Asianet Suvarna News Asianet Suvarna News

Rajasthan Politics:ಸಂಪುಟ ಪುನಾರಚನೆ ಕಸರತ್ತು, ರಾಜಸ್ಥಾನದ ಎಲ್ಲಾ ಸಚಿವರು ರಾಜೀನಾಮೆ!

  • ರಾಜಸ್ಥಾನದಲ್ಲಿ ಅತೀದೊಡ್ಡ ರಾಜಕೀಯ ಸರ್ಕಸ್
  • ಎಲ್ಲಾ ಮಂತ್ರಿಗಳು ರಾಜೀನಾಮೆ, ನಾಳೆ ಸಂಪುಟ ಪುನಾರಚನೆ
  • ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ಬಳಿಕ ನಿರ್ಧಾರ
Much awaited cabinet reshuffle All Rajasthan ministers tendered their resignations ckm
Author
Bengaluru, First Published Nov 20, 2021, 9:19 PM IST
  • Facebook
  • Twitter
  • Whatsapp

ಜೈಪುರ(ನ.20):  ರಾಜಸ್ಥಾನದ ಕಾಂಗ್ರೆಸ್(Rajasthan Congress) ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ, ವಿಸ್ತರಣೆ, ಬದಲಾವಣೆ ಮಾತುಗಳು ಕಳೆದ ಹಲವು ತಿಂಗಳುಗಳಿಂದ ಕೇಳಿಬರುತ್ತಿದೆ. ನಾಯಕತ್ವ ಬದಲಾವಣೆ ಕೂಗು ಮೊದಲು ಎದ್ದಿದ್ದು ಇದೇ ರಾಜಸ್ಥಾನದಲ್ಲಿ. ಆದರೆ ಪಂಜಾಬ್‌ನಲ್ಲಿ ದಿಢೀರ್ ನಾಯಕತ್ವ ಬದಲಾವಣೆ ಮಾಡಿದ ಕಾಂಗ್ರೆಸ್, ರಾಜಸ್ಥಾನದ ವಿಚಾರದಲ್ಲಿ ಮೌನವಾಗಿತ್ತು. ಇದೀಗ ಕೊನೆಗೂ ರಾಜಸ್ಥಾನ ಸಚಿವ ಸಂಪುಟ ಪುನಾರಚನೆಯಾಗುತ್ತಿದೆ(cabinet reshuffle). ಇದಕ್ಕೂ ಮುನ್ನ ರಾಜಸ್ಥಾನ ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. 

ರಾಜಸ್ಥಾನ ಸರ್ಕಾರದ ಎಲ್ಲಾ ಮಂತ್ರಿಗಳು ಮುಖ್ಯಮಂತ್ರಿಗೆ ರಾಜೀನಾಮೆ(ministers resignations) ಸಲ್ಲಿಸಿದ್ದಾರೆ. ಸಿಎಂ ಅಶೋಕ್(Ashok Gehlot) ಗೆಹ್ಲೋಟ್ ನೇತೃತ್ವದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ನಡೆಸಲಾಯಿತು. ಈ ಸಭೆ ಬಳಿಕ ಎಲ್ಲಾ ಸಚಿವರು ಗೆಹ್ಲೋಟ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾಳೆ(ನ.21) ಕ್ಯಾಬಿನ್ ರಿಶಫಲ್ ನಡೆಯಲಿದೆ. ಸಂಪುಟಪುನಾರಚನೆಯಿಂದ ಹಲವು ಹೊಸ ಮುಖಗಳು ರಾಜಸ್ಥಾನ ಸಂಪುಟ ಸೇರಿಕೊಳ್ಳಲಿದ್ದಾರೆ. ಇತ್ತ ಹಲವರಿಗೆ ಕೊಕ್ ನೀಡಲಾಗುತ್ತಿದೆ. ಹೀಗಾಗಿ ಎಲ್ಲಾ ಸಚಿವರು ರಾಜೀನಾಮೆ ನೀಡಲು ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

Rajasthan Congress| ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು!

ನಾಳೆ ಸಂಪುಟ ಪುನಾರಚನೆ ನಡೆಯಲಿದೆ. ನಾಳೆ ನಡೆಯಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಸಂಪುಟ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಹೀಗಾಗಿ ಸರ್ಕಾರದ ಎಲ್ಲಾ ಮಂತ್ರಿಗಳು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಾಜಸ್ಥಾನ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಈ ಬೆಳವಣಿಗೆ ಮೊದಲು  ರಾಜಸ್ಥಾನ ಸರ್ಕಾರದ ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ ರಘು ಶರ್ಮಾ, ಶಿಕ್ಷಣ ಸಚಿವ ಗೋವಿಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಈ ವೇಳೆ ಹರಿಯರಿಗೆ ಕೊಕ್ ನೀಡಿ ಯುವ ನಾಯಕರಿಗೆ ಅಶೋಕ್ ಗೆಹ್ಲೋಟ್ ಮಣೆ ಹಾಕಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. 

ನ.21ಕ್ಕೆ ರಾಜಸ್ಥಾನ ಕಾಂಗ್ರೆಸ್ ಕಚೇರಿಯಲ್ಲಿ ಪ್ರಧಾನ ಕಾಂಗ್ರೆಸ್ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, AICC ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್, ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜಸ್ಥಾನ ಸಂಪುಟಕ್ಕೆ ಹೊಸ ಸಚಿವರ ಆಯ್ಕೆ ನಡೆಯಲಿದೆ. ಬೆಳಗಿನ ಸಭೆಯಲ್ಲಿ ಮಂತ್ರಿಗಳ ಆಯ್ಕೆ ನಡೆಯಲಿದೆ. ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ರಾಜಸ್ಥಾನ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು: 9 ಸಚಿವ ಸ್ಥಾನ ನೀಡಲು ಪೈಲಟ್‌ ಬಣ ಪಟ್ಟು!

ರಾಜಸ್ಥಾನ ಸಂಪುಟ ಸೇರಲಿರುವ ನಾಯಕರು ಯಾರು ಅನ್ನೋ ಮಾಹಿತಿ ಇನ್ನೂ ಗೌಪ್ಯವಾಗಿದೆ. ಹಲವರ ಹೆಸರು ಕೇಳಿಬರುತ್ತಿದೆ. ಕೆಲ ಹಿರಿಯ ನಾಯಕರಿಗೆ ಕೊಕ್ ನೀಡಲಾಗುತ್ತಿದೆ ಅನ್ನೋ ಮಾತುಗಳಿವೆ. ಇದರಲ್ಲಿ ಸಚಿನ್ ಪೈಲೆಟ್ ಬಣಕ್ಕೆ ಸಿಂಹ ಪಾಲು ನೀಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ರಾಜಸ್ಥಾನ ಕಾಂಗ್ರೆಸ್ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಇದರ ನಡುವೆ ನಾಳೆ ಸಚಿನ್ ಪೈಲೆಟ್, ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸಚಿವ ಅಜಯ್ ಮಾಕೆನ್ ಭೇಟಿಯಾಗಲಿದ್ದಾರೆ. ಇದು ಎಲ್ಲರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. 

ರಾಜಸ್ಥಾನದಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಕೇಳಿ ಬಂದ ಬಳಿ, ಕರ್ನಾಟಕ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಮಾಡಿದೆ. ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣಗಳ ನಡುವೆ ಹಗ್ಗಜಗ್ಗಾಟ ಅಂತ್ಯಗೊಳಿಸಲು ಕಾಂಗ್ರೆಸ್ ಇದೀಗ ಸಂಪುಟ ಪುನಾರಚನೆ ಮಾಡುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Follow Us:
Download App:
  • android
  • ios