Asianet Suvarna News Asianet Suvarna News

'ಲಿವ್ ಇನ್ ರಿಲೇಷನ್‌ ಶಿಪ್ ಅಗ್ರಿಮೆಂಟ್'ತೋರಿಸಿ ರೇಪ್ ಕೇಸ್‌ನಲ್ಲಿ ಬೇಲ್ ಪಡೆದ ವ್ಯಕ್ತಿ

ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್ ತೋರಿಸಿ ಸರ್ಕಾರಿ ನೌರಕನೋರ್ವ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಪ್ರಕರಣ ಇಲ್ಲಿದೆ ಡಿಟೇಲ್

Mumbai court granted bail to rape accused who showed live in relationship agreement to court akb
Author
First Published Sep 4, 2024, 11:26 AM IST | Last Updated Sep 4, 2024, 11:26 AM IST

ಮುಂಬೈ: ಮದುವೆಯಾಗುತ್ತೇನೆ ಎಂದು ದೈಹಿಕ ಸಂಬಂಧ ಬೆಳೆಸಿ ಬಳಿಕ ಮೋಸ ಮಾಡಿದ್ದಾನೆ ಎಂದು ಹೇಳಿ ಲೀವಿಂಗ್ ರಿಲೇಷನ್ ಶಿಪ್‌ ಪಾರ್ಟನರ್ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಇದು ಅತ್ಯಾಚಾರ ಪ್ರಕರಣ ಅಲ್ಲ ಸಮ್ಮತಿಯ ಲೈಂಗಿಕ ಸಂಬಂಧ. ಇಬ್ಬರು ಪರಸ್ಪರ ಒಪ್ಪಿ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದು, ಈ ಲೀವಿಂಗ್ ರಿಲೇಷನ್‌ಶಿಪ್‌ಗೆ ಅಗ್ರಿಮೆಂಟ್ ಕೂಡ ಮಾಡಲಾಗಿದೆ ಎಂದು ಲೀವಿಂಗ್ ರಿಲೇಷನ್‌ ಶಿಪ್‌ನ ಅಗ್ರಿಮೆಂಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಲೀವಿಂಗ್ ರಿಲೇಷನ್‌ ಶಿಪ್ ಅಗ್ರಿಮೆಂಟ್( ಒಪ್ಪಂದ) ನೋಡಿದ ನ್ಯಾಯಾಲಯವೂ ಆತನಿಗೆ ಈ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ವಯಸ್ಸಾದವರ ಆರೈಕೆ ಮಾಡುವ ಕೇರ್ ಗೀವರ್ ಮಹಿಳೆಯಾಗಿ ಕೆಲಸ ಮಾಡುತ್ತಿದ್ದರೆ, ಪುರುಷ ಸರ್ಕಾರಿ ನೌಕರನಾಗಿದ್ದಾನೆ. 

ಲೀವಿಂಗ್ ರಿಲೇಷನ್‌ ಶಿಪ್ ಅಗ್ರಿಮೆಂಟ್‌ನಲ್ಲಿ ಏನಿದೆ?

  • ಈಗ ನ್ಯಾಯಾಲಯಕ್ಕೆ 46 ವರ್ಷದ ವ್ಯಕ್ತಿ ಸಲ್ಲಿಕೆ ಮಾಡಿರುವ ಲೀವಿಂಗ್ ರಿಲೇಷನ್‌ ಶಿಪ್‌ ಅಗ್ರಿಮೆಂಟ್‌ನಲ್ಲಿ 7 ಮಹತ್ವದ ಅಂಶಗಳಿದ್ದು, ಅದಕ್ಕೆ ಇಬ್ಬರು ಫೋಟೋ ಸಹಿತ ಸಹಿ ಹಾಕಿದ್ದಾರೆ.
  • ಈ ಒಪ್ಪಂದದ  ಇವರಿಬ್ಬರು ಜೊತೆಯಾಗಿ ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದಾರೆ. 
  • ಈ ಅವಧಿಯಲ್ಲಿ ಇಬ್ಬರೂ ಕೂಡ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವಂತಿಲ್ಲ ಹಾಗೂ ಜಗಳವಿಲ್ಲದೇ ಶಾಂತಿಯುತವಾಗಿ ಸಮಯ ಕಳೆಯಬೇಕು.
  • ಮಹಿಳೆಯು ಪುರುಷನೊಂದಿಗೆ ಆತನ ಮನೆಯಲ್ಲೇ ವಾಸ ಮಾಡುತ್ತಾಳೆ ಹಾಗೂ ಮಹಿಳೆಯ ಸಂಬಂಧಿಕರು ಈ ಮನೆಗೆ ಬರುವಂತಿಲ್ಲ
  • ಈ ಸಮಯದಲ್ಲಿ ಆಕೆಗೆ ಅವನ ನಡವಳಿಕೆ ಸರಿ ಕಾಣಿಸದೇ ಹೋದರೆ ಒಂದು ತಿಂಗಳ ನೋಟಿಸ್ ನಂತರ ಯಾವಾಗ ಬೇಕಾದರೂ ಈ ಒಪ್ಪಂದದಿಂದ ಹೊರಬರಬಹುದು. 
  • ಐದನೇ ಷರತ್ತಿನ ಪ್ರಕಾರ, ಮಹಿಳೆಯು ಲೀವಿಂಗ್‌ ಪಾರ್ಟನರ್ಗೆ ಯಾವುದೇ ಮಾನಸಿಕ ಸಂಕಟ, ಕಿರುಕುಳ ಕೊಡಬಾರದು
  • ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ ಇದಕ್ಕೆ ಲೀವಿಂಗ್  ಪಾರ್ಟನರ್ ಜವಾಬ್ದಾರನಾಗುವುದಿಲ್ಲ, ಮಗು ಆಕೆಯದ್ದೇ ಜವಾಬ್ದಾರಿ 
  • ಈ ಅವಧಿಯಲ್ಲಿ ಈ ಸಂಬಂಧದಿಂದ ಪುರುಷನಿಗೆ ಮಾನಸಿಕ ಆಘಾತ ಉಂಟಾದರೆ, ಇದರಿಂದ ಆತನ ಜೀವನ ಹಾಳಾದರೆ ಅದಕ್ಕೆ ಮಹಿಳೆಯೇ ಜವಾಬ್ದಾರಿ
  • ಹೀಗೆ ವ್ಯಕ್ತಿ ಕ್ಷೇಮವನ್ನು ಮಾತ್ರ  ಗಮನದಲ್ಲಿಟ್ಟುಕೊಂಡು ಈ 7 ಷರತ್ತುಗಳಿರುವ ಲೀಂವಿಂಗ್ ರಿಲೇಷನ್‌ ಶಿಪ್ ಅಗ್ರಿಮೆಂಟ್ ಅನ್ನು ಸಿದ್ಧಪಡಿಸಲಾಗಿದೆ. 


ಅಗ್ರಿಮೆಂಟ್‌ನಲ್ಲಿರುವ ಸಹಿ ನನ್ನದಲ್ಲ ಎಂದ ಮಹಿಳೆ

ಆದರೆ ಈ ಲೀವಿಂಗ್ ರಿಲೇಷನ್‌ ಶಿಪ್ ಅಗ್ರಿಮೆಂಟ್‌ನಲ್ಲಿರುವ ಸಹಿ ನನ್ನದಲ್ಲ ಎಂದು 29 ವರ್ಷದ ಮಹಿಳೆ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಈಗ ಮುಂಬೈ ನ್ಯಾಯಾಲಯವೂ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರಿ ನೌಕರನಿಗೆ ಅಗಸ್ಟ್ 29ರವರೆಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಹೀಗಾಗಿ ಪೊಲೀಸರು ಈಗ ಈ ಲೀವಿಂಗ್ ರಿಲೇಷನ್ ಶಿಪ್ ಒಪ್ಪಂದ ಎಂದು ಕರೆಯಲ್ಪಡುವ ದಾಖಲೆಯ ನಿಜಾಂಶದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. 

ಮದ್ವೆ ಆದ್ರೂ ಸಿಂಗಲ್ ಲೈಫ್, ವೀಕೆಂಡಲ್ಲಿ ಮಾತ್ರ ಗಂಡ -ಹೆಂಡ್ತಿ! ಸಂಬಂಧದಲ್ಲಿ ಹೊಸ ಟ್ರೆಂಡ್!

ತನ್ನ ಲೀವಿಂಗ್ ಪಾರ್ಟನರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಹಾಗೂ ಜೊತೆಯಾಗಿ ವಾಸಿಸುತ್ತಿದ್ದ ಸಮಯದಲ್ಲಿ ಹಲವು ಬಾರಿ ಅವರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ.  ಆದರೆ ಆರೋಪಿ ವ್ಯಕ್ತಿ ಪರ ವಾದ ಮಂಡಿಸಿದ ವಕೀಲ ಇದೊಂದು ಪ್ರಾಡ್ ಎಂದು ಹೇಳಿದ್ದಾರೆ.  ತನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರು ಕೆಲ ಪರಿಸ್ಥಿತಿಗಳಿಗೆ ಸಿಲುಕಿ ತೊಂದರೆಗೊಳಗಾಗಿದ್ದಾರೆ. ಅವರು ಲಿವ್ ಇನ್ ಸಂಬಂಧದಲ್ಲಿದ್ದರು. ಹಾಗೂ ಇದಕ್ಕೆ ಇಬ್ಬರ ಒಪ್ಪಿಗೆಯೂ ಇತ್ತು. ಇದಕ್ಕಾಗಿ ಒಪ್ಪಂದವನ್ನು ಮಾಡಲಾಗಿದ್ದು,ಇದಕ್ಕೆ ಮಹಿಳೆ ಸಹಿಯನ್ನು ಹಾಕಿದ್ದಾರೆ ಎಂದು ವ್ಯಕ್ತಿ ಪರ ವಕೀಲ ಸುನೀಲ್ ಪಾಂಡೆ ನ್ಯಾಯಾಲಯಕ್ಕೆ ಹೇಳಿದ್ದಾರೆ. 

ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು

Latest Videos
Follow Us:
Download App:
  • android
  • ios