲು ಬೆರೆಸಿದ ಜ್ಯೂಸ್ ನೀಡಿದ್ದಳು.
ಮೇಲ್ನೋಟಕ್ಕೆ ಕೋಮಲ್ ತನ್ನ ಪ್ರಿಯಕರನೊಂದಿಗಿನ ಮದುವೆಯನ್ನು ವಿರೋಧಿಸಿದ ಕಾರಣ ಮತ್ತು ಕೋಮಲ್ ಆಸ್ತಿಯ (Property) ಮಾಲೀಕತ್ವವನ್ನು ಪಡೆಯಲು ತನ್ನ ಹೆತ್ತವರನ್ನೆ ಕೊಂದಿದ್ದಾಳೆ ಎಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ವಿಚಾರಣೆ ವೇಳೆ ಕೋಮಲ್, ಮೂವರು ಮುಸುಕುಧಾರಿಗಳು ಮನೆಯಿಂದ ಓಡಿ ಹೋಗುತ್ತಿರುವುದನ್ನು ನೋಡಿರುವುದಾಗಿ ಹೇಳಿದ್ದಾಳೆ. ಮೊದಲಿಗೆ ಅತ್ತಿಗೆಯ ಸಹೋದರನೇ ತನ್ನ ಪೋಷಕರನ್ನು ಕೊಂದಿದ್ದಾನೆ ಎಂದು ಕೋಮಲ್ ಆರೋಪಿಸಿದ್ದಳು.
ಇದನ್ನೂ ಓದಿ: ಮತ್ತೊಬ್ಬನೊಂದಿಗೆ ಚಕ್ಕಂದ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿಯನ್ನು ಕೊಂದ ಗಂಡ
ಈ ಪ್ರದೇಶದಲ್ಲಿ ವಾಸವಿದ್ದ ಅತ್ತಿಗೆಯ ಸಹೋದರ ಸುರೇಂದ್ರ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು ಮತ್ತು ಬೇಡಿಕೆ ಈಡೇರಿಸದಿದ್ದರೆ ಕುಟುಂಬವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಕೋಮಲ್ ತಿಳಿಸಿದ್ದಳು.
ಆದರೆ, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ (CCTV Footage) ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು 10 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ತಡರಾತ್ರಿ ಯುವಕನೊಬ್ಬ ಮನೆಗೆ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಆ ವ್ಯಕ್ತಿಯನ್ನು ಕೋಮಲ್‌ನ ಗೆಳೆಯ ಎಂದು ಗುರುತಿಸಿದ್ದಾರೆ.