ಕೊಳಲು ನುಡಿಸಿ ಕೃಷ್ಣನಾದ ಪೊಲೀಸ್ ಪೇದೆ ಕೊಳಲಿನಲ್ಲಿ ಸಂದೇಶ್‌ ಆತೇ ಹೈ ಹಾಡನ್ನು ನುಡಿಸಿದ ಪೇದೆ ಮುಂಬೈ ಪೊಲೀಸ್ ಪೇದೆಯ ಸುಶ್ರಾವ್ಯ ಗಾಯನಕ್ಕೆ ನೆಟ್ಟಿಗರು ಫಿದಾ

ಮಹಾರಾಷ್ಟ್ರ: ಮುಂಬೈನ ಪೊಲೀಸ್ ಪೇದೆಯೊಬ್ಬರು 1997ರ ಖ್ಯಾತ ಚಲನಚಿತ್ರ ಬಾರ್ಡರ್‌ ನ ಖ್ಯಾತ ಹಾಡು ಸಂದೇಸೆ ಆತೇ ಹೈ ಟ್ಯೂನ್ ಅನ್ನು ಕೊಳಲಿನಲ್ಲಿ ನುಡಿಸಿದ್ದಾರೆ. ಕೊಳಲಿನಲ್ಲಿ ಸುಶ್ರಾವ್ಯವಾಗಿ ಮೂಡಿಬಂದ ಈ ಹಾಡು ನೆಟ್ಟಿಗರ ಹೃದಯ ಗೆದ್ದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರತಿಭೆಯ ವಿಷಯಕ್ಕೆ ಬಂದರೆ, ನಮ್ಮ ದೇಶದಲ್ಲಿ ಪ್ರತಿಭೆಗೇನು ಕೊರತೆಯಿಲ್ಲ. ಅದು ಅನೇಕ ಬಾರಿ ಸಾಬೀತಾಗಿದೆ. ಸದಾ ಬ್ಯುಸಿ ಆಗಿರುವ ಪೊಲೀಸ್ ಇಲಾಖೆಯಲ್ಲಿಯೂ ಸಾಕಷ್ಟು ಪ್ರತಿಭೆ ಅಡಗಿರುವ ಅಧಿಕಾರಿಗಳು ಇದ್ದಾರೆ. ಹಾಗೆಯೇ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಮುಂಬೈ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು 1997ರ ಚಲನಚಿತ್ರ ಬಾರ್ಡರ್‌ನ ಜನಪ್ರಿಯ ಹಾಡಾದ ಸಂದೇಸೆ ಆತೇ ಹೈ ಹಾಡನ್ನು ಕೊಳಲಿನಲ್ಲಿ ನುಡಿಸುವುದನ್ನು ಕಾಣಬಹುದು. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ವಡಾಲಾ ಮಾಟುಂಗಾ ಸಿಯಾನ್ ಫೋರಂ ಎಂಬ ಪುಟದಿಂದ ಪೋಸ್ಟ್ ಮಾಡಲಾಗಿದೆ.

Scroll to load tweet…

ಈಗ ವೈರಲ್ ಆಗಿರುವ ವೀಡಿಯೊವನ್ನು ಮೇ 8 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 2 ನಿಮಿಷಗಳ ಈ ವಿಡಿಯೋವನ್ನು ಹೆಸರು ತಿಳಿಯದ ಪೊಲೀಸ್‌ ಕಾನ್ಸ್‌ಟೇಬಲ್ ಒಬ್ಬರು ಕೊಳಲಿನಲ್ಲಿ ಸಲೀಸಾಗಿ ನುಡಿಸಿದ್ದಾರೆ. ಅವರು ಈ ಹಾಡನ್ನು ನುಡಿಸುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮುಂಬೈನ ( Mumbai) ವಡಾಲಾದ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿ (Rafi Ahmed Kidwai Marg) ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವೀಡಿಯೊವನ್ನು ಸುಮಾರು 32 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಆಲಿಯಾ ಭಟ್‌ ತರ ಮಿಮಿಕ್ ಮಾಡಿ ಪಿಜ್ಜಾ ತರಿಸಿಕೊಂಡ ಯುವತಿ


ಬೀದಿ ಬದಿಯ ಪ್ರತಿಭೆ

ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತು ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ಅವರ ಖತ್ರೋನ್ ಕೆ ಖಿಲಾಡಿ ಚಿತ್ರದ ತುಮ್ಸೆ ಬನಾ ಮೇರಾ ಜೀವನ್‌ ಹಾಡನ್ನು ತಮ್ಮ ಮಧುರವಾದ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದು, ಇವರ ಕಂಠಸಿರಿಗೆ ನೋಡುಗರು ತಲೆದೂಗುತ್ತಿದ್ದಾರೆ. ಹೌದು ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಮತ್ತು ಅದೃಷ್ಟವಶಾತ್, ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಈಗ ಒಬ್ಬ ವ್ಯಕ್ತಿಗೆ ಅವನ/ಅವಳ ಕೌಶಲ್ಯಗಳನ್ನು ಪ್ರದರ್ಶಿಸಲು ಸುಲಭ ವೇದಿಕೆ ಒದಗಿಸಿರುವುದರಿಂದ ನಮ್ಮ ಪ್ರತಿಭೆಗೆ ಅವಕಾಶ ಇಲ್ಲ ಎಂದು ನೊಂದುಕೊಳ್ಳುವ ಸನ್ನಿವೇಶವಿಲ್ಲ. ಪ್ರತಿಭೆ ಇದ್ದವರು ತಮಗೆ ತಾವೇ ವೇದಿಕೆಯೊದಗಿಸಿಕೊಳ್ಳಬಹುದು.

ಎಲೆಮರೆಯ ಪ್ರತಿಭೆ: ಟ್ರಕ್‌ ಚಾಲಕನ ಸುಮಧುರ ಕಂಠಕ್ಕೆ ನೆಟ್ಟಿಗರು ಫಿದಾ

ಹಾಗಾಗಿಯೇ 30 ವರ್ಷದ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು, ಅವರ ಹಾಡುವ ಕೌಶಲ್ಯದಿಂದ ಇಂಟರ್ನೆಟ್‌ನಲ್ಲಿ ಸೆನ್ಸೇಷನ್‌ ಸೃಷ್ಟಿ ಮಾಡಿದ್ದಾರೆ. ವೀಡಿಯೋದಲ್ಲಿ ಆ ವ್ಯಕ್ತಿ ರಸ್ತೆಯಲ್ಲಿ ನಿಂತು ಧರ್ಮೇಂದ್ರ ಅವರ ಖತ್ರೋನ್ ಕೆ ಖಿಲಾಡಿ ಚಿತ್ರದ 'ತುಮ್ಸೆ ಬನಾ ಮೇರಾ ಜೀವನ್‌' ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ವ್ಯಕ್ತಿ ಹಾಡುವುದನ್ನು ನೋಡಿ ರಸ್ತೆ ಬದಿ ನಡೆದು ಹೋಗುತ್ತಿರುವವರು ಕೂಡ ಕೆಲ ಕಾಲ ಅಲ್ಲೇ ನಿಂತು ಅವರ ಮಧುರ ಕಂಠವನ್ನು ಕೇಳಿಸಿಕೊಳ್ಳುತ್ತಿದ್ದಾರೆ.

ಈ ವೀಡಿಯೊವನ್ನು 24LiveAssam ಹೆಸರಿನ ಸುದ್ದಿ ಚಾನೆಲೊಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ 9.9 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಈ ಈ ವಿಡಿಯೋಗೆ 17,000 ಕ್ಕೂ ಹೆಚ್ಚು ಕಾಮೆಂಟ್‌ ಬಂದಿದೆ. ಈ ಹಾಡು ಹಾಡಿದ ವ್ಯಕ್ತಿ ಕೇವಲ ರೇಡಿಯೋ ಕೇಳುವ ಮೂಲಕ ಹಾಡುವುದನ್ನು ಕಲಿತಿದ್ದಾನೆ ಎಂದು ಹೇಳಲಾಗುತ್ತಿದೆ.