Asianet Suvarna News Asianet Suvarna News

ಅಚ್ಚೇದಿನ್.. 30 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆ

ಸುಮಾರು 3 ದಶಕಗಳ ಬಳಿಕ ಮೊದಲ ಬಾರಿಗೆ ಜಮ್ಮು- ಕಾಶ್ಮೀರದಲ್ಲಿ ಶಿಯಾ ಸಮುದಾಯದ ಜನರು ಮೊಹರಂ ಮೆರವಣಿಗೆ ನಡೆಸಿದ್ದಾರೆ. ಭಯೋತ್ಪಾದನೆ ಹೆಚ್ಚಾಗಿದ್ದ ಕಾರಣಕ್ಕೆ ಇಲ್ಲಿ ಮೊಹರಂ ಆಚರಣೆಯ ಮೆರವಣಿಗೆಗೆ ಆಡಳಿತ ನಿರ್ಬಂಧ ಹೇರಿತ್ತು. ಆದರೆ ಪರಿಚ್ಛೇದ 370ರ ರದ್ದತಿ ನಂತರ ಈಗ ಸಾಕಷ್ಟು ಸ್ಥಿತಿ ಸುಧಾರಿಸಿದ್ದು, ಮೊಹರಂ ಮೆರವಣಿಗೆಗೆ ಅನುವು ಮಾಡಿಕೊಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

Muharram procession in Kashmir after 30 years Muslim Shia community marched with high security akb
Author
First Published Jul 28, 2023, 7:55 AM IST

ಶ್ರೀನಗರ: ಸುಮಾರು 3 ದಶಕಗಳ ಬಳಿಕ ಮೊದಲ ಬಾರಿಗೆ ಜಮ್ಮು- ಕಾಶ್ಮೀರದಲ್ಲಿ ಶಿಯಾ ಸಮುದಾಯದ ಜನರು ಮೊಹರಂ ಮೆರವಣಿಗೆ ನಡೆಸಿದ್ದಾರೆ. ಭಯೋತ್ಪಾದನೆ ಹೆಚ್ಚಾಗಿದ್ದ ಕಾರಣಕ್ಕೆ ಇಲ್ಲಿ ಮೊಹರಂ ಆಚರಣೆಯ ಮೆರವಣಿಗೆಗೆ ಆಡಳಿತ ನಿರ್ಬಂಧ ಹೇರಿತ್ತು. ಆದರೆ ಪರಿಚ್ಛೇದ 370ರ ರದ್ದತಿ ನಂತರ ಈಗ ಸಾಕಷ್ಟು ಸ್ಥಿತಿ ಸುಧಾರಿಸಿದ್ದು, ಮೊಹರಂ ಮೆರವಣಿಗೆಗೆ ಅನುವು ಮಾಡಿಕೊಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ‘ರಾಜ್ಯದಲ್ಲಿ ಬೀದಿ ಹಿಂಸೆಯ ಕಾಲ ಅಂತ್ಯವಾಗಿದೆ. ಶಾಂತಿ ಮರಳತೊಡಗಿದೆ. ಅದರ ಸಂಕೇತವೇ ಮೊಹರಂ ಮೆರವಣಿಗೆ’ಎಂದು ಉಪರಾಜ್ಯಪಾಲ ಮನೋಜ್‌ ಸಿನ್ಹಾ ಬಣ್ಣಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ನಡೆಯುತ್ತಾ ಚುನಾವಣೆ ?: 5 ವರ್ಷದಿಂದ ಚುನಾಯಿತ ಸರ್ಕಾರವೇ ಇರಲಿಲ್ಲ..!

ಜಮ್ಮು- ಕಾಶ್ಮೀರ ಆಡಳಿತವು ಮೆರವಣಿಗೆಗೆ ಅವಕಾಶ ನೀಡಿದ್ದರಿಂದ ಗುರುವಾರ ನಗರದ ಗುರುಬಜಾರ್‌ನಿಂದ ದಾಲ್ಗೇಟ್‌ ಮಾರ್ಗದ ಮೂಲಕ ಲಾಲ್‌ಚೌಕ್‌ ಪ್ರದೇಶದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಮುಂಜಾನೆ 6 ರಿಂದ 8 ಗಂಟೆಯವರೆಗೆ ಆಚರಣೆಗೆ ಅವಕಾಶ ನೀಡಲಾಗಿತ್ತು. ‘ಈ ಮೆರವಣಿಗೆಗೆ ಅನುಮತಿ ನೀಡಬೇಕೆಂಬುದು ಶಿಯಾ ಸಮುದಾಯದ ಜನರ ಬಹುದಿನದ ಬೇಡಿಕೆಯಾಗಿತ್ತು. 33 ವರ್ಷಗಳ ಬಳಿಕ ಸರ್ಕಾರದ ಅನುಮತಿ ಮೇರೆಗೆ ಮೆರವಣಿಗೆ ನಡೆಸಲಾಗಿದೆ. ಈ ವೇಳೆ ಸೂಕ್ತ ಭದ್ರತ ವ್ಯವಸ್ಥೆಯನ್ನು ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

1990ರ ದಶಕದಲ್ಲಿ ಮೊಹರಂ ಸೇರಿದಂತೆ ಹಲವು ಮೆರವಣಿಗೆ ಭಾರತ ವಿರೋಧಿ ಚಟುವಟಿಕೆಯಾಗಿ ಬದಲಾಗಿತ್ತು. ಭಾರತ ವಿರೋಧಿ ಘೋಷಣೆ, ಸೇನೆ ಮೇಲೆ ಕಲ್ಲು ತೂರಾಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೆರವಣಿಯಲ್ಲಿ ಸಾಮಾನ್ಯವಾಗಿತ್ತು. ಗುಂಡಿನ ದಾಳಿ, ಬಾಂಬ್ ಸ್ಫೋಟ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದಿದೆ. ಹೀಗಾಗಿ ಜಿಲ್ಲಾಡಳಿತ ಮೊಹರಂ ಮೆರವಣಿಗೆ ಸೇರಿದಂತೆ ಇತರ ಕೆಲ ಮೆರವಣಿಗೆಯನ್ನು ನಿಷೇಧಿಸಿತ್ತು. 

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿ ಅರ್ಜಿ: ಆ.2ರಿಂದ ಸುಪ್ರೀಂಕೋರ್ಟ್‌ನಲ್ಲಿ ದಿನಾ ವಿಚಾರಣೆ

ಈ ನಡುವೆ ಮೊಹರಂ ಮೆರವಣಿಗೆಗೆ ಅನುಮತಿ ನೀಡಿದ್ದು ಸ್ವಾಗತಾರ್ಹ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಹರ್ಷಿಸಿದ್ದಾರೆ.

 

Follow Us:
Download App:
  • android
  • ios