Asianet Suvarna News Asianet Suvarna News

ಹುದ್ದೆ ಬಿಡಲು ಒಪ್ಪದ ಪ್ರಾಂಶುಪಾಲೆ: ಚೇರ್ ಸಮೇತ ಹೊರ ನೂಕಿದ ಬಿಷಪ್ ಸ್ಕೂಲ್

ಶಿಕ್ಷಣ ಸಂಸ್ಥೆಗಳೆಂದರೆ ಮಕ್ಕಳಿಗೆ ಸರಿ ದಾರಿ ತೋರುವ ಜ್ಞಾನಕೇಂದ್ರಗಳು. ಆದರೆ ಇಲ್ಲೊಂದು ಕಡೆ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲೆಯನ್ನು ಹುದ್ದೆಯಿಂದ ಕಳೆಗಿಳಿಸಲು ಹೈಡ್ರಾಮಾ ನಡೆದಿದೆ.

multi crore UPPSC exam scam Prayagraj Bishop johnson girls School Principal refuses to step down what hapen next is highdrama video viral akb
Author
First Published Jul 6, 2024, 3:48 PM IST | Last Updated Jul 6, 2024, 3:51 PM IST

ಪ್ರಯಾಗರಾಜ್‌: ಶಿಕ್ಷಣ ಸಂಸ್ಥೆಗಳೆಂದರೆ ಮಕ್ಕಳಿಗೆ ಸರಿ ದಾರಿ ತೋರುವ ಜ್ಞಾನಕೇಂದ್ರಗಳು. ಆದರೆ ಇಲ್ಲೊಂದು ಕಡೆ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲೆಯನ್ನು ಹುದ್ದೆಯಿಂದ ಕಳೆಗಿಳಿಸಲು ಹೈಡ್ರಾಮಾ ನಡೆದಿದೆ. ಶಿಕ್ಷಕರು ಆಡಳಿತ ಮಂಡಳಿ ಎಲ್ಲರೂ ಸೇರಿ ಕುರ್ಚಿ ಮೇಲೆ ಕುಳಿತಿದ್ದ ಪ್ರಾಂಶುಪಾಲೆಯನ್ನು ಹೊರತಳ್ಳಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬಿಷಪ್ ಜಾನ್ಸನ್ ಗರ್ಲ್ಸ್‌ ಸ್ಕೂಲ್‌ನಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಶಾಲೆಯ ಇತರ ಸಿಬ್ಬಂದಿಯನ್ನು ಕರೆದುಕೊಂಡು ಪ್ರಿನ್ಸಿಪಾಲ್ ಕಚೇರಿಗೆ ಆಗಮಿಸಿದ ಶಿಕ್ಷಣ ಸಂಸ್ಥೆಯ ಛೇರ್‌ಮ್ಯಾನ್, ಕೂಡಲೇ ತಮ್ಮ ಸೀಟು ಬಿಟ್ಟು ಏಳುವಂತೆ ಪ್ರಾಂಶುಪಾಲರಿಗೆ ಮನವಿ ಮಾಡುತ್ತಾರೆ.  ಆದರೆ ಪ್ರಾಂಶುಪಾಲೆ ಇದಕ್ಕೆ ನಿರಾಕರಿಸಿದ್ದು, ಏನು ಮಾಡಿದರು ತಾವು ಕುಳಿತಿದ್ದ ಚೇರ್‌ನಿಂದ ಮೇಲೆಳಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆಡಳಿತ ಮಂಡಳಿ ಹಾಗೂ ಇತರ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಆಕೆಯ ಮೊಬಯಲ್ ಫೋನ್ ಅನ್ನು ಕಿತ್ತುಕೊಂಡಿದ್ದಲ್ಲದೇ ಕುಳಿತಿದ್ದ ಚೇರ್ ಸಮೇತ ಆಕೆಯನ್ನು ಹೊರಗೆ ನೂಕಿದ್ದಾರೆ. ಈ ವೇಳೆ ಪ್ರಾಂಶುಪಾಲೆ ಎದ್ದು ನಿಂತಿದ್ದಾರೆ. ಕ್ಷಣದಲ್ಲೇ ಪ್ರಿನ್ಸಿಪಾಲ್ ಚೇರನ್ನು ಎಳೆದುಕೊಂಡ ಇತರ ಸಿಬ್ಬಂದಿ ಹೊಸ ಪ್ರಿನ್ಸಿಪಾಲ್ ಎಂದು ನಿಯೋಜಿತಗೊಂಡಿದ್ದ ವ್ಯಕ್ತಿಗೆ ಛೇರ್‌ನತ್ತ ಕೈ ತೋರಿಸಿ ಆಸನವನ್ನು ಸ್ವೀಕರಿಸುವಂತೆ ಹೇಳುತ್ತಿದ್ದಾರೆ. 

ಖಾಸಗಿ ಶಾಲೆಗಳು ಡೋನೆಷನ್ ಪಡೆದರೆ‌ ಶಾಲಾ ಮಾನ್ಯತೆ ರದ್ದು: ಖಡಕ್ ಎಚ್ಚರಿಕೆ ಕೊಟ್ಟ ಸರ್ಕಾರ

ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಯಲ್ಲಿ ನಡೆದ  ಈ ನಾಟಕೀಯ ಬೆಳವಣಿಗೆಯ 2 ನಿಮಿಷದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಲಕ್ನೋ ಧರ್ಮಪ್ರಾಂತ್ಯವನ್ನು ಪ್ರತಿನಿಧಿಸುವ ಬಿಷಪ್ ಮಾರಿಸ್ ಎಡ್ಗರ್ ಡಾನ್ ಹೇಳುವ ಪ್ರಕಾರ, ಬಿಷಪ್ ಜಾನ್ಸನ್ ಗರ್ಲ್ಸ್‌ ಶಾಲೆಯೂ ಬಹುಕೋಟಿ ಮೊತ್ತದ ಹಗರಣದಲ್ಲಿ ಸಿಲುಕಿಕೊಂಡಿದೆ. (ಕಳೆದ ಫೆಬ್ರವರಿ 11ರಂದು ನಡೆದ ಉತ್ತರ ಪ್ರದೇಶ ಪಬ್ಲಿಕ್ ಸರ್ವೀಸ್ ಕಮೀಷನ್‌ನ(UPPSC) ಪರಿಶೀಲನಾ ಅಧಿಕಾರಿ (Review Officer) ಹಾಗೂ ಸಹಾಯಕ ಪರಿಶೀಲನಾ ಅಧಿಕಾರಿ  ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ) ಈ ಪೇಪರ್‌ ಲೀಕ್ ಹಗರಣದಲ್ಲಿ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ ಬಂಧಿಸಿದವರಲ್ಲಿ ಕಾಲೇಜಿನ ಸಿಬ್ಬಂದಿ ಜಸ್ವಂತ್ ಕೂಡ ಸೇರಿದ್ದಾರೆ. ಇದರ ಜೊತೆಗೆ ಕಾಲೇಜಿನ ಪ್ರಾಂಶುಪಾಲೆ ಪಾರೂಲ್ ಸೊಲೊಮನ್‌ ಅವರು ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅವರು ಹಗರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿರುವುದರಿಂದ ಅವರನ್ನು ತೆಗೆದು ಹಾಕಲು ಆಡಳಿತ ಮಂಡಳಿ ಮುಂದಾಗಿದೆ ಎಂದು ಎಡ್ಗರ್ ಡಾನ್ ಹೇಳಿದ್ದಾರೆ. 

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ; ಪೋಷಕರ ಪಾಲಿಗೆ ನುಂಗಲಾರದ ತುತ್ತು!

ಫೆಬ್ರವರಿ 11 ರಂದು ಪರೀಕ್ಷೆ ಆರಂಭವಾಗುವುದಕ್ಕೆ ಮೊದಲು ಪ್ರಯಾಗ್‌ರಾಜ್‌ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಉತ್ತರ ಪ್ರದೇಶದ ಎಸ್‌ಟಿಎಫ್ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿತ್ತು. ಬಂಧಿತರಲ್ಲಿ ಬಿಷಪ್ ಜಾನ್ಸನ್ ಗರ್ಲ್ಸ್‌ ಶಾಲೆಯಲ್ಲಿದ್ದ ಪರೀಕ್ಷ ಕೇಂದ್ರ ನಿರ್ವಾಹಕ ವಿನೀತ್ ಯಶ್ವಂತ್ ಕೂಡ ಸೇರಿದ್ದ. ಈ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವೂ ಮುಂಜಾನೆ 6.30ರ ಸುಮಾರಿಗೆ  ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಲೀಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲೆಯನ್ನು ಆಡಳಿತ ಮಂಡಳಿ ಸೇವೆಯಿಂದ ವಜಾಗೊಳಿಸಲು ಮುಂದಾದಾಗ ಈ ಹೈಡ್ರಾಮಾ ನಡೆದಿದೆ. ಪ್ರಾಂಶುಪಾಲೆ ಪಾರೂಲ್ ಸೊಲೊಮನ್‌ ಅವರನ್ನು ತೆಗೆದು ಹಾಕಿ ಅವರ ಸ್ಥಾನಕ್ಕೆ ಶೆರ್ಲಿ ಮಾಸ್ಸೆ ಅವರನ್ನು ನೇಮಕ ಮಾಡಲಾಗಿದೆ. 

ಆದರೆ ತಮ್ಮ ಸ್ಥಾನಕ್ಕೆ ಹೊಸ ಪ್ರಾಂಶುಪಾಲರು ಬರುತ್ತಿದ್ದರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಜಾಗೊಂಡಿದ್ದ ಪ್ರಾಂಶುಪಾಲೆ ಪಾರೂಲ್ ಸೊಲೊಮನ್ ಪ್ರಿನ್ಸಿಪಾಲ್ ಕಚೇರಿ ಒಳಗೆ ಹೋಗಿ ಬಾಗಿಲು ಹಾಕಿ ಒಳಗಿನಿಂದ ಲಾಕ್ ಮಾಡಿದ್ದರು. ಹೀಗಾಗಿ ಒತ್ತಾಯಪೂರ್ವಕವಾಗಿ ಬಾಗಿಲನ್ನು ತೆಗೆದು ನಂತರ ಸೊಲೊಮನ್ ಅವರನ್ನು ಚೇರ್‌ನಿಂದ ತಳ್ಳಿ ಹೊಸ ಪ್ರಾಂಶುಪಾಲರನ್ನು ಆ ಪೋಸ್ಟ್‌ನಲ್ಲಿ ಕೂರಿಸಲಾಗಿದೆ. ಘಟನೆಯ ಬಳಿಕ ವಜಾಗೊಂಡಿರುವ ಪ್ರಾಂಶುಪಾಲೆ ಪಾರೂಲ್ ಸೊಲೊಮನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆಕೆ ದೂರು ನೀಡಿದ್ದಾರೆ. ಆದರೆ ವೀಡಿಯೋಗಳಲ್ಲಿ ಲೈಂಗಿಕ ದೌರ್ಜನ್ಯದ ಉದ್ದೇಶವಿಲ್ಲ ಎಂದು ಶಾಲಾಡಳಿತ ಮಂಡಳಿ ವಿಡಿಯೋ ಸಮೇತ ಸಾಕ್ಷ್ಯ ನೀಡಿದೆ. 

ಇತ್ತ ಸೊಲೊಮನ್ ನೀಡಿದ ದೂರಿನ ಮೇರೆಗೆ ಎನ್ಎಲ್ ಡಾನ್, ಬಿಷಪ್ ಮಾರಿಸ್ ಎಡ್ಗರ್ ಡಾನ್, ವಿನಿತಾ ಇಸುಬಿಯಸ್, ಸಂಜೀತ್ ಲಾಲ್, ವಿಶಾಲ್ ನಾವೆಲ್ ಸಿಂಗ್, ಆರ್ ಕೆ ಸಿಂಗ್, ಅರುಣ್ ಮೋಜ್ಸ್, ತರುಣ್ ವ್ಯಾಸ್, ಅಭಿಷೇಕ್ ವ್ಯಾಸ್ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. ಇತ್ತ ಸೊಲೊಮನ್ ವಿರುದ್ಧ ಶಾಲೆಗೆ ಸಂಬಂಧಿಸಿದ 2.40 ಕೋಟಿ ಹಣವನ್ನು ನುಂಗಿದ ಆರೋಪವೂ ಇದೆ.

 

Latest Videos
Follow Us:
Download App:
  • android
  • ios