ಅಡುಗೆಯವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ ಎಂಬ ವಕೀಲರೊಬ್ಬರ ಪೋಸ್ಟ್ ವೈರಲ್ ಆಗಿದೆ. ಕೇವಲ ಅರ್ಧ ಗಂಟೆ ಕೆಲಸಕ್ಕೆ 18,000 ರೂಪಾಯಿ ಸಂಬಳ ಪಡೆಯುತ್ತಾರೆ.

ಮುಂಬೈ: ವಾಣಿಜ್ಯ ನಗರಿ ಮುಂಬೈನ ವಕೀಲರೊಬ್ಬರು ತಮ್ಮ ಅಡುಗೆಯವರ ಬಗ್ಗೆ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ತಮ್ಮ ಮನೆಗೆ ಅಡುಗೆ ಮಾಡಲು ಬರುವ ಕೆಲಸಗಾರರು ಪ್ರತಿದಿನ ಅರ್ಧ ಗಂಟೆ ಕೆಲಸಕ್ಕೆ ತಿಂಗಳಿಗೆ 18,000 ರೂಪಾಯಿ ಪಡೆಯುತ್ತಾರೆ. ಇದೇ ರೀತಿಯಾಗಿ ತಮ್ಮದೇ ಕಾಂಪ್ಲೆಕ್ಸ್‌ನಲ್ಲಿ 10 ರಿಂದ 12 ಮನೆಗಳಲ್ಲಿ ಪ್ರತಿದಿನ ಕೆಲಸ ಮಾಡುತ್ತಾರೆ. ಪ್ರತಿಯೊಂದು ಮನೆಯಲ್ಲಿ ದಿನಕ್ಕೆ ಕನಿಷ್ಠ 30 ನಿಮಿಷ ಕೆಲಸ ಮಾಡುತ್ತಾರೆ. ಉಚಿತ ಊಟ, ಚಹಾ ಸಿಗುತ್ತೆ. ಸರಿಯಾದ ಸಮಯಕ್ಕೆ ಸಂಬಳ ಸಿಗದಿದ್ದರೆ ವಿದಾಯ ಹೇಳದೆ ಹೊರಟು ಹೋಗುತ್ತಾರೆ ಎಂದು ವಕೀಲರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಂಬಳ ಪಡೆದುಕೊಳ್ಳಲು ತಾವು ಅರ್ಹರು

ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಇದು ಸುಳ್ಳು ಎಂದು ಕಮೆಂಟ್ ಮಾಡಿದ್ದಾರೆ. ಮುಂಬೈ ನಗರದಲ್ಲಿ ಅಡುಗೆ ಕೆಲಸದವರು ಇಂತಿಷ್ಟು ಸಂಬಳ ಬೇಕೆಂದು ಮೊದಲೇ ಡಿಮ್ಯಾಂಡ್ ಮಾಡುತ್ತಾರೆ. ಅಷ್ಟು ಸಂಬಳ ಪಡೆದುಕೊಳ್ಳಲು ತಾವು ಅರ್ಹರು ಎಂದು ಸಮರ್ಥಿಸಿಕೊಳ್ಳುತ್ತಾರೆ. ಅದೇ ರೀತಿಯಲ್ಲಿಯೂ ಅವರು ಕೆಲಸ ಮಾಡುತ್ತಾರೆ. ಈ ಕೆಲಸಗಾರರು ವೃತ್ತಿಬದ್ಧತೆಯನ್ನು ಹೊಂದಿರುತ್ತಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ಮನೆಗೆಲಸ ಮಾಡುವ ಮಹಿಳೆ ಅಥವಾ ಪುರುಷರು ಫೀಡ್‌ಬ್ಯಾಕ್ ಕೇಳಿಕೊಳ್ಳಲು ತಮ್ಮ ಹಿಂದಿನ ಮಾಲೀಕರ ನಂಬರ್ಸ್ ನೀಡುತ್ತಾರೆ. ಮುಂಜಾಗ್ರತ ಕ್ರಮವಾಗಿ ತಮ್ಮ ಆಧಾರ್ ಕಾರ್ಡ್ ಸೇರಿದಂತೆ ಇತರೆ ಮಾಹಿತಿಯನ್ನು ನೀಡಲು ಒಪ್ಪಿಕೊಳ್ಳುತ್ತಾರೆ. ಆದ್ರೆ ಸಂಬಳದಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದು ಮತ್ತೋರ್ವ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ತಿಂಗಳಿಗೆ 1.8 ರಿಂದ 2 ಲಕ್ಷ ರೂಪಾಯಿ ಸಂಬಳ

ವಕೀಲರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಓರ್ವ ನೆಟ್ಟಿಗರು, ನೀವೇರಾದ್ರೂ ಅಡುಗೆಯವರಿಗೆ ತಿಂಗಳಿಗೆ 18 ಸಾವಿರ ರೂ. ಸಂಬಳ ನೀಡುತ್ತೀರಾ? ಕಮೆಂಟ್ ಮಾಡಿ ಎಂದಿದ್ದಾರೆ. ವಕೀಲರು ನಾನು ಅಡುಗೆಯವರಿಗೆ ಅತ್ಯಧಿಕ ಸಂಬಳ ನೀಡುತ್ತಿದ್ದೆನಾ ಎಂಬ ಅನುಮಾನ ಮೂಡಿದೆ ಎಂದು ಕೊನೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸುವ ಮಹಿಳೆಯೊಬ್ಬರು, ಒಂದು ಮನೆಯಿಂದ 18 ಸಾವಿರ ರೂಪಾಯಿ ಅಂದ್ರೆ 10-12 ಮನೆಗೆ 1.8 ರಿಂದ 2 ಲಕ್ಷ ರೂಪಾಯಿ ಸಂಬಳ ಆಗುತ್ತೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Scroll to load tweet…

ಬೆಂಗಳೂರು ಮನೆಗೆಲಸದಾಕೆ ಕುಟುಂಬದ ಆದಾಯ 1 ಲಕ್ಷ ರೂಪಾಯಿ

ಇತ್ತೀಚೆಗೆ ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ಮನೆಗೆ ಕೆಲಸಕ್ಕೆ ಬರುವ ಮಹಿಳೆಯ ಕುಟುಂಬದ ಆದಾಯ ತಿಂಗಳಿಗೆ 1 ಲಕ್ಷ ರೂ.ಗೂ ಅಧಿಕ ಎಂದು ಕಮೆಂಟ್ ಮಾಡಿದ್ದರು. ಮಹಿಳೆ 10 ರಿಂದ 12 ಸಾವಿರ ಪಡೆಯುತ್ತಾರೆ. ಇದೇ ರೀತಿ ಮೂರರಿಂದ ನಾಲ್ಕು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಆಂದ್ರೆ ಮಹಿಳೆ ಸಂಬಳ ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಆಗುತ್ತದೆ. 

ಮಹಿಳೆ ಗಂಡ ಕೂಲಿ ಕಾರ್ಮಿಕನಾಗಿದ್ದು, ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ. ಮಹಿಳೆ ಮಗ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಮೂಲಕ 15 ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಮಗಳು ಟೈಲರಿಂಗ್ ತರಬೇತಿ ಪಡೆಯುತ್ತಿದ್ದು, ಆಕೆ ಇನ್ನೇನು ಕೆಲವೇ ದಿನಗಳಲ್ಲಿ ಕನಿಷ್ಠ 10 ಸಾವಿರ ರೂಪಾಯಿ ಸಂಪಾದಿಸಲಿದ್ದಾಳೆ ಎಂದು ಬರೆದುಕೊಂಡಿದ್ದರು.

ಈ ಕುಟುಂಬದ ಆದಾಯ ತಿಂಗಳ ಆದಾಯ 1 ಲಕ್ಷ ರೂಪಾಯಿ ಆಗುತ್ತದೆ. ಇವರೆಲ್ಲರೂ ಸಂಬಳವನ್ನು ನಗದು ರೂಪದಲ್ಲಿ ಪಡೆಯುತ್ತಾರೆ. ಹಾಗಾಗಿ ಯಾವುದೇ ಟ್ಯಾಕ್ಸ್ ಕಟ್ಟುವ ಅಗತ್ಯವಿರಲ್ಲ ಎಂದು ಪೋಸ್ಟ್ ಮಾಡಿಕೊಂಡಿದ್ದರು.