ಬೆಂಗಳೂರಿನಿಂದ ಕೇವಲ 6 ಗಂಟೆಗಳಲ್ಲಿ ಧಾರವಾಡ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ರಾಜ್ಯದಲ್ಲಿ ಬೆಂಗಳೂರಿನಿಂದ ಧಾರವಾಡ ನಗರಕ್ಕೆ ಪ್ರಾಯೋಗಿಕ ಸಂಚಾರ ಮಾಡಿದ ವಂದೇ ಭಾರತ್ ಎಕಸ್‌ಪ್ರೆಸ್ ರೈಲು ನಿಗದಿತ ವೇಳೆಗಿಂದ ಮುಂಚೆಯೇ ತಲುಪಿದೆ.
ಧಾರವಾಡ (ಜೂ.19): ರಾಜ್ಯದಲ್ಲಿ ಬೆಂಗಳೂರು- ಧಾರವಾಡ ನಗರಗಳ ನಡುವೆ ಪಗ್ರಾಯೋಗಿಕ ಸಂಚಾರ ಆರಂಭಿಸಲಾದ ವಂದೇ ಭಾರತ್ ರೈಲು ನಿಗದಿತ ಅವಧಿಗಿಂತ 40 ನಿಮಿಷ ಮುಂಚೆಯೇ ಧಾರವಾಡ ರೈಲು ನಿಲ್ದಾಣಕ್ಕೆ ಆಗಮಿಸಿದೆ. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿಯೇ ವಂದೇ ಭಾರತ್ ರೈಲು ಚಲಿಸಿದ್ದು, ಅತಿ ಕಡಿಮೆ ಅವಧಿಯಲ್ಲಿ ತಮ್ಮ ನಿಲ್ದಾಣ ತಲುಪಿದ ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ.
ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟ ವಂದೇ ಭಾರತ್ ರೈಲು ಧಾರವಾಡ ರೈಲು ನಿಲ್ದಾಣವನ್ನು 12.40ಕ್ಕೆ ತಲುಪಬೇಕಿತ್ತು. ಆದರೆ, 12.10ಕ್ಕೆ ರೈಲು ಧಾರವಾಡದ ನಿಲ್ದಾಣವನ್ನು ತಲುಪಿದೆ. ಅವಧಿಗೂ ಮುನ್ನವೇ ಆಗಮಿಸಿದ ವಂದೇ ಭಾರತ್ ರೈಲು. ನಿರೀಕ್ಷಿತ ವೇಳೆಗಿಂತ ಮುಂಚೆ ರೈಲು ಬಂದಿದ್ದು, ರೈಲು ಸಿಬ್ಬಂದಿ ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೋಮುಗಲಭೆ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ
ಇನ್ನು ಧಾಡವಾರ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಪ್ರಯಾಣಿಕರು ನೋಡಿ ಸಂಭ್ರಮಿಸುತ್ತಿದ್ದಾರೆ. ರೈಲಿನ ಬೋಗಿಯೊಳಗೆ ಹೋಗಿ ಖುಷಿಪಡುತ್ತಿರೋ ಜನರು. ಸಂಪೂರ್ಣವಾಗಿ ಹವಾನಿಯಂತ್ರಿ ವ್ಯವಸ್ಥೆಯಿಂದ (ಎ ಸಿ ಯಿಂದ) ಕೂಡಿರುವ ಟ್ರೈನ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ದಾರವಾಡ ರೇಲ್ವೆ ಸ್ಟೆಷನ್ ನಲ್ಲಿ ನಿಂತರ ರೈಲನ್ನು ಹತ್ತಿ ನೋಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನ ಹೇಳಿದ ಪ್ರಯಾಣಿಕರು.
ಸಾಮಾನ್ಯ ರೈಲಿಗಿಂತ ಸುಸಜ್ಜಿತ ವ್ಯವಸ್ಥೆ: ಟ್ರೈಯಲ್ ರನ್ ಮಾಡುತ್ತಿರುವ ವಂದೇ ಭಾರತ ಎಕ್ಸ್‌ಪ್ರಸ್ ರೈಲು ಸಾಮಾನ್ಯ ರೇಲ್ವೆಗಿಂತ ಇದೊಂದು ವಿಶೇಷತೆಯಿಂದ ಕೂಡಿದೆ. ಪುಲ್ ಎ ಸಿ ಯಿಂದ ಕೂಡಿದೆ. ನಮಗೆ ಬಹಳ ಖುಷಿ ಇದೆ. ಸದ್ಯ ಧಾರವಾಡದಿಂದ ಬೆಂಗಳೂರಿನತ್ತ ತೆರಳಿದ ವಂದೇ ಭಾರತ ರೈಲು ತಲುಪಿದೆ. ಎಲ್ಲವೂ ಅಟೋಮೇಟಿಕ್ ಆಗಿ ಓಪನ್ ಆಗುತ್ತಿರುವ ಬಾಗಿಲುಗಳು. ಎಲ್ಲವೂ ಸುಸಜ್ಜಿತವಾಗಿರುವ ಟ್ರೈನ್ ಆಗಿದೆ. ಸದ್ಯ ಪ್ರತಿ ಘಂಟೆಗೆ 140 ಕೀಮೀ ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿದೆ.
ಮಧ್ಯಾಹ್ನ ವಾಪಸ್ ಹೊರಡಲಿರುವ ರೈಲು: ಪ್ರಾಯೋಗಿಕ ಸಂಚಾರ ಪ್ರಾರಂಭಿಸಿದ ವಂದೇ ಭಾರತ್ ರೈಲು ಬೆಂಗಳೂರಿನಿಂದ ಬೆಳಗ್ಗೆ 5.5ಕ್ಕೆ ಪ್ರಾಯೋಗಿಕ ಸಂಚಾರ ಪ್ರಾರಂಭ ಮಾಡಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೆಜೆಸ್ಟಿಕ್, ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ ತಲುಪಲಿದೆ. ಬೆಳಿಗ್ಗೆ 5:45 ಕ್ಕೆ ಹೊರಟು ಧಾರವಾಡ ಮಧ್ಯಾಹ್ನ12:40 ಕ್ಕೆ ತಲುಪಲಿದೆ. ಮತ್ತೆ ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ವಾಪಸ್ ಬರಲಿದೆ. ಮಧ್ಯಾಹ್ನ 1:15ಕ್ಕೆ ಹೊರಟು ರಾತ್ರಿ 8:10 ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದೆ.
ಎರಡೇ ತಾಸಿನಲ್ಲಿ ಅರಸೀಕೆರೆ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು..!
ಇನ್ನೂ ದರ ನಿಗದಿಯಾಗಿಲ್ಲ: ಬೆಂಗಳೂರಿನಿಂದ ಒಟ್ಟು 487 .47 ಕಿಲೋಮೀಟರ್ ದೂರವಿರುವ ಧಾರವಾಡವನ್ನು ಕೇವಲ 6 ಗಂಟೆ 55 ನಿಮಿಷದಲ್ಲಿ ತಲುಪಲಿದೆ. ಆದರೆ, ಪ್ರಾಯೋಗಿಕ ಅವಧಿಯಲ್ಲಿ ಕೇವಲ 6 ಗಂಟೆ 10 ನಿಮಿಷದಲ್ಲಿ ತಲುಪಿದೆ. ವಂದೇ ಭಾರತ್ ರೈಲು 7 ಚೇರ್ ಕಾರ್ ಕೋಚ್ ಹಾಗೂ 1 ಎಕ್ಸಿಕ್ಯೂಟಿವ್ ಚೇರ್ ಕಾರ್ ಕೋಚ್ ಒಳಗೊಂಡಿದೆ. ಮಂಗಳವಾರ ಹೊರತು ಪಡಿಸಿ ಉಳಿದ 6 ದಿನ ವಂದೇ ಭಾರತ್ ಸಂಚಾರ ಇರಲಿದೆ. ವಂದೇಭಾರತ್ ಎಕ್ಸ್ ಪ್ರೆಸ್ ದರವನ್ನ ನೈಋತ್ಯ ರೈಲ್ವೆ ಇನ್ನೂ ನಿರ್ಧರಿಸಿಲ್ಲ. ಇದೇ ತಿಂಗಳು 26 ರಂದು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುವ ಸಾಧ್ಯತೆಯಿದೆ.