ನವದೆಹಲಿ(ಫೆ.11): ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸುತ್ತಿರುವ ಬಗ್ಗೆ ಭಾರತದಲ್ಲಿ ಸದ್ಯ ಭಾರೀ ವಿವಾದ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಭಾರತ ಸರ್ಕಾರ ರೈತ ಪ್ರತಿಭಟನೆ ಸಂಬಂಧ ಪೋಸ್ಟ್‌ ಮಾಡಲಾದ ಅಪಾಯಕಾರಿ ಟ್ವೀಟ್‌ಗಳ ಬಗ್ಗೆ ಟ್ವಿಟರ್‌ಗೆ ಎಚ್ಚರಿಕೆ ನೀಡಿತ್ತು. ಜೊತೆಗೆ ಇಂತಹ ವಿವಾದಾತ್ಮಕ ಟ್ವೀಟ್ ಮಾಡಿದ ಅಕೌಂಟ್‌ಗಳನ್ನು ನಿರ್ಬಂಧಿಸುವಂತೆ ನಿರ್ದೇಶಿಸಿತ್ತು. ಹೀಗಿರುವಾಗ ಗುರುವಾರ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಸಂಸತ್ತಿನಲ್ಲಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳ ಮೂಲಕ ಭಾರತೀಯ ಕಾನೂನು ಉಲ್ಲಂಘನೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಸಂಜಯ್ ಧ್ರೋತ್ರೆ ಇದಕ್ಕೆ ಉತ್ತರಿಸಿದ್ದಾರೆ.

ಸರ್ಕಾರಕ್ಕೆ ಟ್ವೀಟರ್‌ ಸಡ್ಡು: ಪ್ರಮುಖರ ಖಾತೆ ನಿರ್ಬಂಧಕ್ಕೆ ನಕಾರ!

ರಾಜೀವ್ ಚಂದ್ರಶೇಖರ್ ಕೇಳಿದ ಪ್ರಶ್ನೆ ಏನು?

ಪ್ರಶ್ನೆ 1: ಕೆಲ ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾಗಳು ಪೂರ್ವಾಗ್ರಹ ಪೀಡಿತರಾಗಿರುವುದು ಹಾಗೂ ಆರ್ಟಿಕಲ್ 19ನ್ನು ಉಲ್ಲಂಘಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?

ಪ್ರಶ್ನೆ 2: ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ಭಾರತೀಯ ಕಾನೂನುಗಳನ್ನು ಪಾಲಿಸುತ್ತಿವೆ, ಅವುಗಳ ಅಲ್ಗೋರಿದಂ ಹಾಗೂ ಮಾರ್ಗಸೂಚಿಗಳು ಭಾರತೀಯ ಕಾನೂನಿನ ಅನ್ವಯ ಇವೆ ಹಾಗೂ ಈ ಸಂವಿಧಾನದ 14ನೇ ವಿಧಿಯಡಿ ಎಲ್ಲಾ ಭಾರತೀಯ ನಾಗರಿಕರಿಗೆ ಸಮಾನವಾಗಿ ಅನ್ವಯವಾಗುತ್ತವೆ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಕ್ರಮ ವಹಿಸುತ್ತಿವೆಯಾ?

ಸರ್ಕಾರದ ಆದೇಶಕ್ಕೆ ತಲೆಬಾಗಿದ ಟ್ವಿಟರ್: 702 ಅಕೌಂಟ್‌ಗಳು ಪರ್ಮನೆಂಟ್ ಬ್ಯಾನ್!

ಕೇಂದ್ರ ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಸಂಜಯ್ ನೀಡಿದ ಉತ್ತರ ಹೀಗಿತ್ತು

ಹೌದು ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾಗಳು ಪೂರ್ವಾಗ್ರಹ ಪೀಡಿತವಾಗಿರುವ ಸಂಬಂಧ ಸಚಿವಾಲಯಕ್ಕೆ ಅನೇಕ ದೂರುಗಳು ಹಾಗೂ ಕೋರ್ಟ್‌ ಮೆಟ್ಟಿಲೇರಿರುವ ಪ್ರಕರಣಗಳು ಬಂದಿವೆ. ಇಂಟರ್ನೆಟ್ ಜೊತೆಗೆ ಸಾಮಾಜಿಕ ಹಾಗೂ ಡಿಜಿಟಲ್ ಮೀಡಿಯಾ ಸೌಲಭ್ಯದಿಂದಾಗಿ ಇಂದು ಪ್ರತಿಯೊಬ್ಬ ವ್ಯಕ್ತಿ ಕಂಟೆಂಟ್(ಸುದ್ದಿ) ಪೋಸ್ಟ್‌ ಮಾಡುವ ಕ್ಷಮತೆ ಹೊಂದಿದ್ದಾನೆ. ಹೀಗಾಗೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಡೇಟಾ ಉಳಿದುಕೊಳ್ಳುತ್ತದೆ. ಹೀಗಾಗೇ ಸೋಶಿಯಲ್ ಮೀಡಿಯಾದಲ್ಲಿ ಸಂವಿಧಾನದ ಆರ್ಟಿಕಲ್ 19 (2) ವಿಧಿಸಿದ ಕೆಲ ಷರತ್ತುಗಳನ್ನು ಉಲ್ಲೇಖಿಸುವಂತಹ ಸುದ್ದಿಗಳು ಪೋಸ್ಟ್‌ ಆಗುವ ಸಾಧ್ಯತೆಗಳಿವೆ.

ಸರ್ಕಾರ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ಭಾರತೀಯ ಕಾನೂನು ಪಾಲಿಸುತ್ತಿವೆ ಎಂಬುವುದನ್ನು ದೃಢಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಂಡಿದೆ. ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರಂಗಳು ಥರ್ಡ್‌ ಪಾರ್ಟಿ ಮಾಹಿತಿಗಾಗಿ ಐಟಿ ಸೆಕ್ಷನ್‌ನ, 2000 ಕ್ಕೊಳಪಡುತ್ತವೆ.

ಸೋಶಿಯಲ್ ಮೀಡಿಯಾಗಳನ್ನು ಜವಾಬ್ದಾರಿಯುತವಾಗಿಸಲು ನಿಯಮಗಳಲ್ಲಿ ತಿದ್ದುಪಡಿ ತರುತ್ತಿದೆ ಸರ್ಕಾರ

ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಅಧಿಸೂಚಿತ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳ ಮಾರ್ಗಸೂಚಿಗಳು) ನಿಯಮಗಳು, 2011ರಲ್ಲಿ ನೀಡಲಾದ ಮಾರ್ಗಸೂಚಿಯನ್ವಯ ಅವುಗಳೆಲ್ಲವೂ ಖಡ್ಡಾಯವಾಗಿ ನಿಯಮ ಪಾಲಿಸಬೇಕು. ಇದರಲ್ಲಿ ಪ್ಲಾಟ್‌ಫಾರ್ಮ್ ಮತ್ತು ಗೌಪ್ಯತೆ ನೀತಿ ನಿಯಮಗಳು ಮತ್ತು ಷರತ್ತುಗಳನ್ನು ಪ್ರಕಟಟಿಸಬೇಕೆಂಬುವುದೂ ಇದೆ. 

ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್‌: ಸಚಿವರ ಜತೆ ಮಾತುಕತೆಗೆ ಯತ್ನ!

ಯಾವುದೇ ರೀತಿಯಲ್ಲೂ ಬಳಕೆದಾರರಿಗೆ ಹಾನಿಕಾರಕ, ಆಕ್ಷೇಪಾರ್ಹ ಮತ್ತು ಕಾನೂನುಬಾಹಿರವಾದ ಮಾಹಿತಿಯನ್ನು ಹೋಸ್ಟ್ ಮಾಡಲು, ಪ್ರದರ್ಶಿಸಲು, ಅಪ್‌ಲೋಡ್ ಮಾಡಲು, ತಿದ್ದಲು, ಪ್ರಕಟಿಸಲು, ಪ್ರಕಟಿಸಲು, ನವೀಕರಿಸಲು ಅಥವಾ ಹಂಚಿಕೊಳ್ಳಲು ಪ್ಲಾಟ್‌ಫಾರಂಗಳು ಅವಕಾಶ ನೀಡುವುದಿಲ್ಲ ಎಂಬುವುದನ್ನು ಅಪೇಕ್ಷಿಸುತ್ತೇವೆ.

ಕಾಯಿದೆಯ ಸೆಕ್ಷನ್ 79 ರ ಅಡಿಯಲ್ಲಿ ಕೋರ್ಟ್‌ ಆದೇಶ ಅಥವಾ ಸರ್ಕಾರ ಅಥವಾ ಏಜೆನ್ಸಿಗಳಿಂದ ಸೂಚನೆ ಸಿಕ್ಕ ಬೆನ್ನಲ್ಲೇ ಸಂವಿಧಾನದ 19 (2) ನೇ ವಿಧಿಗೆ ಸಮಬಂಧಿಸಿದಂತೆ ಕಾನೂನುಬಾಹಿರ ವಿಷಯ(ಸುದ್ದಿ) ಪ್ಲಾಟ್‌ಫಾರಂಗಳು ತೆಗೆದು ಹಾಕಬೇಕು.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳನ್ನು ಭಾರತೀಯ ಕಾನೂನಿನೆಡೆ ಮತ್ತಷ್ಟು ಸೂಕ್ಷ್ಮತೆ ವಹಿಸಲು ಹಾಗೂ ಜಾಗೃತಗೊಳಿಸಲು ಈ ನಿಯಮಗಳಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಗುತ್ತಿದೆ. ಈ ನಿಯಮಗಳು ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರಂಗಳು ಜವಾಬ್ದಾರಿಯುತವಾಗಿ ನೀತಿ ಸಂಹಿತೆಯನ್ನು ಅನುಸರಿಸುವಂತೆ ಮಾಡಲಿವೆ.