Asianet Suvarna News Asianet Suvarna News

ಗಣೇಶ ಚತುರ್ಥಿ ಹಬ್ಬಕ್ಕೆ 150 ವಿಶೇಷ ರೈಲು ಘೋಷಿಸಿದ ಕೇಂದ್ರ, ಜೂನ್ 27 ರಿಂದ ಬುಕಿಂಗ್ ಆರಂಭ!

ಸೆಪ್ಟೆಂಬರ್ 19ಕ್ಕೆ ಗಣೇಶ ಚತುರ್ಥಿ ಹಬ್ಬ. ಇದೀಗ ಸೆಂಟ್ರಲ್ ರೈಲ್ವೇ ಮಹತ್ವದ ಘೋಷಣೆ ಮಾಡಿದೆ. ಗಣೇಶ ಹಬ್ಬಕ್ಕಾಗಿ ವಿಶೇಷ 150 ರೈಲು ಘೋಷಿಸಿದೆ.ಜೂನ್ 27 ರಿಂದ ಬುಕಿಂಗ್ ಆರಂಭಗೊಳ್ಳಲಿದೆ.
 

Mumbai central railway announces 156 special train for Ganesh Chaturthi festival ckm
Author
First Published Jun 25, 2023, 8:49 PM IST

ಮುಂಬೈ(ಜೂ.25) ಗಣೇಶ ಚತುರ್ಥಿ ಹಬ್ಬಕ್ಕೆ ತಯಾರಿ ನಡೆಯುತ್ತಿದೆ.ಸೆಪ್ಟೆಂಬರ್ 19ಕ್ಕೆ ಗಣಪತಿ ಹಬ್ಬ. ದೇಶಾದ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಮುಂಬೈನಲ್ಲಿ ಗಣೇಶ ಹಬ್ಬ ವಿಶೇಷ. ಇದಕ್ಕಾಗಿ ಕೇಂದ್ರ ರೈಲ್ವೇ ವಿಭಾಗ 156 ವಿಶೇಷ ರೈಲು ಘೋಷಿಸಿದೆ.  ಈ ವಿಶೇಷ ರೈಲಿನ ಬುಕಿಂಗ್ ಜೂನ್ 27 ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಪ್ರಕಟಣೆಯಲ್ಲಿ ಹೇಳಿದೆ. ಮುಂಬ-ಸಾವಂತವಾಡಿ ರಸ್ತೆ ರೈಲು ಸೆಪ್ಟೆಂಬರ 12 ರಿಂದ ಅಕ್ಟೋಬರ್ 2ರವರೆಗೆ ಪ್ರತಿ ದಿನ ಸಂಚಾರ ಮಾಡಲಿದೆ. ಎರಡು ನಿಲ್ದಾಣಗಳಿಂದ ಎರಡು ರೈಲು ಪ್ರತಿದಿನ ಸಂಚಾರ ನಡೆಸಲಿದೆ. ಎಲ್‌ಟಿಟಿ-ಕುಡಲ್, ಪುಣೆ-ಕರ್ಮಾಲಿ, ಕುಡಲ್-ಪನ್ವೇಲ್-ಕರ್ಮಾಲಿ, ದಿವಾ-ರತ್ನಗಿರಿ, ಮುಂಬೈ-ಮಡಗಾಂವ್ ಸೇರಿದಂತೆ 156 ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೆಂಟ್ರಲ್ ರೈಲ್ವೇ ಹೇಳಿದೆ.

ಗಣೇಶ ಹಬ್ಬದ ಪ್ರಯುಕ್ತ ಈ ವಿಶೇಷ ರೈಲುಗಳು ಸಂಚಾರ ನಡೆಸಲಿದೆ. ಕೆಲ ರೈಲುಗಳು ಆಗಸ್ಟ್ ಅಂತ್ಯದಿಂದಲೇ ಆರಂಭಗೊಳ್ಳಲಿದೆ. ಪ್ರಯಾಣಿಕರು ಬುಕಿಂಗ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗಣೇಶ ಹಬ್ಬಕ್ಕಾಗಿ ತಮ್ಮ ಊರುಗಳಿಗೆ ತೆರಳಲು, ಪೂಜಾ ಕಾರ್ಯಕ್ರಮ, ಗಣೇಶನ ವಿಸರ್ಜನೆ ಸೇರಿದಂತೆ ಚತುರ್ಥಿ ಹಬ್ಬದಲ್ಲಿ ಪಾಲ್ಗೊಳ್ಳಲು ಈ ಅನುಕೂಲ ಮಾಡಲಾಗಿದೆ.

ಬೆಂಗಳೂರಿನಿಂದ ಕೇವಲ 6 ಗಂಟೆಗಳಲ್ಲಿ ಧಾರವಾಡ ತಲುಪಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಕೇಂದ್ರ ರೈಲ್ವೇ ಗಣೇಶ ಹಬ್ಬಕ್ಕೆ ವಿಶೇಷ ರೈಲು ಘೋಷಿಸಿದ್ದರೆ, ಕೇಂದ್ರ ಸರ್ಕಾರ ಜೂನ್ 27 ರಿಂದ ಬೆಂಗಳೂರು-ಧಾರವಾಡ  ನಡುವೆ ವಂದೇ ಭಾರತ್ ರೈಲು ಆರಂಭಿಸುತ್ತಿದೆ. ಈಗಾಗಲೇ ಬೆಂಗಳೂರು-ಧಾರವಾಡ ನಗರಗಳ ನಡುವೆ ‘ವಂದೇ ಭಾರತ್‌’ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ನಿಗದಿತ ಅವಧಿಗೂ ಮುಂಚಿತವಾಗಿ ಹುಬ್ಬಳ್ಳಿ, ಧಾರವಾಡಕ್ಕೆ ಆಗಮಿಸಿದ್ದು, ನೈರುತ್ಯ ರೈಲ್ವೆ ವಲಯದ ಅಧಿಕಾರಿ ವರ್ಗದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಜತೆಗೆ ಧಾರವಾಡ, ಬೆಂಗಳೂರು ಮಧ್ಯೆ ಪ್ರಯಾಣಿಸುವ ಜನರಿಗೆ ಈ ರೈಲಿನ ಪ್ರಯಾಣ ಸಮಯದ ಉಳಿತಾಯಕ್ಕೆ ನಾಂದಿ ಹಾಡಲಿದೆ. ಜೂ.26ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ರೈಲು ಚಾಲನೆ ದೊರೆಯಲಿದೆ.

ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟ ವಂದೇ ಭಾರತ್‌ ರೈಲು ಹುಬ್ಬಳ್ಳಿಗೆ 12.10ಕ್ಕೆ ಆಗಮಿಸಬೇಕಿತ್ತು. ಆದರೆ 11.40ಕ್ಕೆ ಆಗಮಿಸಿತ್ತು. ಇಲ್ಲಿಂದ ತೆರಳಿದ ಈ ರೈಲು 12.10ಕ್ಕೆ ಧಾರವಾಡ ತಲುಪಿತು. ಅರ್ಧಗಂಟೆ ಮುಂಚಿತವಾಗಿಯೇ ಧಾರವಾಡಕ್ಕೆ ತಲುಪಿತು. ಗಂಟೆಗೆ 110 ಕಿಮೀ ಸ್ಪೀಡ್‌ನಲ್ಲಿ ಸಂಚರಿಸಿರುವ ಈ ರೈಲು ಬೆಂಗಳೂರಿನಿಂದ ಧಾರವಾಡಕ್ಕೆ 487 ಕಿಮೀ ದೂರವನ್ನು ಕೇವಲ 6.10ಗಂಟೆಯಲ್ಲೇ ಕ್ರಮಿಸಿದೆ. ಹಾಗೆ ನೋಡಿದರೆ 6.55 ಗಂಟೆ ತೆಗೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿತು.

ಪ್ರಯಾಣಿಕರೇ ಹುಷಾರ್‌: ರೈಲಲ್ಲಾಗುವ ಕಳ್ಳತನಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಲ್ಲ ಎಂದ ಸುಪ್ರೀಂಕೋರ್ಟ್‌

ವಂದೇ ಭಾರತ್‌ ರೈಲು 7 ಚೇರ್‌ಕಾರ್‌ ಕೋಚ್‌ ಹಾಗೂ 1 ಎಕ್ಸಿಕ್ಯೂಟಿವ್‌ ಚೇರ್‌ ಕಾರ್‌ ಕೋಚ್‌ ಒಳಗೊಂಡಿದೆ. ಮಂಗಳವಾರ ಹೊರತು ಪಡಿಸಿ ಉಳಿದ ಆರು ದಿನ ವಂದೇ ಭಾರತ್‌ ಸಂಚಾರ ಇರಲಿದೆ. ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ದರ ಹಾಗೂ ಸಮಯ ನಿಗದಿಯನ್ನು ಇನ್ಮೇಲೆ ಅಂತಿಮಗೊಳಿಸಲಾಗುವುದು ಎಂದು ಇಲಾಖೆಯ ಮಹಾಪ್ರಬಂಧಕ ಸಂಜೀವ ಕಿಶೋರ್‌ ತಿಳಿಸಿದ್ದಾರೆ. ಜೂ. 26ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಉದ್ಘಾಟಿಸಲಿದ್ದಾರೆ.

Follow Us:
Download App:
  • android
  • ios